ಬಂಡಾಯ ಶಾಸಕರು 'ದೊಡ್ಡವರು' : ಮಳವಳ್ಳಿಯಲ್ಲಿ ಎಚ್ಡಿಕೆ ಲೇವಡಿ

Posted By:
Subscribe to Oneindia Kannada

ಮಳವಳ್ಳಿ, ಡಿಸೆಂಬರ್ 26: ಬಂಡಾಯ ಶಾಸಕರು ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಆರೋಪ ಮಾಡಿದ ಹಿನ್ನೆಲೆ ಎಚ್ ಡಿಕೆ ಪ್ರತಿಕ್ರಿಯಿಸಿದ್ದು, ಬಂಡಾಯ ಶಾಸಕ ಜಮೀರ್ ಅಹಮ್ಮದ್ ದೊಡ್ಡ ನಾಯಕರು. ಅಂಥವರು ಜೆಡಿಎಸ್ ನಂಥ ಚಿಕ್ಕ ಪಕ್ಷಕ್ಕೆ ಬೇಡ ಎಂದು ತಿಳಿಸಿದ್ದಾರೆ.

ಮಳವಳ್ಳಿಯಲ್ಲಿ ಮಾತನಾಡಿದ ಅವರು, ಬಂಡಾಯ ಶಾಸಕರ ಜತೆ ಮಾತುಕತೆ ಪ್ರಶ್ನೆಯೇ ಇಲ್ಲ. ಅವರಿಗೆ ಯಾವತ್ತೋ ಪಕ್ಷದ ಬಾಗಿಲು ಮುಚ್ಚಿದೆ ಎಂದರು. ಅಲ್ಲದೇ ಅವರು ದೊಡ್ಡವರು ನಮ್ಮಂತಹವರ ಚಿಕ್ಕ ಪಕ್ಷಕ್ಕೆ ಬೇಡ ಎಂದು ತಿಳಿಸಿದರು.

ಕುಮಾರಸ್ವಾಮಿ ಹೇಳಿದ್ದರಿಂದಲೇ ಕಾಂಗ್ರೆಸ್ ಗೆ ಮತಹಾಕಿದ್ದೇವೆ ಎಂದು ಜಮೀರ್ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪತ್ರಿಕ್ರಿಯಿಸಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಏಜೆಂಟ್ ತೋರಿಸಿ ಕಾಂಗ್ರೆಸ್ ಗೆ ಮತ ಹಾಕಿದಾಗಲೇ ಅವರು ಏನೆಂದು ತಿಳಿಯಿತು ಎಂದರು.[ರಾಷ್ಟ್ರೀಯವಾದಿ ಪಕ್ಷ ಸೇರಲು ಮುಂದಾದ ಜೆಡಿಎಸ್ ಶಾಸಕರು]

Responding to H.D. kumaraswami against the rebel MLAs

ನಂಜನಗೂಡು ಕ್ಷೇತ್ರದ ಉಪಚುನಾವಣೆಯಲ್ಲಿ ಕಳೆದ ಬಾರಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಯನ್ನೇ ಮತ್ತೆ ಕಣಕ್ಕಿಳಿಸಲಾಗುವುದು ಎಂದು ಹೇಳಿದರು. ಅಲ್ಲದೆ ಜೆಡಿಎಸ್ ಪಕ್ಷವನ್ನು ಬಲಪಡಿಸಲು ರಾಜ್ಯಾದ್ಯಂತ ಸಂಚಾರ ನಡೆಸುವುದಾಗಿ ತಿಳಿಸಿದರು.[ಜೆಡಿಎಸ್ ನಾಯಕರಿಗೆ ಜಮೀರ್ ನೀಡಿದ ಸಲಹೆ ಏನು?]

ಪ್ರಸ್ತುತ ಬಂಡಾಯ ಶಾಸಕರು ರಾಷ್ಟ್ರೀಯವಾದಿ ಪಕ್ಷಗಳ ಕಡೆ ಮುಖ ಮಾಡಿರುವ ಕಾರಣ ಚುನಾವಣೆಯಲ್ಲಿ ಜಮೀರ್ ಅಹಮದ್ ಖಾನ್ ನಿಲ್ಲುವ ಕ್ಷೇತ್ರಕ್ಕೆ ಪ್ರತಿಸ್ಪರ್ಧಿಯಾಗಿ ಜಿ.ಎ.ಬಾವ ಅವರು ನಿಲ್ಲುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Responding to H.D. kumaraswami against the rebel MLAs in malavalli. He is become a Lawmakers do not want our little party HDK said.
Please Wait while comments are loading...