ಬಾಗಿನ ಅರ್ಪಿಸಲು ಬರುವ ಸಿಎಂಗೆ ಕಪ್ಪುಬಾವುಟ ಸ್ವಾಗತದ ಎಚ್ಚರಿಕೆ

Recommended Video

      ಮಂಡ್ಯ ಜಿಲ್ಲೆಗೆ ಭೇಟಿ ಕೊಡಲಿರುವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ

      ಮೈಸೂರು, ಜುಲೈ 14: ಕಾವೇರಿಗೆ ಬಾಗಿನ ಅರ್ಪಿಸಲು ಕೆಆರ್‌ಎಸ್‌ಗೆ ಆಗಮಿಸುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಪ್ಪುಬಾವುಟದ ಸ್ವಾಗತ ಸಿಗುವ ಸಾಧ್ಯತೆ ದಟ್ಟವಾಗಿದೆ.

      ಮಂಡ್ಯದ ಮೈಶುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಸರ್ಕಾರ ಈ ಕೂಡಲೇ ವಿಶೇಷ ಗಮನ ಹರಿಸಿ ಹಣಕಾಸಿನ ನೆರವು ನೀಡಬೇಕು ಇಲ್ಲವಾದರೆ ಬಾಗಿನ ಅರ್ಪಿಸಲು ಬರುವ ಕುಮಾರಸ್ವಾಮಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಮಂಡ್ಯ ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ ಎಚ್ಚರಿಕೆ ನೀಡಿದ್ದಾರೆ.

      ಇದೇ ತಿಂಗಳ 20ನೇ ತಾರೀಖಿನಂದು ಕುಮಾರಸ್ವಾಮಿ ಅವರು ಕೆಆರ್‌ಎಸ್‌ನಲ್ಲಿ ಕಾವೇರಿಗೆ ಬಾಗೀನ ಅರ್ಪಿಸಲಿದ್ದು, ಅಂದೇ ಮಂಡ್ಯ ಜಿಲ್ಲೆಯ ರೈತರು ಹಾಗೂ ಬಿಜೆಪಿ ಕುಮಾರಸ್ವಾಮಿ ವಿರುದ್ಧ ಕಪ್ಪುಬಾವುಟ್ ಪ್ರದರ್ಶಿಸಲಿದೆ ಎಂದು ಅವರು ಹೇಳಿದ್ದಾರೆ.

      Mandya BJP planing to protest against CM Kumaraswamy

      ಕಳೆದ ಬಾರಿ ರಾಜ್ಯ ಸರ್ಕಾರ ಕೆ.ಆರ್.ಎಸ್ ನಿಂದ ಬೆಳೆಗೆ ನೀರು ಕೊಡುವುದಾಗಿ ಹೇಳಿ ಅನ್ನದಾತರಿಗೆ ಮೋಸ ಮಾಡಿತ್ತು ಆದರೆ ವರುಣನ ಕೃಪೆಯಿಂದ ಜಿಲ್ಲೆಯ ರೈತರು ಚನ್ನಾಗಿ ಭತ್ತ ಬೆಳೆದಿದ್ದಾರೆ ಆದರೆ ರೈತರ ಕೈ ಹಿಡಿಯುವುದಾಗಿ ಹೇಳಿ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಿದ ಸರ್ಕಾರ ವಿಧಿಸಿರುವ ಷರತ್ತುಗಳಿಂದ ಜಿಲ್ಲೆಯ ರೈತರು ಕಂಗೆಟ್ಟಿದ್ದಾರೆ.

      ಸಕ್ಕರೆ ಕಾರ್ಖಾನೆ ಸಮಸ್ಯೆ ಮಾತ್ರವಲ್ಲದೆ, ಭತ್ತ ಖರೀದಿಗೆ ವಿಧಿಸಲಾಗಿರುವ ಷರತ್ತುಗಳನ್ನೂ ಪುನರ್‌ ಪರಿಶೀಲನೆ ಮಾಡುವಂತೆ ಒತ್ತಾಯಿಸಲಾಗಿದ್ದು, ನೂತನ ಷರತ್ತಿನಿಂದಾಗಿ ಜಿಲ್ಲೆಯ ರೈತರು ಭತ್ತ ಮಾರಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

      ಸರ್ಕಾರಿ ಭತ್ತ ಖರೀದಿ ಕೇಂದ್ರಗಳಲ್ಲಿ ಶೇ.17ರಷ್ಟು ತೇವಾಂಶ ಇರುವ ಭತ್ತವನ್ನು ಮಾತ್ರ ಖರೀದಿಸಲಾಗುತ್ತಿದೆ. ಆದರೆ ಜಿಲ್ಲೆಯ ವಾತಾವರದಲ್ಲಿ ಸಾಕಷ್ಟು ತೇವಾಂಶ (ಹುಮಿಡಿಟಿ) ಇದ್ದು ಜಿಲ್ಲೆಯ ಯಾವೊಬ್ಬ ರೈತರ ಭತ್ತವು ಶೇ.17ರಷ್ಟು ತೇವಾಂಶ ಬರುತ್ತಿಲ್ಲ. ಕನಿಷ್ಠ ತೇವಾಂಶ ಶೇ.20 ಬರುತ್ತಿದೆ. ಇದು ವಾತಾವರಣದ ತಪ್ಪೇ ಹೊರತು ರೈತನದ್ದಲ್ಲ ಹಾಗಾಗಿ ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ರೈತರು ಖರೀದಿ ಕೇಂದ್ರಕ್ಕೆ ತರುವ ಬತ್ತವನ್ನು ಖರೀದಿಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

      ರಾಜ್ಯದಲ್ಲೇ ಅತಿ ಹೆಚ್ಚಿನ ರೈತರು ಮಾಡ್ಯ ಜಿಲ್ಲೆಯಲ್ಲಿ ಸಾಲದ ಸುಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಹಾರಾಷ್ಟ್ರ ಸರ್ಕಾರ ವಿಧರ್ಭ ಭಾಗದ ರೈತರಿಗೆ ಸುಮಾರು ಹತ್ತು ಸಾವಿರ ಕೋಟಿಯಷ್ಟು ವಿಶೇಷ ಪ್ಯಾಕೇಜ್ ನೀಡಿದ್ದು, ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರವು ಕೂಡ ಜಿಲ್ಲೆಯ ಅನ್ನದಾತರ ನೆರವಿಗೆ ಬರಬೇಕು, ಹಾಗೂ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಬಿಜೆಪಿ ಮುಖಂಡ ಒತ್ತಾಯ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+