ಅಪ್ರಾಪ್ತೆ ಮೇಲೆ ಕ್ಯಾಮರಾಮನ್ ನಿಂದ ಅತ್ಯಾಚಾರ
ಖಾಸಗಿ ಚಾನೆಲ್ ವೊಂದರಲ್ಲಿ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿರುವ ತೊಕ್ಕೊಟ್ಟು ಕಾಪಿಕಾಡಿನ ಅನೂಪ್ ಜೋಗಿ ಎಂಬ 28 ವರ್ಷದ ಯುವಕ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಂಗಳೂರು, ಮಾರ್ಚ್ 24: ಸಮಾಜದಲ್ಲಿ ನಡೆಯುವ ಅನಿಷ್ಟಗಳನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಸುವ ಜೃತಿ ಮೂಡಿಸಬೇಕಿದ್ದ ಛಾಯಾಗ್ರಾಹಕನೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಖಾಸಗಿ ಚಾನೆಲ್ ವೊಂದರಲ್ಲಿ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿರುವ ತೊಕ್ಕೊಟ್ಟು ಕಾಪಿಕಾಡಿನ ಅನೂಪ್ ಜೋಗಿ ಎಂಬ 28 ವರ್ಷದ ಯುವಕ ಅತ್ಯಾಚಾರ ಎಸಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.[ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯ]

ಪ್ರಕರಣದ ಆರೋಪಿಯಾದ ಅನೂಪ್ ಜೋಗಿ 9ನೇ ತರಗತಿ ಕಲಿಯುತ್ತಿರುವ ಹರೇಕಳದ ವಿದ್ಯಾರ್ಥಿನಿಯನ್ನು ನಂಬಿಸಿ ಅವಳ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ.[ಬೆಂಗಳೂರಲ್ಲಿ ಕಾರಲ್ಲಿ ಓಡಾಡೋದೂ ಅಪಾಯ!]
ಈತ ವಿದ್ಯಾರ್ಥಿನಿಯರ ಫೋಟೋ ತೆಗೆದು, ಅದನ್ನು ಖುದ್ದು ತಾನೇ ಹೋಗಿ ಅವರಿಗೆ ಒಪ್ಪಿಸಿ ಅವರ ಸ್ನೇಹ ಸಂಪಾದಿಸುತ್ತಿದ್ದ. ಈ ಅಪ್ರಾಪ್ತೆಯ ವಿಷಯದಿಂದಾಗಿ ಕ್ಯಾಮೆರಾಮನ್ ನ ಅಸಲಿ ವ್ಯಕ್ತಿತ್ವ ಏನು ಎಂಬುದು ಬಯಲಾಗಿದೆ. ಆರೋಪಿ ಅನೂಪ್ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದ್ದು, ಕೊಣಾಜೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.












Click it and Unblock the Notifications