ಮಂಗಳೂರು ಕಮಿಷನರ್‌ಗೆ ಬಂತು 40 ರೌಡಿಗಳಿಂದ ಪತ್ರ: ಅದರಲ್ಲೇನಿತ್ತು?

Recommended Video

      ಮಂಗಳೂರು ಕಮಿಷನರ್‌ಗೆ 40 ರೌಡಿಗಳಿಂದ ಪತ್ರ | Dr. P S Harsha | Oneindia Kannada

      ಮಂಗಳೂರು, ಸೆಪ್ಟೆಂಬರ್ 16: ''ಇನ್ನುಮುಂದೆ ಇಂತಹ ತಪ್ಪುಗಳನ್ನು ಮಾಡಲು, ಕುಟುಂಬದವರ ಜೊತೆ ಸಂತೋಷದಿಂದ ಬದುಕಬೇಕು ಎಂದು ನಿರ್ಧರಸಿದ್ದೇನೆ , ದಯವಿಟ್ಟು ಯಾವುದಾಧರೂ ಕೆಲಸ ಕೊಡಿಸಿ ಸರ್'' ಹೀಗೆ ಒಂದಷ್ಟು ಅರ್ಜಿಗಳು ಪೊಲೀಸ್ ಠಾಣೆಗೆ ಬಂದಿದೆ.

      ಇದನ್ನು ಯಾರು ಬರೆದಿದ್ದಾರೆ ಗೊತ್ತಾ? ಒಟ್ಟು 40 ರೌಡಿಗಳಿಂದ ಪೊಲೀಸ್ ಕಮಿಷನರ್‌ಗೆ ಅರ್ಜಿಗಳು ಬಂದಿವೆ. ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್ ಹರ್ಷ ಅವರು ಇತ್ತೀಚೆಗೆ ರೌಡಿ ಪರೇಡ್‌ನಲ್ಲಿ ರೌಡಿಗಳಿಗೆ ಉದ್ಯೋಗದ ಆಫರ್ ನೀಡಿದ್ದರು ಅಲ್ಲಿಂದಲೇ ಠಾಣೆಗೆ ಅರ್ಜಿಗಳು ಬರಲು ಆರಂಭಿಸಿವೆ.

      ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 18 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರದಷ್ಟು ರೌಡಿಶೀಟರ್‌ಗಳಿದ್ದಾರೆ. ಅಕ್ರಮ ಜಾನುವಾರ ಸಾಗಣೆ, ಕೊಲೆ, ದರೋಡೆ, ಪ್ರಕರಣಗಳಲ್ಲಿ ಒಳಗಾದವರೇ ಹೆಚ್ಚಿದ್ದಾರೆ.

      40 Rowdy Sheeters Writes a Letter to Mangaluru Police Commissioner

      ಆಗಸ್ಟ್‌ ಕೊನೆವಾರದಲ್ಲಿ ನಡೆದ ಪರೇಡ್‌ನಲ್ಲಿ ಹರ್ಷ ಅವರು ಈ ಉದ್ಯೋಗದ ಆಫರ್ ನೀಡಿದ್ದರು. ಈ ಹೊಸ ಆಫರ್‌ನಲ್ಲೇನಿತ್ತು: ರೌಡಿ ಶೀಟರ್‌ಗಳು ತಮ್ಮ ಎಲ್ಲಾ ಕಸುಬನ್ನು ಬಿಟ್ಟು ಬದಲಾಗಬೇಕು, ನೆಮ್ಮದಿಯ ಬದುಕು ಅರಸಿಕೊಂಡು ಬರುವ ರೌಡಿಗಳಿಗೆ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದಿದ್ದರು.

      ಈ ಪರೇಡ್‌ನಲ್ಲಿ 300ಕ್ಕೂ ಅಧಿಕ ಮಂದಿ ರೌಡಿ ಶೀಟರ್‌ಗಳು ಬಂದಿದ್ದರು, ಆ ಪೈಕಿ 40ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಒಮ್ಮೆ ನೋಡಿ ವಿದ್ಯಾರ್ಹತೆ ಮೇಲೆ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+