ಫೆಬ್ರವರಿಯಲ್ಲಿ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿ ಬೇಟೆ
ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ, ವಿದೇಶಿ ಕರೆನ್ಸಿ ಹಾಗೂ ವಿದೇಶಿ ಸಿಗರೇಟುಗಳನ್ನು ಪತ್ತೆ ಹಚ್ಚಿರುವ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಫೆಬ್ರವರಿಯಲ್ಲಿ ಒಟ್ಟು 1.16 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾ
ಮಂಗಳೂರು, ಮಾರ್ಚ್ 2: ವಿದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ, ವಿದೇಶಿ ಕರೆನ್ಸಿ ಹಾಗೂ ವಿದೇಶಿ ಸಿಗರೇಟುಗಳನ್ನು ಪತ್ತೆ ಹಚ್ಚಿರುವ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಫೆಬ್ರವರಿಯಲ್ಲಿ ಒಟ್ಟು 1.16 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ವಯರ್ ಗಳ ಮೂಲಕ 3.18 ಕೆಜಿ ಚಿನ್ನವನ್ನು ಸಾಗಿಸಲು ಯತ್ನಿಸಿದ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿ ಸುಮಾರು 92.94 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಇದರಲ್ಲಿ ಆರೋಪಿಗಳು ವಯರ್ ನ್ನು ಚಿನ್ನದಲ್ಲಿ ತಯಾರಿಸಿ ಅದಕ್ಕೆ ಪಾದರಸ ಬಣ್ಣದ ಕೋಟ್ ಬಳಸಿ ಗೊತ್ತಾಗದಂತೆ ಸಾಗಾಟ ಮಾಡಲು ಯತ್ನಿಸಿದ್ದರು. ಈ ವಯರ್ ಗಳನ್ನು ಟ್ರಾಲಿ ಬ್ಯಾಗ್ ನಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಬ್ಯಾಗ್ ನ ಬೀಡಿಂಗ್ ನಲ್ಲೂ ಚಿನ್ನವನ್ನು ಮೆಟಾಲಿಕ್ ಕೋಟ್ ಬಳಸಿ ಅಡಗಿಸಿಡಲಾಗಿತ್ತು.[ಆನೆ ಹಾವಳಿ ಬಗ್ಗೆ ಪತ್ರ ಬರೆದ ಸುಳ್ಯ ಬಾಲಕಿಗೆ ಪ್ರಧಾನಿ ಕಚೇರಿ ಸ್ಪಂದನೆ]

ಇನ್ನೊಂದು ಪ್ರಕರಣದಲ್ಲಿ ಬೆಲ್ಟ್ ನ ಬಕಲ್ಸ್ ನನ್ನು ಚಿನ್ನದಲ್ಲಿ ಮಾಡಿಸಿ ಅದಕ್ಕೆ ಕಲರ್ ಕೋಟ್ ಬಳಸಿ ಮರೆ ಮಾಚಿ ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ವಾಚ್ ಸ್ಟ್ರಿಪ್ಸ್ ನಲ್ಲಿ, ಬುರ್ಕಾದ ಬಟನ್ ನಲ್ಲಿ ಮತ್ತು ಮಕ್ಕಳ ಪ್ಯಾಂಟಿಯ ಬಟನ್ ನಲ್ಲೂ ಚಿನ್ನ ಇಟ್ಟು ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಇದಲ್ಲದೆ ಮುಖಕ್ಕೆ ಹಚ್ಚುವ ಕ್ರೀಮ್ ನಲ್ಲಿ ಚಿನ್ನದ ರಿಂಗ್ ಗಳನ್ನು ಮತ್ತು ಚಿನ್ನದ ಸರವನ್ನು ಅಡಗಿಸಿ ಸಾಗಿಸುವ ಪ್ರಯತ್ನ ಮಾಡಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.[ಮಂಗ್ಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್]
ವಿದೇಶಿ ಸಿಗರೇಟ್ ವಶ
ವಿದೇಶದಿಂದ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಸಿಗರೇಟ್ ಗಳನ್ನೂ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಒಟ್ಟು 4.6 ಕೆ.ಜಿ. ತೂಕದ ಸಿಗರೇಟ್ ನ 13 ಬಾಕ್ಸ್ ಗಳಲ್ಲಿ ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಇದರ ಮೌಲ್ಯ ಸುಮಾರು 2.44 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ಕರೆನ್ಸಿ ವಶ
ಮಂಗಳೂರಿನಿಂದ ಗಲ್ಘ್ ರಾಷ್ಟ್ರಕ್ಕೆ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಆತನ ಬಳಿಯಿಂದ 18.7 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ. ಹೀಗೆ ಫೆಬ್ರವರಿ ತಿಂಗಳಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರಪೂರ ಬೇಟೆಯಾಡಿದ್ದಾರೆ.












Click it and Unblock the Notifications