ಸ್ಪೀಕರ್ ಯು.ಟಿ ಖಾದರ್‌ಗೆ ಸಚಿವಾಲಯದಿಂದ ಐಷಾರಾಮಿ ಕಾರು: ಬೆಲೆ ಎಷ್ಟು? ವಿಶೇಷತೆ ಏನು?
ಮಂಗಳೂರು, ಫೆಬ್ರವರಿ 14: ಮಂಗಳೂರು ಕ್ಷೇತ್ರದ ಶಾಸಕ , ಸ್ಪೀಕರ್ ಯು.ಟಿ ಖಾದರ್ ಅವರಿಗೆ ಹೊಸ ಕಾರು ಆಗಮಿಸಿದೆ. ಕಪ್ಪು ಬಣ್ಣದ ಫಾರ್ಚೂನರ್ ಕಾರು ಯುಟಿ ಖಾದರ್ ಅವರಿಗೆ ಸಚಿವಾಲಯ ಕಲ್ಪಿಸಿದ್ದು, ಸುಮಾರು ನಲ್ವತ್ತೊಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಕಾರ್‌ಗೆ ಐಷಾರಾಮಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಬಹಳ ಅಬ್ಬರ ಕಾಣುವ ಫಾರ್ಚೂನರ್ ಕಾರು ಹಲವು ವಿನ್ಯಾಸಗಳೊಂದಿಗೆ ಮಾರ್ಪಾಟು ಮಾಡಲಾಗಿದೆ. ಕಾರಿನ ಮುಂಭಾಗ ಮತ್ತು ಹಿಂಭಾಗ ಗಂಡಭೇರುಂಡ ಲಾಂಭನ ಇದ್ದು ಈ ಲಾಂಭವನ್ನು ಕೇವಲ ರಾಜ್ಯಪಾಲರು ಮತ್ತು ಸ್ಪೀಕರ್ ಮಾತ್ರ ಬಳಸಬಹುದಾಗಿದೆ. ಆಕರ್ಷಕ ಎಲ್ ಇಡಿ ಬಲ್ಬ್ ಗಳು, ಮುನ್ನೂರ ಅರವತ್ತು ಡಿಗ್ರಿ ಕ್ಯಾಮೆರಾ, ಕಾರಿನವೊಳಗೆ ಹನ್ನೊಂದು ಜೆಬಿಎಲ್ ಸ್ಪೀಕರ್, ಎಂಟು ಇಂಚಿನ ಟಚ್ ಸ್ಕ್ರೀನ್ ವ್ಯವಸ್ಥೆ ಹೊಂದಿದೆ.

ಎಂಟು ಮಂದಿ ಆರಾಮವಾಗಿ ಪ್ರಯಾಣಿಸಬಹುದಾದ ಫಾರ್ಚೂನರ್ ಕಾರ್ ಸುಖಕರ ಪ್ರಯಾಣಕ್ಕೆ ಹೆಸರುವಾಸಿಯಾಗಿದ್ದು, ಸುರಕ್ಷಿತ ಕಾರು ಎಂಬುವುದಕ್ಕೆ ಪ್ರಸಿದ್ಧಿ ಯಾಗಿದೆ. ಮಾರುಕಟ್ಟೆಯಲ್ಲಿ ಕಪ್ಪು ಬಣ್ಣದ ಫಾರ್ಚೂನರ್ ಕಾರಿಗೆ ಬಹಳ ಬೇಡಿಕೆಯಿದ್ದು, ಉದ್ಯಮಿಗಳ ಮೋಸ್ಟ್ ಫೇವರೇಟ್ ಕಾರ್ ಇದಾಗಿದೆ.
ಫಾರ್ಚೂನರ್ ಪೆಟ್ರೋಲ್ ಕಾರಿನ ಬೆಲೆ 33.43 ಲಕ್ಷ ರೂಪಾಯಿ, ಡಿಸೇಲ್ ಕಾರಿನ ಬೆಲೆ 35.94 ರಿಂದ 55.44 ಲಕ್ಷ ರೂಪಾಯಿಯಾಗಿದೆ. ಆದರೆ ಸ್ಪೀಕರ್ ಖಾದರ್ ಕಾರಿಗೆ ಹಲವು ವಿನ್ಯಾಸಗಳನ್ನು ಮಾಡಿರುವುದರಿಂದ ಕಾರಿಗೆ 41 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಸಚಿವಾಲಯ ಹೇಳಿದೆ.












Click it and Unblock the Notifications