ಅನೈತಿಕ ಸಂಬಂಧ: ಮಳವಳ್ಳಿಯಲ್ಲಿ ಡಬಲ್ ಮರ್ಡರ್

Posted By:
Subscribe to Oneindia Kannada

ಮಂಡ್ಯ, ಡಿಸೆಂಬರ್ 18: ಮಳವಳ್ಳಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅನೈತಿಕ ಸಂಬಂಧ ಅರೋಪ ಹಿನ್ನೆಲೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದಲ್ಲಿ ಜೋಡಿ ಕೊಲೆ ಸಂಭವಿಸಿದೆ.

ಕೊಲೆಯಾದವರು ನೆಲಮಾಕನಹಳ್ಳಿಯ ಶರಾವತಿ ಮತ್ತು ಸತೀಶ್ ಎನ್ನಲಾಗಿದ್ದು ಇವರ ನಡುವೆ ಅನೈತಿಕ ಸಂಬಂಧವಿತ್ತು ಎಂದು ಗ್ರಾಮದಲ್ಲಿ ಆರೋಪ ಕೇಳಿಬರುತ್ತಿದೆ. ಆದರೆ ಕೊಲೆಯನ್ನು ಯಾರು ಮಾಡಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಶರಾವತಿಯ ಗಂಡ ಸಿದ್ದೇಗೌಡ ಆರು ವರ್ಷದ ಹಿಂದೆ ಬೇರೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ.[ಮಳವಳ್ಳಿ: ಕತ್ತು ಕೊಯ್ದು ಪತ್ನಿ ಕೊಂದ ಪತಿ]

murder

ಇನ್ನು ನೆಲಮಾಕನಹಳ್ಳಿಯ ಸಿದ್ದೇಗೌಡರಿಗೆ ನಾಲ್ಕು ಜನ ಮಕ್ಕಳು ಅವರಲ್ಲಿ ಸತೀಶನೇ ಮೊದಲಿಗ, ಸತೀಶ್ ಮತ್ತು ತಿಪ್ಪೇಗೌಡ ಚಿಕ್ಕಪ್ಪ- ದೊಡ್ಡಪ್ಪಂದಿರ ಮಕ್ಕಳಾಗಿದ್ದು, ಸಿದ್ದೇಗೌಡ ಜೈಲು ಸೇರಿದ ನಂತರ ಶರಾವತಿ ಮತ್ತು ಸತೀಶ್ ನಡುವೆ ಸ್ನೇಹ ಏರ್ಪಟ್ಟಿತ್ತು ಎನ್ನಲಾಗಿದೆ. ಈ ಕುರಿತು ತಂದೆ ತಿಪ್ಪೇಗೌಡರು ಶರಾವತಿ ಮತ್ತು ಸತೀಶ್ ಗೆ ಬುದ್ಧಿವಾದ ಹೇಳಿದ್ದರು.[ಪ್ರೇಯಸಿ ಮಾಜಿ ಪತಿ ಸ್ನೇಹಿತನನ್ನು ಕೊಲೆ ಮಾಡಿದ ಪ್ರಿಯಕರ]

ಶನಿವಾರ ರಾತ್ರಿ ಸತೀಶ್ ಬೇರೆಡೆಯಿಂದ ಬಾಡೂಟ ಮುಗಿಸಿ ಮನೆಗೆ ತೆರಳಿದ್ದಾರೆ ಈ ವೇಳೆ ಇದ್ದಕ್ಕಿದ್ದಂತೆ ದಾಳಿ ನಡೆಸಿ ಸತೀಶ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದು ಮತ್ತು ಶರಾವತಿಯನ್ನು ಅವರ ಮನೆಯಲ್ಲಿ ಮಲಗಿದ್ದ ವೇಳೆ ಕೊಲೆ ಮಾಡಲಾಗಿದೆ.

ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Accused illegal relation; happend Double murder in mandya district, malavalli taluk nelamakanhalli villege. For those who have been murdered not know.
Please Wait while comments are loading...