ಮಂಗಳೂರು: ಸಮುದ್ರ ಮಧ್ಯೆ ಸುಟ್ಟು ಕರಕಲಾದ ಬೋಟ್
ಮಂಗಳೂರು, ನವೆಂಬರ್ 7: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ವೊಂದು ಸಮುದ್ರ ಮಧ್ಯೆ ಸುಟ್ಟು ಬೂದಿಯಾದ ಘಟನೆ ಮಂಗಳೂರು ಬಳಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಬಜಾಲ್ ನಿವಾಸಿ ಜೆಸ್ವಿ ಎಂಬುವರಿಗೆ ಸೇರಿದ 'ಮೀನ' ಹೆಸರಿನ ಬೋಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದ್ದು, ಬೋಟಿನಲ್ಲಿದ್ದ ಹತ್ತು ಜನ ಸಿಬ್ಬಂದಿಯನ್ನು ರೈಸಿಂಗ್ ಲಾರ್ಡ್ ಹೆಸರಿನ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.

ಬಳಿಕ ಸುಟ್ಟು ಹೋದ ಬೋಟನ್ನು ಧಕ್ಕೆಗೆ ಎಳೆದು ತರಲಾಗಿದೆ. ಬೋಟ್ ಬೆಂಕಿಗೆ ಆಹುತಿಗೆ ಆಗಿದ್ದರಿಂದ ಸುಮಾರು 50 ಲಕ್ಷ ರು. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications