ಮಂಡ್ಯ; ಚಿನ್ನ ವಂಚನೆ ಪ್ರಕರಣ ಆರೋಪಿಯಿಂದ ನಡೀತಿತ್ತು ಸೆಕ್ಸ್ ಸಿ.ಡಿ ದಂಧೆ

ಮಂಡ್ಯ, ಅಕ್ಟೋಬರ್ 27: ಚಿನ್ನಕ್ಕೆ ಹೆಚ್ಚಿನ ಬಡ್ಡಿ ಕೊಡಿಸುವ ಆಮಿಷ ತೋರಿಸಿ ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಮಂಡ್ಯದ ಖಾಸಗಿ ಬ್ಯಾಂಕ್ ನೌಕರನೊಬ್ಬ ಕೆಜಿಗಟ್ಟಲೆ ಚಿನ್ನ ವಂಚಿಸಿದ್ದ ಪ್ರಕರಣವೊಂದು ಮಂಡ್ಯದಲ್ಲಿ ಇತ್ತೀಚೆಗೆ ನಡೆದಿತ್ತು.

ನಮ್ಮ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ ಶೇಕಡಾ 20ರಷ್ಟು ಹಾಗೂ ತಿಂಗಳಿಗೆ ಶೇಕಡಾ 40 ರಷ್ಟು ಬಡ್ಡಿ ಕೊಡುತ್ತೇವೆ ಎಂದು ಆಮಿಷವೊಡ್ಡಿ, ನಂಬಿಸಿ ಚಿನ್ನವನ್ನು ಸಂಗ್ರಹಿಸಿದ್ದ ಮಂಡ್ಯದ ಗುತ್ತಲು ಬಡಾವಣೆಯ ಸೋಮಶೇಖರ್ ವಂಚನೆ ಎಸಗಿದ್ದ. ಸುಮಾರು 20 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವ ಚಿನ್ನವನ್ನು ಸಂಗ್ರಹಿಸಿ ವಂಚನೆ ಮಾಡಿದ್ದ. ಈ ಪ್ರಕರಣದ ಕುರಿತು ವಿಚಾರಣೆ ಆರಂಭಿಸಿದ್ದ ಪೊಲೀಸರಿಗೆ ಮತ್ತೂ ಒಂದು ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿಯಾಗಿದ್ದ ಸೋಮಶೇಖರ್ ಹೈಟೆಕ್ ಸೆಕ್ಸ್ ದಂಧೆಯಲ್ಲೂ ತೊಡಗಿದ್ದಾನೆ ಎಂಬ ವಿಷಯ ತಿಳಿದುಬಂದಿದೆ.

ಸೋಮಶೇಖರ್ ವಿಚಾರಣೆ ಸಂದರ್ಭ ಆತನ ಮೊಬೈಲ್ ನಲ್ಲಿದ್ದ ಸಂಭಾಷಣೆಯನ್ನು ಕೇಳಿಸಿಕೊಂಡ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಆತನ ಮೊಬೈಲ್​ನಲ್ಲಿದ್ದ ಆಡಿಯೋ ಈತ ಸೆಕ್ಸ್ ದಂಧೆಯಲ್ಲೂ ತೊಡಗಿಕೊಂಡಿರುವುದನ್ನು ಸಾಬೀತು ಮಾಡಿದೆ. ನಗರ ಸೇರಿದಂತೆ ಮೈಸೂರಿನ ತೋಟದ ಮನೆಯಲ್ಲಿ ಈ ದಂಧೆ ನಡೆಯುತ್ತಿರುವ ಕುರಿತು ಆಡಿಯೋ ಸಾಕ್ಷಿ ನೀಡಿದೆ. ಆರೋಪಿ ಸೋಮಶೇಖರ್​​ ಮಹಿಳೆಯೊಬ್ಬರ ಜೊತೆ ಮಾತನಾಡಿರುವ ಆಡಿಯೋ ಲಭ್ಯವಾಗಿದ್ದು, ದಂಧೆಯಿಂದ ಹಣ ಸಂಪಾದನೆ ಮಾಡುತ್ತಿದ್ದುದಾಗಿಯೂ ತಿಳಿದುಬಂದಿದೆ.

Mandya: Gold Fraud Case Accused Involved In Sex Scandal

ಈ ಹೈಟೆಕ್ ಸಿ.ಡಿ ದಂಧೆ ಪ್ರಕರಣದಲ್ಲಿ ಅನೇಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಜೊತೆಗೆ ಈ ದಂಧೆ ಹಿಂದೆ ಬೃಹತ್ ಜಾಲವಿದ್ದು ಬಂಧಿತ ಆರೋಪಿ ಇದರಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಈಓ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Recommended Video

      ನಾವು ತುಳಸಿ ಬೆಳೆಯೋದು!! ಗಾಂಜಾ ಅಲ್ಲಾ!! | Uddhav Thackeray | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+