ಮಂಗಳೂರು ವಿವಿ ಆವರಣದಲ್ಲಿ 'ಜೋಡಿ' ಶವ

ಮಂಗಳೂರು, ಮೇ.18: ಮಂಗಳೂರು ವಿಶ್ವ ವಿದ್ಯಾಲಯದ ಮಂಗಳ ಗಂಗೋತ್ರಿ ಕ್ಯಾಂಪಸಿನಲ್ಲಿ ಭಾನುವಾರ ಬೆಳಗ್ಗೆ ಎರಡು ಮೃತದೇಹಗಳು ಪತ್ತೆಯಾಗಿವೆ. ನಗರದ ಹೊರವಲಯದ ಕೊಣಾಜೆಯಲ್ಲಿರುವ ಕ್ಯಾಂಪಸ್ ಆವರಣದಲ್ಲಿ ಬೋಧಕೇತರರ ವಸತಿ ಗೃಹದಲ್ಲಿ ಕೊಳೆತು ನಾರುವ ಸ್ಥಿತಿಯಲ್ಲಿದ್ದ ಶವಗಳು ತಡವಾಗಿ ಬೆಳಕಿಗೆ ಬಂದಿವೆ.

ಮೃತರನ್ನು 37 ವರ್ಷ ವಯಸ್ಸಿನ ತಿಲಕಾ ಹಾಗೂ 57 ವರ್ಷ ವಯಸ್ಸಿನ ರಾಮಪ್ಪ ಎಂದು ಗುರುತಿಸಲಾಗಿದೆ. ತಿಲಕಾ ಎಂಬುವರ ಮನೆಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Mangalore: Man, woman found dead in University quarters

ಕೊಣಾಜೆಯ ಮಂಗಳೂರು ವಿವಿಯಲ್ಲಿ ಬೋಧಕೇತರ ಸಿಬ್ಬಂದಿಯಾಗಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದರು. ಮಡಿಕೇರಿ ಮೂಲದ ರಾಮಣ್ಣ ವಿವಿ ಕ್ಯಾಂಪಸಿನಲಿ ನೆಲೆಸುತ್ತಿರಲಿಲ್ಲ. ಸುಬ್ರಮಣ್ಯ ಮೂಲದ ತಿಲಕ ಮಾತ್ರ ವಿವಿ ಕ್ಯಾಂಪಸ್ಸಿನಲ್ಲಿರುವ ವಸತಿ ಕಟ್ಟಡದಲ್ಲಿ ಮನೆ ಮಾಡಿಕೊಂಡಿದ್ದರು. ತಿಲಕಾಗೆ ಈ ಮುಂಚೆ ಪ್ರವೀಣ್ ಎಂಬುವವರ ಜತೆ ಮದುವೆಯಾಗಿತ್ತು, ಆದರೆ, ಗಂಡನಿಂದ ಬೇರ್ಪಟ್ಟು ಮಂಗಳೂರು ವಿವಿಯಲ್ಲಿ ಅಟೆಂಡರ್ ಆಗಿ ಉದ್ಯೋಗಿಯಾಗಿ ನೆಲೆ ಕಂಡು ಕೊಂಡಿದ್ದಳು. ನಂತರ, ತನ್ನಂತೆ ಅಟೆಂಡರ್ ವೃತ್ತಿಯಲ್ಲಿದ್ದ ವಿವಾಹಿತ ರಾಮಪ್ಪನ ಜತೆ ಸ್ನೇಹ ಬೆಳೆದಿದೆ, ಇಬ್ಬರ ನಡುವೆ ವಿವಾಹೇತರ ಸಂಬಂಧ ಸ್ಥಿರವಾಗಿದೆ. ಇಬ್ಬರ ಸಂಬಂಧದ ಬಗ್ಗೆ ಸ್ಥಳೀಯರಿಗೆ ಗೊತ್ತಿತ್ತು ಎನ್ನಲಾಗಿದೆ.

ಕಳೆದ ಕೆಲ ದಿನಗಳಿಮ್ದ ಇಬ್ಬರ ನಡುವೆ ಲೈಂಗಿಕ ವಿಚಾರವಾಗಿ ಕಲಹ ನಡೆದಿದೆ. ಇದೇ ಕೊಲೆ/ಆತ್ಮಹತ್ಯೆಗೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಕೊಣಾಜೆ ಪೊಲೀಸರು ಶಂಕಿಸಿದ್ದಾರೆ. ರಾಮಪ್ಪ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಕಂಡು ಬಂದರೆ, ತಿಲಕಾ ಕುತ್ತಿಗೆ ಚಾಕುವಿನಿಂದ ಕುಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಆರ್ ಹಿತೇಂದ್ರ ಮುಂತಾದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+