ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಸಣ್ಣ ಬಲೆಗೆ ಬಿದ್ದ 400 ಕೆ.ಜಿ ಮೀನುಗಳ ರಾಶಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಕ್ಟೋಬರ್‌, 12: ಮಂಗಳೂರು ನಗರದ ಸುರತ್ಕಲ್ ಗೊಡ್ಡೆಕೊಪ್ಲ ಕಡಲ ತೀರದಲ್ಲಿ ಬುಧವಾರ ಬೆಳಗ್ಗೆ ಮೀನುಗಾರನೊಬ್ಬ ಹಾಕಿದ ಬಲೆಗೆ ರಾಶಿಗಟ್ಟಲೇ ಮೀನು ಬಿದ್ದಿವೆ. ಅದರಲ್ಲಿ ವಿವಿಧ ಬಗೆಯ ಮೀನುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಜೀವನ್ ಪಿರೇರಾ ಎಂಬ ಮೀನುಗಾರ ಹಾಕಿರುವ ಕೈರಂಪೊನಿ ಬಲೆಗೆ ಮೀನುಗಳ ರಾಶಿಯೇ ಬಿದ್ದಿರುವುದು ಗಮನ ಸೆಳೆದಿದೆ. ದಡದಿಂದ ಬೀಸುವ ಕೈರಂಪೊನಿ ಬಲೆಗೆ ಸುಮಾರು 400 ಕೆಜಿಯಷ್ಟು ಮೀನು ಬಿದ್ದಿದ್ದು, ಮೀನುಗಾರನಿಗೆ ಅದೃಷ್ಟ ಲಕ್ಷ್ಮಿಯೇ ಒಲಿದಂತಾಗಿದೆ‌. ಇವರು ಹಾಕಿರುವ ಕೈರಂಪೊನಿ ಬಲೆಗೆ ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ರಾಶಿಯೇ ಬಿದ್ದಿದೆ. ಮಾಂಜಿ, ಎಟ್ಟಿ ಮೀನುಗಳು ಸಣ್ಣ ಪ್ರಮಾಣದಲ್ಲಿ‌ ಬಲೆಗೆ ಬಿದ್ದಿದೆ. ಈ ರಾಶಿ ರಾಶಿ ಮೀನುಗಳನ್ನು ಕಂಡು ಜನರು ಖರೀದಿಗೆ ಮುಗಿಬಿದ್ದಿದ್ದಾರೆ.

ಸಲಿಂಗಕಾಮಕ್ಕೆ ಬಳಸಿಕೊಂಡು, ಹಣ ಕೇಳಿದ್ದಕ್ಕೆ ವೃದ್ಧನ ಕೊಲೆಗೈದ ಯುವಕಸಲಿಂಗಕಾಮಕ್ಕೆ ಬಳಸಿಕೊಂಡು, ಹಣ ಕೇಳಿದ್ದಕ್ಕೆ ವೃದ್ಧನ ಕೊಲೆಗೈದ ಯುವಕ

ಕೆ.ಜಿ. ತೊರಕೆ ಮೀನಿನ ಬೆಲೆ ಎಷ್ಟು?

ಇತ್ತೀಚೆಗೆ ಉಡುಪಿ ಕಡಲ ತೀರದಲ್ಲಿ ಮೀನಿನ ಸುಗ್ಗಿ ಕಂಡುಬಂದಿತ್ತು. ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದು ಜನರಿಗೆ ಆಶ್ಚರ್ಯವನ್ನು ಮೂಡಿಸಿತ್ತು. ಕಾಪು ಮಲಾರ್ ಕಡಲ ತೀರದಲ್ಲಿ ಬಲೆಗೆ 50 ಕೆಜೆ ಯಷ್ಟು ಗಾತ್ರದ ನೂರಾರು ತೊರಕೆ ಮೀನುಗಳು ಬಿದ್ದಿದ್ದು, ತೊರಕೆ ಮೀನುಗಳನ್ನು ನೋಡಲು ಜನಸಾಗರವೇ ನೆರೆದಿತ್ತು. ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಸಾಗಿದ ಮೀನುಗಾರರು, ಒಂದು ಕೆ.ಜಿಗೆ 250 ರಿಂದ 300 ರೂಪಾಯಿಯಷ್ಟು ಬೇಡಿಕೆ ಇದೆ.

400 kg fish caught in small net in Suratkal

ಬಲೆಗೆ ಬಿದ್ದಿದ್ದ ಅಪರೂಪದ ಮೀನುಗಳು

ಇನ್ನು ಇತ್ತೀಚೆಗಷ್ಟೇ ಪಕ್ಷಿಗಳಂತೆ ಹಾರುವ ಅಪರೂಪದ ಮೀನುಗಳು ಮೀನುಗಾರರು ಹಾಕಿದ್ದ ಬಲೆಗೆ ಬಿದ್ದಿದ್ದವು. ಹಾಗೂ ಮಂಗಳೂರಿನ ಧಕ್ಕೆಯ ಮೀನಿನ ರಾಶಿಯಲ್ಲಿ ಎರಡು ಹಾರುವ ಮೀನನ್ನು ಮೀನುಗಾರ ಲೋಕೇಶ್ ಬೆಂಗ್ರೆ ಎಂಬುವವರು ಪತ್ತೆ ಹಚ್ಚಿದರು. ಈ ಮೀನಿಗೆ ಆಂಗ್ಲ ಭಾಷೆಯಲ್ಲಿ ಫ್ಲೈಯಿಂಗ್ ಫಿಶ್ ಮತ್ತು ತುಳುವಿನಲ್ಲಿ ಪಕ್ಕಿಮೀನು ಎಂದು ಕರೆಯುತ್ತಾರೆ. ಈ ಮೀನುಗಳು ಹೆಚ್ಚಾಗಿ ಆಳಸಮುದ್ರದಲ್ಲಿ ಕಾಣಸಿಗುತ್ತವೆ. ಇವುಗಳಿಗೆ ಹಕ್ಕಿಗಳಂತೆ ರೆಕ್ಕೆ ಇದ್ದು, ಇವು ಸಮುದ್ರ ನೀರಿನಿಂದ ಮೇಲೆ ಬಂದು ಹಕ್ಕಿಗಳಂತೆ ಹಾರಾಡುವ ಸಾಮರ್ಥ್ಯ ಹೊಂದಿವೆ. ಈ ಮೀನುಗಳು ಮೀನುಗಾರರ ಬಲೆಗೆ ಬೀಳುವುದು ಅಪರೂಪವಾಗಿದೆ. ಇದೀಗ ಈ ಅಪರೂಪದ ಮೀನು ಮೀನುಗಾರರ ಬಲೆಗೆ ಬಿದಿದ್ದು ಅಚ್ಚರಿ ಮೂಡಿಸಿದೆ.

ಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯ

English summary
400 kg of fish were caught in small net on Suratkal Goddekopla shore sea, people of buying fish. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X