• search
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ : ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಕಾಂಗ್ರೆಸ್ ಅಭ್ಯರ್ಥಿ?

|

ಮಂಡ್ಯ, ಏಪ್ರಿಲ್ 23 : ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು?. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಈ ಕುರಿತು ಸ್ಪಷ್ಟನೆ ಸಿಕ್ಕಿಲ್ಲ. ಮಾಜಿ ಸಚಿವ ಅಂಬರೀಶ್ ನಿರ್ಧಾರ ಏನು? ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಮೈಸೂರಿನಲ್ಲಿ ಭಾನುವಾರ ಅಂಬರೀಶ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗೆ ಸಿಗದೇ ಮೈಸೂರಿನಿಂದ ಅಂಬರೀಶ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಮಂಡ್ಯ : 5ರೂ.ಗೆ ಚಿಕಿತ್ಸೆ ನೀಡುವ ಶಂಕರೇಗೌಡರು ಚುನಾವಣೆಗೆ ಸ್ಪರ್ಧೆ

'ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಂಬರೀಶ್ ಆಪ್ತರ ಬಳಿ ಹೇಳಿದ್ದಾರೆ' ಎಂದು ತಿಳಿದುಬಂದಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿ ಅಂಬರೀಶ್ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾಗಾದರೆ ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರು?.

ಅಮರಾವತಿ ಚಂದ್ರಶೇಖರ್ : ಅಂಬರೀಶ್ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿ?. 'ಅಂಬರೀಶ್ ಸ್ಪರ್ಧೆ ಮಾಡಲ್ಲ. ನಾನು ಸ್ಪರ್ಧೆ ಮಾಡುವೆ. ಸೋಮವಾರ ಮಂಡ್ಯ ಕ್ಷೇತ್ರದ ಬಿ ಫಾರಂ ನನ್ನ ಕೈ ಸೇರಲಿದೆ?' ಎಂದು ಅಮರಾವತಿ ಚಂದ್ರಶೇಖರ್ ಹೇಳಿದ್ದಾರೆ.

ಕಾಂಗ್ರೆಸ್‌ ತೊರೆದು ಜೆಡಿಎಸ್ ಸೇರಲು ಅಂಬರೀಷ್ ನಿರ್ಧಾರ?

'ಅಂಬರೀಶ್ ಶಾಸಕರಾಗಿದ್ದಾಗ ನಾನು ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ. ಅಂಬರೀಶ್ ಸ್ಪರ್ಧೆ ಮಾಡಲ್ಲ ಎಂದರೆ ಅವರ ಬದಲು ನನಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಟಿಕೆಟ್ ಸಿಕ್ಕರೆ ಗೆದ್ದು ಬರುವೆ' ಎಂದು ಅಮರಾವತಿ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ನನಗೆ ಆರೋಗ್ಯ ಸರಿ ಇಲ್ಲ ನೀನು ಚುನಾವಣೆಗೆ ಸ್ಪರ್ಧಿಸು ಎಂದು ಅಂಬರೀಶ್ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಅಂಬರೀಶ್ ಅವರು ಸ್ಪಷ್ಟನೆ ನೀಡಲಿದ್ದಾರೆ' ಎಂದು ಅಮರಾವತಿ ಚಂದ್ರಶೇಖರ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಲು ಏ.24ರ ಮಂಗಳವಾರ ಕೊನೆಯ ದಿನವಾಗಿದೆ. ಆದರೆ, ಮಂಡ್ಯ ಕ್ಷೇತ್ರ ಅಭ್ಯರ್ಥಿ ಯಾರು? ಎಂಬುದು ಇಲ್ಲಿಯ ತನಕ ಅಂತಿಮಗೊಂಡಿಲ್ಲ.

