ಸುಮಲತಾ ಬಗ್ಗೆ ಹೀಗೊಂದು ಸುಳ್ಳು ಸುದ್ದಿ ಹರಿದಾಡುತ್ತಿದೆ

Recommended Video

      Mandya: ಸುಮಲತಾ ಬಗ್ಗೆ ಮಂಡ್ಯದಲ್ಲಿ ಹೀಗೊಂದು ಸುಳ್ಳು ಸುದ್ದಿ ಹರಿದಾಡುತ್ತಿದೆ | Oneindia Kannada

      ಮಂಡ್ಯ, ಏಪ್ರಿಲ್ 17: ಮಂಡ್ಯದ ಲೋಕಸಭೆ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಬಗ್ಗೆ ಸುಳ್ಳು ಸುದ್ದಿಯೊಂದು ಮಂಡ್ಯದಲ್ಲಿ ಹರಿದಾಡುತ್ತಿದೆ.

      ನಿನ್ನೆಯಷ್ಟೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಬಹಿರಂಗ ಪ್ರಚಾರ ಅತ್ಯವಾದ ಕೂಡಲೇ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರು ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಆದರೆ ಇದು ಅಪ್ಪಟ ಸುಳ್ಳಾಗಿದೆ.

      ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರು ಆನ್‌ಲೈನ್‌ನಲ್ಲಿ ಸಿಂಗಪುರಕ್ಕೆ ಟಿಕೆಟ್ ಬುಕ್ ಮಾಡಿದ್ದಾರೆಂದು ಮೊಬೈಲ್ ಸ್ಕ್ರೀನ್ ಶಾಟ್‌ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಸುಳ್ಳು ಸುದ್ದಿಯಾಗಿದ್ದು, ಸುಮಲತಾ ಹಾಗೂ ಅಂಬರೀಶ್ ಅವರು ಮಂಡ್ಯದಲ್ಲಿಯೇ ಇರುವುದಾಗಿ ಅವರ ಬೆಂಬಲಿಗರು ಖಚಿತಪಡಿಸಿದ್ದಾರೆ.

      A fake news spreading in social media about Sumalatha

      ಸುಮಲತಾ ವಿರೋಧಿ ಬಣದ ಕೆಲವರು, ಸುಮಲತಾ ಅವರು ಗೆದ್ದರೆ ಸಿಂಗಪುರ ಸೇರುತ್ತಾರೆ ಎಂದು ಅವರ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದರು, 'ಸಿಂಗಪುರ ಸುಮಕ್ಕ' ಎಂದು ಅವರನ್ನು ವ್ಯಂಗ್ಯ ಸಹ ಮಾಡುತ್ತಿದ್ದರು, ಅದಕ್ಕೆ ಪೂರಕವಾಗಿ ಇಂದು ಬೆಳಿಗ್ಗಿನಿಂದ ಹೀಗೊಂದು ಸುಳ್ಳು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

      ಸುಮಲತಾ ಮಂಡ್ಯದಲ್ಲಿಯೇ ಇದ್ದಾರೆ

      ಸುಮಲತಾ ಮಂಡ್ಯದಲ್ಲಿಯೇ ಇದ್ದಾರೆ

      ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರು ಮಂಡ್ಯದಲ್ಲಿಯೇ ಇದ್ದು, ಮನೆ-ಮನೆ ಪ್ರಚಾರದಲ್ಲಿ ತೊಡಗಿದ್ದಾರೆ, ಅವರ ಮತವೂ ಸಹ ಮಂಡ್ಯದಲ್ಲಿಯೇ ಇದೆ.

      ಮಂಡ್ಯದಲ್ಲಿ ಕಾವೇರಿರುವ ಚುನಾವಣೆ

      ಮಂಡ್ಯದಲ್ಲಿ ಕಾವೇರಿರುವ ಚುನಾವಣೆ

      ಮಂಡ್ಯದಲ್ಲಿ ಚುನಾವಣೆ ಬಹುವಾಗಿ ಕಾವೇರಿದ್ದು, ಎದುರಾಳಿಗಳು ಒಬ್ಬರ ಮೇಲೊಬ್ಬರು ದಾಳಿ-ಪ್ರತಿದಾಳಿಗಳನ್ನು ಮಾಡುತ್ತಲೇ ಇದ್ದಾರೆ. ಈ ಮಧ್ಯೆ ಸುಳ್ಳು ಸುದ್ದಿಗಳ ಹರಿದಾಟವು ಸಾಮಾಜಿಕ ಜಾಲತಾಣಗಳ ಕೃಪೆಯಿಂದ ಹೆಜ್ಜಿಗೆ ಸದ್ದು ಮಾಡುತ್ತಿದೆ.

      ಯಶ್-ದರ್ಶನ್ ಶೂಟಿಂಗ್‌ನಲ್ಲಿ ಭಾಗಿ

      ಯಶ್-ದರ್ಶನ್ ಶೂಟಿಂಗ್‌ನಲ್ಲಿ ಭಾಗಿ

      ನಿನ್ನೆಗೆ ಬಹಿರಂಗ ಚುನಾವಣೆ ಅಂತ್ಯವಾದ ಕಾರಣ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದ ಯಶ್ ಮತ್ತು ದರ್ಶನ್ ಅವರು ಮಾತ್ರ ಮಂಡ್ಯ ತೊರೆದಿದ್ದು, ಅವರು ತಮ್ಮ-ತಮ್ಮ ಚಲನಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

      ಸುಮಲತಾ vs ನಿಖಿಲ್ ಕುಮಾರಸ್ವಾಮಿ

      ಸುಮಲತಾ vs ನಿಖಿಲ್ ಕುಮಾರಸ್ವಾಮಿ

      ಸುಮಲತಾ ಅವರು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ. ಅವರ ಎದುರಾಳಿಯಾಗಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣಾ ಕಣದಲ್ಲಿದ್ದಾರೆ. ನಾಳೆ (ಏಪ್ರಿಲ್ 18) ರಂದು ಚುನಾವಣೆ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+