ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ದೂರು ಜೆಡಿಎಸ್ ಕಾರ್ಯಕರ್ತನ ಹತ್ಯೆ, ಮೂವರ ಬಂಧನ

|
Google Oneindia Kannada News

ಮದ್ದೂರು, ಡಿಸೆಂಬರ್ 06 : ಜೆಡಿಎಸ್ ಮುಖಂಡ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ನ.29 ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್ ಹತ್ಯೆ ಮಾಡಲಾಗಿತ್ತು.

ಮದ್ದೂರು ಬಳಿ ಮಾಜಿ ಶಾಸಕರ ಬೆಂಬಲಿಗನ ಹತ್ಯೆಮದ್ದೂರು ಬಳಿ ಮಾಜಿ ಶಾಸಕರ ಬೆಂಬಲಿಗನ ಹತ್ಯೆ

ಬಂಧಿತ ಆರೋಪಿಗಳನ್ನು ಬೆಂಗಳೂರು ಸಮೀಪದ ನೆಲಗದರೇನಹಳ್ಳಿಯ ಹರೀಶ್, ಕೆ.ಮಲ್ಲಿಗೆರೆಯ ಸುರೇಶ್, ಮಾದನಾಯಕನಹಳ್ಳಿಯ ನವೀನ್ ಎಂದು ಗುರುತಿಸಲಾಗಿದೆ. ಸುರೇಶ್ ಹತ್ಯೆಯಾದ ಸಂತೋಷ್ ಚಲನವಲನದ ಬಗ್ಗೆ ಉಳಿದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ.

JDS activist murder in Maddur, Three held

ನ.29ರಂದು ಮದ್ದೂರು ತಾಲೂಕಿನ ಕೌಡ್ಲೆ ಸಮೀಪದ ಕೆ.ಜಿ.ಕೊಪ್ಪಲು ಗ್ರಾಮದ ಬಳಿ ಸಂತೋಷ್ ಹತ್ಯೆ ಮಾಡಲಾಗಿತ್ತು. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಮದ್ದೂರು ಪಟ್ಟಣ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಕೆಆರ್ ಪೇಟೆ ಜೆಡಿಎಸ್ ಕಾರ್ಯಕರ್ತನ ಕೊಲೆ ಆರೋಪಿಗಳ ಬಂಧನಕೆಆರ್ ಪೇಟೆ ಜೆಡಿಎಸ್ ಕಾರ್ಯಕರ್ತನ ಕೊಲೆ ಆರೋಪಿಗಳ ಬಂಧನ

ಹತ್ಯೆಯಾದ ಸಂತೋಷ್ ಮಾಜಿ ಶಾಸಕ ಕೆ.ಸುರೇಶ್ ಗೌಡ ಅವರ ಬೆಂಬಲಿಗನಾಗಿದ್ದ. ಕೆ.ಜಿ.ಕೊಪ್ಪಲು ಗ್ರಾಮದ ಬಳಿ ಸ್ನೇಹಿತರ ಜೊತೆ ಮಾತನಾಡುತ್ತಾ ನಿಂತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಸಂತೋಷ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿಯೇ ಸಂತೋಷ್ ಮೃತಪಟ್ಟಿದ್ದ.

ಒಂದು ವಾರದಲ್ಲಿ ಮಂಡ್ಯದ ನಾಲ್ವರು ಜೆಡಿಎಸ್ ಕಾರ್ಯಕರ್ತರ ಕೊಲೆಒಂದು ವಾರದಲ್ಲಿ ಮಂಡ್ಯದ ನಾಲ್ವರು ಜೆಡಿಎಸ್ ಕಾರ್ಯಕರ್ತರ ಕೊಲೆ

ಕೆ.ಸುರೇಶ್ ಗೌಡ ಅವರು ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದರು. ಪೊಲೀಸರ ಜೊತೆ ಮಾತುಕತೆ ನಡೆಸಿದ್ದರು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಒತ್ತಾಯಿಸಿದ್ದರು.

English summary
Mandya district Maddur police arrested 3 accused in connection with the murder of JDS activist Santosh. Santosh murdered on November 29, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X