ಮಂಡ್ಯ ರಣಕಣ
ವರ್ಷ
ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
2018
L.R. Shivarame Gowda ಜೆ ಡಿ (ಎಸ್) ಗೆದ್ದವರು 5,69,347 53% 3,24,943
D. R. Siddaramaiah BJP ರನ್ನರ್ ಅಪ್ 2,44,404 0% 0
2014
ಸಿ.ಎಸ್. ಪುಟ್ಟರಾಜು ಜೆ ಡಿ (ಎಸ್) ಗೆದ್ದವರು 5,24,370 44% 5,518
ರಮ್ಯಾ ಐ ಎನ್ ಸಿ ರನ್ನರ್ ಅಪ್ 5,18,852 44% 0
2009
ಎನ್. ಚೆಲುವರಾಯ ಸ್ವಾಮಿ @ ಸ್ವಾಮಿಗೌಡ ಜೆ ಡಿ (ಎಸ್) ಗೆದ್ದವರು 3,84,443 37% 23,500
ಎಂ.ಎಚ್. ಅಂಬರೀಶ ಐ ಎನ್ ಸಿ ರನ್ನರ್ ಅಪ್ 3,60,943 35% 0
2004
ಅಂಬರೀಶ ಎಂ.ಎಚ್. ಐ ಎನ್ ಸಿ ಗೆದ್ದವರು 4,11,116 48% 1,24,438
ಡಾ. ಎಸ್. ರಾಮೇಗೌಡ ಜೆ ಡಿ (ಎಸ್) ರನ್ನರ್ ಅಪ್ 2,86,678 33% 0
1999
ಅಂಬರೀಶ @ ಅಮರನಾಥ ಎಂ.ಎಚ್. ಐ ಎನ್ ಸಿ ಗೆದ್ದವರು 4,18,110 52% 1,52,180
ಕೃಷ್ಣಾ ಜೆ ಡಿ (ಎಸ್) ರನ್ನರ್ ಅಪ್ 2,65,930 33% 0
1998
ಅಂಬರೀಶ ಜೆ ಡಿ ಗೆದ್ದವರು 4,31,439 55% 1,80,523
ಜಿ. ಮಾದೆಗೌಡ ಐ ಎನ್ ಸಿ ರನ್ನರ್ ಅಪ್ 2,50,916 32% 0
1996
ಕೃಷ್ಣಾ ಜೆ ಡಿ ಗೆದ್ದವರು 3,35,852 46% 33,386
ಜಿ. ಮಾದೇಗೌಡ ಐ ಎನ್ ಸಿ ರನ್ನರ್ ಅಪ್ 3,02,466 41% 0
1991
ಜಿ. ಮಾದೇಗೌಡ ಐ ಎನ್ ಸಿ ಗೆದ್ದವರು 2,59,500 42% 95,347
ಡಿ. ರಾಮಲಿಂಗಯ್ಯ ಬಿ ಜೆ ಪಿ ರನ್ನರ್ ಅಪ್ 1,64,153 27% 0
1989
ಜಿ. ಮಾದೆಗೌಡ ಐ ಎನ್ ಸಿ ಗೆದ್ದವರು 3,37,024 48% 74,889
ಎಚ್.ಎಲ್. ನಾಗೇ ಗೌಡ ಜೆ ಎನ್ ಪಿ ( ಜೆ ಪಿ) ರನ್ನರ್ ಅಪ್ 2,62,135 37% 0
1984
ಕೆ.ವಿ. ಶಂಕರಗೌಡ ಜೆ ಎನ್ ಪಿ ಗೆದ್ದವರು 3,19,176 59% 1,20,396
ಎಸ್.ಎಂ. ಕೃಷ್ಣ ಐ ಎನ್ ಸಿ ರನ್ನರ್ ಅಪ್ 1,98,780 36% 0
1980
ಎಸ್.ಎಂ. ಕೃಷ್ಣ ಐ ಎನ್ ಸಿ (ಐ) ಗೆದ್ದವರು 2,23,675 52% 1,15,342
ಸಿ. ಬಂಡೇಗೌಡ ಜೆ ಎನ್ ಪಿ ರನ್ನರ್ ಅಪ್ 1,08,333 25% 0
1977
ಕೆ. ಚಿಕಲಿಂಗಯ್ಯ ಐ ಎನ್ ಸಿ ಗೆದ್ದವರು 2,00,360 48% 5,321
ಎಂ. ಶ್ರೀನಿವಾಸ ಬಿ ಎಲ್ ಡಿ ರನ್ನರ್ ಅಪ್ 1,95,039 47% 0

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KPCC member Amaravathi Chandrashekar may contest form Mandya assembly constituency for Karnataka assembly elections 2018 as Congress candidate. Sitting MLA Ambareesh yet to announce his decision.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more