ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ಪರ ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ ಯಶ್, ದರ್ಶನ್

|
Google Oneindia Kannada News

ಮಂಡ್ಯ, ಏ.2: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣದಲ್ಲಿದ್ದಾರೆ. ಅವರ ಪರವಾಗಿ ನಟ ಯಶ್ ಹಾಗೂ ದರ್ಶನ್ ಇಂದಿನಿಂದ ಅಧಿಕೃತ ಪ್ರಚಾರ ಆರಂಭಿಸಿದ್ದಾರೆ.

ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ? ಸುಮಲತಾ ಜಾತಿ ಕೆದಕುವ ಶಿವರಾಮೇಗೌಡ್ರೇ, ಸೋನಿಯಾ ಬಳಿಯೂ ಇದನ್ನೇ ಕೇಳ್ತೀರಾ?

ಯಲಿಯೂರು, ತೂಬಿನಕೆರೆ, ಎಲೆಚಾಕನಹಳ್ಳಿ, ಸಿದ್ದಯ್ಯನಕೊಪ್ಪಲು, ಇಂಡವಾಳು, ಕಿರಗಂದೂರು, ಬೇವಿನಹಳ್ಳಿ, ಕೊತ್ತತ್ತಿ, ಕಾಳೇನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಯಶ್​ ಪ್ರಚಾರ ಮಾಡಲಿದ್ದಾರೆ. ಏಪ್ರಿಲ್ 16ರವರೆಗೆ ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ಮದ್ದೂರು, ನಾಗಮಂಗಲ, ಕೆ.ಆರ್​. ಪೇಟೆ ಭಾಗದಲ್ಲಿ ಯಶ್ ಪ್ರಚಾರ ಆರಂಭಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶ್ರೀರಂಗಪಟ್ಟಣ, ಮಂಡ್ಯ, ಕೆ.ಆರ್​. ಪೇಟೆ, ನಾಗಮಂಗಲ, ಉಗಾದಿ, ಕೆ.ಆರ್​. ನಗರ, ಮಳವಳ್ಳಿ, ಮದ್ದೂರು, ಪಾಂಡವಪುರದಲ್ಲಿ ದರ್ಶನ್ ಪ್ರಚಾರ ನಡೆಸಲಿದ್ದಾರೆ.

ರಣಕಹಳೆ ಚಿಹ್ನೆಯ ಮೂಲಕ ಚುನಾವಣೆಗೆ ನಿಂತಿರುವ ಸುಮಲತಾ ಪರವಾಗಿ ನಟ ದರ್ಶನ್​ ಕೂಡ ಏ. 16ರವರೆಗೆ ಪ್ರಚಾರ ನಡೆಸಲಿದ್ದಾರೆ.ಏ. 16ರಂದು ಸುಮಲತಾ ಜೊತೆಗೆ ಪ್ರಚಾರ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ದರ್ಶನ್ ಹಾಗೂ ಯಶ್ ಬೇರೆ ಬೇರೆ ಕಡೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.

ಅಂಬರೀಶ್‌ಗೂ ಅಧಿಕಾರ ದಾಹ ಇರಲಿಲ್ಲ, ಸುಮಲತಾ ಅವರಿಗೂ ಇಲ್ಲ

ಅಂಬರೀಶ್‌ಗೂ ಅಧಿಕಾರ ದಾಹ ಇರಲಿಲ್ಲ, ಸುಮಲತಾ ಅವರಿಗೂ ಇಲ್ಲ

ಅಂಬರೀಷ್‌ಗೆ ಅಧಿಕಾರದ ದಾಹ ಇಲ್ಲ. ಕಾವೇರಿ ವಿಚಾರಕ್ಕೆ ಅಧಿಕಾರ ತ್ಯಾಗ ಮಾಡಿದರು. ಸುಮಲತಾ ಅವರನ್ನು ಬಹುಮತದಿಂದ ಗೆಲ್ಲಿಸಿ ಅಂಬರೀಷ್‌ಗೆ ಗೌರವ ಸಲ್ಲಿಸಿ' ಎಂದು ದರ್ಶನ್ ಕರೆ ನೀಡಿದರು.

ಯಾರ ಬಗ್ಗೆಯೂ ಮಾತನಾಡುವುದಿಲ್ಲ

ಯಾರ ಬಗ್ಗೆಯೂ ಮಾತನಾಡುವುದಿಲ್ಲ

ಇಲ್ಲಿ ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅವರು (ವಿರೋಧಿಗಳು) ಮಾತನಾಡಿಕೊಳ್ಳಲಿ; ಆದರೆ ಏಪ್ರಿಲ್ 18ರಂದು ನಡೆಯುವ ಚುನಾವಣೆ ಅವರ ಮಾತಿಗೆ ಉತ್ತರವಾಗಲಿ ಎಂದು ಅಭಿಮಾನಿಗಳೆದುರು ದರ್ಶನ್ ನುಡಿದರು. ಸುಮಲತಾ ಅವರ ಪರವಾಗಿ ಮಂಡ್ಯದ ಹಲವು ಪ್ರದೇಶಗಳಲ್ಲಿ ಪ್ರಚಾರ ಮಾಡಿದರು.

ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ:ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ ಡಿಬಾಸ್ಅಮ್ಮನನ್ನು ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳುಹಿಸಿಕೊಡಿ:ಮಂಡ್ಯದಲ್ಲಿ ಪ್ರಚಾರ ಆರಂಭಿಸಿದ ಡಿಬಾಸ್

ರಣಕಹಳೆ ಸುಮಲತಾ ಅವರ ಚುನಾವಣಾ ಚಿಹ್ನೆ

ರಣಕಹಳೆ ಸುಮಲತಾ ಅವರ ಚುನಾವಣಾ ಚಿಹ್ನೆ

ಕಬ್ಬಿನ ಗದ್ದೆ ಮುಂದೆ ರೈತ, ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ ಇವುಗಳಲ್ಲಿ ಒಂದನ್ನು ನೀಡುವಂತೆ ಸುಮಲತಾ ಅವರು ಮನವಿ ಮಾಡಿದ್ದರು. ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿತ್ತು, ಬಳಿಕ ಕಹಳೆ ಊದುತ್ತಿರುವ ರೈತ ಅವರ ಚುನಾವಣಾ ಚಿಹ್ನೆಯಾಗಿ ದೊರೆತಿದೆ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಮಂಡ್ಯದಲ್ಲಿ ಸುಮಲತಾ ಹೆಸರಿನ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದ್ದರಿಂದ, ಎಚ್ಚರಿಕೆಯಿಂದ ಚುನಾವಣಾ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು * ನಿಖಿಲ್ ಕುಮಾರಸ್ವಾಮಿ (ಜೆಡಿಎಸ್-ಕಾಂಗ್ರೆಸ್‌) * ಸುಮಲತಾ ಅಂಬರೀಶ್ (ಪಕ್ಷೇತರ) * ಎಂ.ಸುಮಲತಾ (ಪಕ್ಷೇತರ) * ಪಿ.ಸುಮಲತಾ (ಪಕ್ಷೇತರ) * ಸುಮಲತಾ (ಪಕ್ಷೇತರ)

English summary
Kannada actor Yash and darshan started campaigning for Sumalatha Ambareesh from Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X