ಮೋದಿ ಪ್ರಮಾಣ ವಚನ; ಸುಳ್ಯದಲ್ಲಿ 10 ಸಾವಿರ ಲಡ್ಡು ರೆಡಿ
ಮಂಗಳೂರು, ಮೇ 30: ನರೇಂದ್ರ ಮೋದಿ ಎರಡನೇ ಅವಧಿಗೆ ಭಾರತ ಪ್ರಧಾನಿಯಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಸಂಭ್ರಮವನ್ನು ಆಚರಿಸಲು ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಈ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿತರಿಸಲು 10 ಸಾವಿರ ಲಡ್ಡುಗಳನ್ನು ಸಿದ್ಧಪಡಿಸಲಾಗಿದೆ. ಮೂರು ಸಾವಿರ ಚಹಾ ವಿತರಣೆ ನಡೆಯಲಿದೆ. ಮೋದಿ ಅಭಿಮಾನಿಗಳಾದ ದಿನೇಶ್ ಎ.ಎಸ್.ನೇತೃತ್ವದ ಅಮ್ಮ ಫ್ಲವರ್ ಸ್ಟಾಲ್, ಹರಿಪ್ರಸಾದ್ ಅವರ ಕೀರ್ತನ್ ಕೆಟರರ್ಸ್, ಸತ್ಯಪ್ರಸಾದ್ ಅವರ ಜ್ಯೋತಿ ಫ್ಲವರ್ ಸ್ಟಾಲ್, ರಾಂಪ್ರಸಾದ್ ಅವರ ಪೂರ್ಣಿಮಾ ಟ್ರಾವೆಲ್ಸ್ ಜಂಟಿಯಾಗಿ ಸಂಜೆ ಲಡ್ಡು ಮತ್ತು ಚಹಾ ವಿತರಿಸಲಿದ್ದಾರೆ.

ಕಳೆದ ಎರಡು ದಿನಗಳಿಂದ 11 ಮಂದಿ ಸೇರಿ ಹತ್ತು ಸಾವಿರ ಲಡ್ಡು ತಯಾರಿಸಿದ್ದಾರೆ. ಕಳೆದ 2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಇವರು ಇಡೀ ನಗರದಲ್ಲಿ 15 ಸಾವಿರ ಲಡ್ಡು ಹಂಚಿದ್ದರು.












Click it and Unblock the Notifications