ಅಂಬಿಯನ್ನು ಸ್ಮರಿಸಿದ ಮೋದಿ: ಪದಗಳೇ ಸಿಗುತ್ತಿಲ್ಲ ಅಂದ್ರು ಸುಮಲತಾ

Recommended Video

      Lok Sabha Elections 2019 : ಅಂಬರೀಶ್ ಅವರನ್ನು ಸ್ಮರಿಸಿದ ನರೇಂದ್ರ ಮೋದಿ

      ಮಂಡ್ಯ, ಏ 9: ತುಂಬಿದ ಮೈಸೂರು ಚುನಾವಣಾ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ, ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಹೊಗಳಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಹೊಸ ಬಲ ಬಂದಂತಾಗಿದೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಕ್ಕೆ ಫುಲ್ ಖುಷ್ ಆಗಿರುವ ಸುಮಲತಾ, ನನಗೆ ಪದಗಳೇ ಸಿಗುತ್ತಿಲ್ಲ. ಯಾವ ರೀತಿ ಅವರಿಗೆ ಥ್ಯಾಂಕ್ಸ್ ಹೇಳಬೇಕೆಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

      ಪ್ರಧಾನಿಗೆ ನನ್ನ ಹರ್ಟ್ ಫುಲ್ ಥ್ಯಾಂಕ್ಸ್ ಎಂದು ಹೇಳಿರುವ ಸುಮಲತಾ, ಇದು ಎಲ್ಲಾ ಅಂಬರೀಶ್ ಅಭಿಮಾನಿಗಳು ಹೆಮ್ಮೆ ಪಡುವಂತಹ ವಿಚಾರ. ಪ್ರಧಾನಿಯವರ ಮಾತು, ನಮ್ಮ ಕಾರ್ಯಕರ್ತರಿಗೆ ಹೊಸ ಹುರುಪು ನೀಡುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ.

      Mandya independednt candidate Sumalatha thanks to PM Modi for remembering Ambarish

      ಪ್ರಧಾನಮಂತ್ರಿಯವರೇ ಸುಮಲತಾ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿರುವುದರಿಂದ, ಮಂಡ್ಯದಲ್ಲಿ ರಾಜ್ಯ ಬಿಜೆಪಿ ನಾಯಕರ ಚುನಾವಣಾ ಪ್ರಚಾರದ ರೂಪುರೇಷೆ ಬದಲಾಗುವ ಸಾಧ್ಯತೆಯಿದೆ.

      ಮೋದಿ ತಮ್ಮ ಮೈಸೂರು ಭಾಷಣದ ಮಧ್ಯೆ ಅಂಬರೀಶ್ ಅವರನ್ನು ನನಪಿಸಿಕೊಂಡು, ಅಂಬರೀಶ್ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ, ಅಂಬರೀಶ್ ಅವರ ಜೊತೆ ಸೇರಿ ಸುಮಲತಾ ಅವರು ಕನ್ನಡಕ್ಕಾಗಿ ಕೆಲಸ ಮಾಡಿದ್ದಾರೆ. ನೀವೆಲ್ಲರೂ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತೀರೆಂದು ನಾನು ನಂಬಿದ್ದೇನೆ ಎಂದು ಮೋದಿ ಅವರು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+