ವಿಟ್ಲ : ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು
ವಿಟ್ಲ, ಫೆಬ್ರವರಿ 27 : ಇತ್ತೀಚೆಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕಂಬಳಬೆಟ್ಟುನಲ್ಲಿರುವ ತನ್ನ ಅಜ್ಜಿಯ ಮನೆಯಲ್ಲಿ ಮೃತಪಟ್ಟಿದ್ದಾಳೆ.
ಮಾಣಿ ಸಮೀಪದ ನೇರಳಕಟ್ಟೆ ನಿವಾಸಿ ಫಾಯಿಝಾ(15) ಕಳೆದ ಒಂದು ವಾರದ ಹಿಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಈಕೆಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆಗೆ ಸ್ಪಂದಿಸದ ಕಾರಣ ಕಂಬಳಬೆಟ್ಟುವಿನಲ್ಲಿರುವ ಫಾಯಿಝಾಳ ಅಜ್ಜಿ ಮನೆಗೆ ವಾಪಸ್ ಕರೆತರಲಾಗಿತ್ತು. ಆದರೆ, ಸೋಮವಾರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಮಾಣಿ ಕರ್ನಾಟಕ ಪ್ರೌಢ ಶಾಲೆಯ 9ನೆ ತರಗತಿಯ ವ್ಯಾಸಂಗ ಮಾಡುತ್ತಿದ್ದ ಫಾಯಿಝಾ ಪ್ರೇಮ ವೈಫಲ್ಯದಿಂದಾಗಿ ಕ್ರಿಮಿನಾಶಕ ಸೇವಿಸಿದ್ದಳು ಎನ್ನಲಾಗಿದೆ.












Click it and Unblock the Notifications