ಲೋಕಸಮರದಲ್ಲಿ ಸಾಥ್ ನೀಡಿದವರಿಗೆ ಥ್ಯಾಂಕ್ಸ್ ಎಂದ ಸುಮಲತಾ

Recommended Video

      ಲೋಕಸಭಾ ಚುನಾವಣೆ 2019ರಲ್ಲಿ ಬೆಂಬಲಿಸಿದ ಎಲ್ಲರಿಗು ಥ್ಯಾಂಕ್ಸ್ ಹೇಳಿದ ಸುಮಲತಾ | Oneindia Kannada

      ಮಂಡ್ಯ, ಏಪ್ರಿಲ್ 21: ಲೋಕಸಭಾ ಚುನಾವಣೆಗಾಗಿ ಮತದಾನ ನಡೆಯುವ ತನಕವಷ್ಟೇ ಆನಂತರ ಸುಮಲತಾ ಅಂಬರೀಷ್ ಅವರು ಸಿಂಗಪುರಕ್ಕೆ ತೆರಳುತ್ತಾರೆ. ನಟ ಯಶ್, ದರ್ಶನ್, ಅಭಿಷೇಕ್ ಸೇರಿದಂತೆ ಟೂರಿಂಗ್ ಟಾಕೀಸ್ ಏಪ್ರಿಲ್ 18ರಿಂದ ಎತ್ತಂಗಡಿಯಾಗಲಿದೆ ಎಂದು ವಿಪಕ್ಷಗಳು ಮಾಡಿದ ಟೀಕೆಗೆ ಸುಮಲತಾ ಇಂದು ಉತ್ತರ ನೀಡಿದ್ದಾರೆ. ನಮಗೆ ಮಂಡ್ಯನೇ ಸಿಂಗಪೂರ್ ಆಗಿದ್ದು ಜೆಡಿಎಸ್​ನವರು ಪ್ರಾರಂಭದಿಂದ‌ ಕೊನೆಯವರೆಗೆ ಅಂಬರೀಶ್ ಅಂತ್ಯಕ್ರಿಯೆಯಲ್ಲೇ ರಾಜಕಾರಣ ಮುಗಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

      'ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನನಗೆ ಕ್ಷೇತ್ರದಾದ್ಯಂತ ಉತ್ತಮ ಜನ ಬೆಂಬಲ ಸಿಕ್ಕಿತು. ನಾನು ಹಾಕಿದ ಪ್ರತಿ ಹೆಜ್ಜೆಗೆ ಕಾಂಗ್ರೆಸ್ ಕಾರ್ಯಕರ್ತರು ಕಾರಣಕರ್ತರಾಗಿದ್ದಾರೆ. ಹಾಗೆಯೇ ಬಹಿರಂಗ ಬೆಂಬಲ ನೀಡಿದ ಬಿಜೆಪಿ, ರೈತಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

      ಚುನಾವಣೆ ವೇಳೆ ವಿವಿಧ ಸಂಘಟನೆಗಳಿಂದ ದೊರೆತ ಬೆಂಬಲ, ಡಾ.ರವೀಂದ್ರ ಅವರ ಸ್ವಾಭಿಮಾನಿ ಪಾದಯಾತ್ರೆ ಮಾಡಿದರು. ಕೆಆರ್ ಪೇಟೆ ಅಭಿಮಾನಿಯೊಬ್ಬರ ಉರುಳು ಸೇವೆ, ದರ್ಶನ್, ಯಶ್, ದೊಡ್ಡಣ್ಣ, ರಾಕ್ ಲೈನ್, ಅವರ ಉತ್ತಮ ಬೆಂಬಲ ದೊರೆತಿದ್ದು ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ' ಎಂದರು.

      Sumalatha thanks Farmers leaders, Congress workers and voters

      ಮಂಡ್ಯದಲ್ಲಿ ಈ ಬಾರಿ ಶೇ.80ರಷ್ಟು ಮತದಾನ ಆಗಿದ್ದು, ಇತಿಹಾಸದಲ್ಲಿಯೇ ಇದು ದಾಖಲೆಯ ಪ್ರಮಾಣದ ಮತದಾನವಾಗಿದೆ. ಗ್ರಾಮೀಣ ಭಾಗವಾದ ಮಂಡ್ಯದಲ್ಲಿ ಜನ ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಮಹಿಳೆಯರು ಹೆಚ್ಚಾಗಿ ಮತದಾನ ಮಾಡಿರುವುದು ಸಂತೋಷ ಎಂದರು.

      ಈ ಚುನಾವಣೆಯಲ್ಲಿ ಯಾರು ನನ್ನ ಬೆಂಬಲಕ್ಕೆ ನಿಂತಿದ್ದರೋ ಅಂತವರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ. ಕಾರ್ಯಕರ್ತರನ್ನು ಕುಗ್ಗಿಸಬಾರದೆಂದು ನನ್ನ ನೋವನ್ನು ನಾನೇ ನುಂಗಿಕೊಂಡೆ, ನಿಜಕ್ಕೂ ನನಗೆ ಇದೊಂದು ಒಳ್ಳೆ ಅನುಭವವಾಗಿದೆ ಎಂದರು. ಯುದ್ಧದಂತೆ ಚುನಾವಣೆ ನಡೆದಿರಬಹುದು, ಆದರೆ, ಹೆಚ್ಚು ಬಾಂಬ್ ದಾಳಿ ನನ್ನ ಮೇಲೆ ಆಗಿದೆ. ಆದರೆ ನಾನು ಸರ್ಜಿಕಲ್ ಸ್ಟ್ರೈಕ್ ಮಾಡಲ್ಲ, ಸಿಕ್ಸರ್ ಹೊಡಿಬೇಕು ಅಷ್ಟೇ ಎಂದು ಹೇಳಿದರು.

      ಇದೇ ವೇಳೆ ಶ್ರೀಲಂಕಾದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+