ರೂ. 59.67 ಕೋಟಿ ವೆಚ್ಚದಲ್ಲಿ ನಾಗಮಂಗಲದಲ್ಲಿ ಯೋಗ ಸಂಶೋಧನಾ ಕೇಂದ್ರ
ನವದೆಹಲಿ, ಆಗಸ್ಟ್ 3: ಮಂಡ್ಯದ ನಾಗಮಂಗಲದಲ್ಲಿ ಯೋಗ ಮತ್ತು ನ್ಯಾಚುರೋಪತಿ ಸಂಶೋಧನಾ ಕೇಂದ್ರ ತಲೆ ಎತ್ತಲಿದೆ. ರೂಪಾಯಿ 59.67 ಕೋಟಿ ವೆಚ್ಚದಲ್ಲಿ ಈ ಸಂಶೋಧನಾ ಕೇಂದ್ರ ತಲೆ ಎತ್ತಲಿದ್ದು, ಯೋಜನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಈ ಮಾಹಿತಿಯನ್ನು ಕೇಂದ್ರದ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಬುಧವಾರ ರಾಜ್ಯಸಭೆಯಲ್ಲಿ ನೀಡಿದ್ದಾರೆ.

ಕರ್ನಾಟಕದ ಜತೆಗೆ ಹರ್ಯಾಣದ ಝಜ್ಜರ್ ನಲ್ಲಿಯೂ ರೂ. 52.04 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ತಲೆ ಎತ್ತಲಿದೆ.












Click it and Unblock the Notifications