KRS Dam: ಕೆಆರ್‌ಎಸ್ ಜಲಾಶಯದ ಮಟ್ಟ 100 ಅಡಿಗೆ ಕುಸಿತ, ಆತಂಕದಲ್ಲಿ ಅನ್ನದಾತ

KRS Dam: ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆ ಎದುರಾಗಿದ್ದು, ಬಿರುಬಿಸಿಲಿನ ವಾತಾವರಣ ಮುಂದುವರೆದಿದೆ. ಪರಿಣಾಮ ಬಹುತೇಕ ಜಿಲ್ಲೆಗಳಲ್ಲಿನ ಪ್ರಮುಖ ಜಲಮೂಲಗಳು ಬತ್ತಿಹೋಗಿವೆ. ಹಾಗೆಯೇ ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಕುಸಿಯುತ್ತಲೇ ಇದೆ. ಇದರಿಂದ ಈ ಭಾಗಗಳ ಜನರಿಗೆ ಆತಂಕ ಶುರುವಾಗಿದೆ.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಕೃಷ್ಣರಾಜಸಾಗರ (ಕೆಆರ್‌ಎಸ್‌) ಅಣೆಕಟ್ಟೆಗೆ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಪರಿಣಾಮ ಜಲಾಶಯದ ನೀರಿನ ಮಟ್ಟ ಬುಧವಾರ (ಅಕ್ಟೋಬರ್ 15) ಸಂಜೆ ವೇಳೆಗೆ 100.50 ಅಡಿಗೆ ಕುಸಿದಿದೆ.

KRS Dam Water Level Drops to 100 50 Feet Amid Rainfall Deficit in Karnataka State Know details

ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿತ

ಈ ಬಾರಿಯ ಮುಂಗಾರು ಕೈಕೊಟ್ಟಿದ್ದರಿಂದ ಒಳಹರಿವು ಭಾರಿ ಪ್ರಮಾಣದಲ್ಲಿ ತಗ್ಗಿದ್ದು, ಕಳೆದ 10 ವರ್ಷಗಳಲ್ಲೇ ಅಕ್ಟೋಬರ್ ತಿಂಗಳಿನಲ್ಲಿ ನೀರಿನ ಮಟ್ಟ 100.50 ಅಡಿಗೆ ತಲುಪಿರುವುದು ಇದೇ ಮೊದಲಾಗಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, 2016ರಲ್ಲಿ 81.40 ಅಡಿಗೆ ಕುಸಿದಿತ್ತು. ಪ್ರಸ್ತುತ ಹೀಗೆಯೇ ಮುಂದುವರೆದರೆ ಜನ-ಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗುವ ಆತಂಕ ಎದುರಾಗಿದೆ.

ತಮಿಳುನಾಡಿಗೆ ಇನ್ನು ಹತ್ತು ದಿನಗಳ ಕಾಲ ನೀರು ಹರಿಸಬೇಕಾಗಿದ್ದು, ಮುಂದಿನ ಮುಂಗಾರಿನವರೆಗೆ ಬೆಳೆಗಳಿಗೆ ಮತ್ತು ನದಿ-ನಾಲೆಗಳ ಮೂಲಕ ಕುಡಿಯುವ ನೀರು ಪೂರೈಸಬೇಕಿದೆ. ನೀರಿನ ಸಂಗ್ರಹ ಹೀಗೆಯೇ ಕಡಿಮೆಯಾಗುತ್ತಿರುವುದು ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ ಅಣೆಕಟ್ಟೆಗೆ 574 ಕ್ಯೂಸೆಕ್ ಒಳಹರಿವು ಇದ್ದು, 2,658 ಕ್ಯೂಸೆಕ್ ಹೊರಹರಿವು ಇದೆ. ಒಟ್ಟು ನೀರಿನ ಸಂಗ್ರಹ 23.057 ಟಿಎಂಸಿಷ್ಟಿದೆ.

ಕಳೆದ 10 ವರ್ಷಗಳಲ್ಲಿ ನೀರಿನ ಸಂಗ್ರಹ ಮಟ್ಟ

* 2016: 84.80
* 2017: 112.60
* 2018: 124.80
* 2019: 124.80
* 2020: 124.80
* 2021: 117.34
* 2022: 124.24
* 2023: 101.24
* 2024: 124.80
* 2025: 124.80

ಚಳಿಗಾಲಕ್ಕೂ ಮುನ್ನವೇ ದಾಖಲೆ ತಾಪಮಾನ

ಮುಂಗಾರು ಅವಧಿ ಮುಗಿದ ತಕ್ಷಣ ಪ್ರಸ್ತುತ ಅಕ್ಟೋಬರ್ ತಿಂಗಳಿನಲ್ಲಿ ಚಳಿಗಾಲ ಆರಂಭವಾಗಬೇಕಿತ್ತು. ಆದರೆ, 'ಎಲ್‌ನಿನೋ' ಪರಿಣಾಮದಿಂದಾಗಿ ವಾತಾವರಣದಲ್ಲಿ ಸಂಪೂರ್ಣ ಬದಲಾಗಿದ್ದು, ಚಳಿಗಾಲದಲ್ಲೂ ಬೇಸಿಗೆಯಂತಹ ಅನುಭವವಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಕರಾವಳಿ ಭಾಗದಲ್ಲಿ ಉಷ್ಣಾಂಶ ಅಧಿಕವಾಗಿದ್ದು, ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಹಲವೆಡೆ ಮುಂದಿನ 5 ದಿನಗಳ ಕಾಲ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಯೆಲ್ಲೋ ಅಲರ್ಟ್?

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ಟೋಬರ್ 16ರಂದು ಜೋರು ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಅಕ್ಟೋಬರ್ 17ರಿಂದ 19ರವರೆಗೆ ಹಾಗೂ ಚಾಮರಾಜನಗರದಲ್ಲಿ ಅಕ್ಟೋಬರ್ 16ರಿಂದ 19ರವರೆಗೆ, ದಾವಣಗೆರೆ, ಬೆಳಗಾವಿ, ಧಾರವಾಡ ಮತ್ತು ಗದಗದಲ್ಲಿ ಅಕ್ಟೋಬರ್ 18ರಿಂದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಚಿತ್ರದುರ್ಗ, ಶಿವಮೊಗ್ಗ, ಮಂಡ್ಯ ಮತ್ತು ಮೈಸೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾಗಶಃ ಮಳೆ ಮತ್ತು ಬಿಸಿಲಿನ ಮಿಶ್ರ ವಾತಾವರಣ ಇರಲಿದೆ ಎನ್ನುವ ಮುನ್ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+