ಮಂಗಳೂರು: ಗ್ಲೈಡಿಂಗ್ ಸಾಹಸ ಕ್ರೀಡೆ ವೇಳೆ ಧರೆಗುರುಳಿದ ವಿಮಾನ

ಮಂಗಳೂರು, ನವೆಂಬರ್, 18: ನಗರದ 13ನೇ ಸೇನಾ ತುಕಡಿಯು ಮಂಗಳೂರಿನ ನೆಹರೂ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಗ್ಲೈಡಿಂಗ್ ಕಾರ್ಯಾಚರಣೆಯಲ್ಲಿ ಒಂದು ವಿಮಾನ ಯಶಸ್ವಿ ಹಾರಾಟ ನಡೆಸಿದರೆ, ಇನ್ನೊಂದು ವಿಮಾನ ಹಾರಿದ ಕೆಲವೇ ಕ್ಷಣಗಳಲ್ಲಿ ಧರೆಗುರುಳಿದೆ. ಪೈಲಟ್ ಎನ್‍ಕೆ ಸಂಜೀವ್ ಕುಮಾರ್ ಅಪಾಯದಿಂದ ಪಾರಾಗಿದ್ದಾರೆ.

ಯುವಕರನ್ನು ಸೇನೆಯತ್ತ ಆಕರ್ಷಿಸಲು ಭಾರತೀಯ ಸೇನೆ ಸಾಹಸಮಯ ಕಸರತ್ತುಗಳನ್ನು ಸಾರ್ವಜನಿಕರ ಮುಂದೆ ಆಗಾಗ ಪ್ರದರ್ಶಿಸುತ್ತದೆ. ಜೊತೆಗೆ ಸೇನೆಯ ಅಧಿಕಾರಿಗಳು ಮತ್ತು ವಿವಿಧ ದರ್ಜೆಯ ಸಿಬ್ಬಂದಿಗಳಿಗಾಗಿ ವೈಮಾನಿಕ ಮಾದರಿಯ ಸಾಹಸಿ ಕ್ರೀಡೆಯನ್ನು ಆಯೋಜಿಸಲಾಗಿತ್ತು. [ಬೆಂಗಳೂರಿನ ಕ್ಯಾಪ್ಟನ್ ಕೇಳಲಿದ್ದಾನೆ 'ವಿಕ್ರಮಾದಿತ್ಯ']

13th army corps orgaize competative air sport gliding at Mangaluru

ಧರೆಗುರುಳಿದ ವಿಮಾನ:

ಗ್ಲೈಡಿಂಗ್ ಒಂದು ಸಾಹಸಮಯ ಕ್ರೀಡೆಯಾಗಿದ್ದು, ಈ ಸಂದರ್ಭದಲ್ಲಿ ಎನ್ ಕೆ ಸಂಜೀವ್ ಕುಮಾರ್ ಅವರು ನಡೆಸುತ್ತಿದ್ದ ವಿಮಾನ ಏಕಾಏಕಿ ಧರೆಗುರುಳಿದೆ. ಮತ್ತೊಂದು ವೈಮಾನಿಕ ಪ್ರದರ್ಶನದ ಪೈಲಟ್ ಎನ್‍ ಕೆ.ಎ. ಸೆಲ್ವಂ ಕುಮಟಾದ ಕಡೆಗೆ ಗ್ಲೈಡಿಂಗ್ ನಡೆಸಿದ್ದಾರೆ. ಗ್ಲೈಡಿಂಗ್ ಕಾರ್ಯಾಚರಣೆ ಎಲ್ಲಾ ಸಂದರ್ಭದಲ್ಲಿಯೂ ಯಶಸ್ವಿಯಾಗುತ್ತದೆ ಎಂದು ಹೇಳಲಾಗದು.[ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು: ಇಲ್ಲಿದೆ ಪಟ್ಟಿ]

ವಾಯು ವೇಗವನ್ನು ನಿರ್ಧರಿಸಿ ನಡೆಸುವ ಗ್ಲೈಡಿಂಗ್‍ಗೆ ಹಾರುವ ದಿಕ್ಕಿನಲ್ಲಿ ವಾಯುವಿನ ಒತ್ತಡ ಕಡಿಮೆಯಾಗುತ್ತಿದ್ದಂತೆ ಮತ್ತೊಂದು ಕಡೆಗೆ ಸೆಳೆಯುತ್ತದೆ. ಅದರಿಂದಾಗಿಯೇ ಇಂದು ಎತ್ತರಕ್ಕೆ ಹಾರದೆ ನೆಲಕ್ಕುರುಳಿದೆ. ಇದು ಕೂಡಾ ಸಾಹಸದ ಭಾಗವೇ ಆಗಿದೆ ಎಂದು ಲೆಫ್ಟಿನೆಂಟ್ ಕರ್ನಲ್ ವಿಕೇಶ್ ಕುಮಾರ್ ಹೇಳಿದ್ದಾರೆ.

ಹ್ಯಾಂಗ್ ಗ್ಲೈಡಿಂಗ್ ಹಾಗೂ ಪವರ್ ಹಾರ್ನೆಸ್ ಹ್ಯಾಂಗ್ ಗ್ಲೈಡಿಂಗ್ (ಪಿಹೆಚ್ ಹೆಚ್ಚ್) ಎಂಬುದು ಜಗತ್ತಿನಲ್ಲೇ ಅತ್ಯಂತ ಸಾಹಸಮಯ ಹಾಗೂ ಅಪಾಯದ ಕ್ರೀಡೆಯಾಗಿದೆ. ದೇವಲಾಲಿ ಎಂಬಲ್ಲಿ ಮಾತ್ರವೇ ಈ ಕ್ರೀಡೆಯ ತರಬೇತಿ ಸಂಸ್ಥೆಯಿದೆ. ಗ್ಲೈಡಿಂಗ್ ಸ್ಪರ್ಧೆಯು ಮೊದಲು ಪ್ರಾರಂಭಗೊಂಡಿದ್ದು, 1920ರಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+