ಮಂಡ್ಯದಲ್ಲಿ ಸಾಮೂಹಿಕ ಜ್ವರ: 30ಕ್ಕೂ ಅಧಿಕ ಮಂದಿ ಅಸ್ವಸ್ಥ
ಮಂಡ್ಯ, ಜೂನ್ 3: ಮಂಡ್ಯದಲ್ಲಿ ಸಾಮೂಹಿಕ ಜ್ವರ ಕಾಣಿಸಿಕೊಂಡಿದ್ದು 30ಕ್ಕೂ ಹೆಚ್ಚಿನ ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಣೆಚನ್ನಾಪುರ ಗ್ರಾಮದಲ್ಲಿ ಸಾಮೂಹಿಕ ಜ್ವರ ಕಾಣಿಸಿಕೊಂಡಿದೆ, ಗ್ರಾಮಸ್ಥರಿಗೆ ತಗುಲಿರುವ ಸೋಂಕು ಯಾವುದು ಎಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ.
750ಕ್ಕೂ ಹೆಚ್ಚು ಜನಸಂಖ್ಯೆ ಇರುವ ಅಣೆಚನ್ನಾಪುರ ಗ್ರಾಮದಲ್ಲಿ 120 ಮನೆಗಳಿದ್ದು, ಗ್ರಾಮದ ಬಹುತೇಕ ಮಂದಿ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ದಿನಕಳೆದಂತೆ ಒಬ್ಬರಿಂದೊಬ್ಬರಿಗೆ ಜ್ವರ ಹರಡುತ್ತಿದೆ.

ಅಣೆಚನ್ನಾಪುರ ಗ್ರಾಮದಲ್ಲಿ 30ಕ್ಕೂ ಅಧಿಕ ಮಂದಿ ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಪಡೆದ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು, ಗ್ರಾಮಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಾಮೂಹಿಕ ಜ್ವರಿದಂದ ತತ್ತರಿಸಿರುವ ಗ್ರಾಮಸ್ಥರು ಆಸ್ಪತ್ರೆಗೆ ಎಡತಾಕುತ್ತಿದ್ದು, ಹಳ್ಳಿಯಲ್ಲಿ ಆತಂಕ ಮನೆಮಾಡಿದೆ. ಡೆಂಗ್ಯೂ ಅಥವಾ ಚಿಕೂನ್ ಗುನ್ಯಾ ಯಾವ ಜ್ವ ಬಂದಿದೆ ಎಂದು ತಿಳಿಯದೆ ಕಂಗಾಲಾಗಿದ್ದಾರೆ.












Click it and Unblock the Notifications