ಸುಂಟಿಕೊಪ್ಪ ಸರಕಾರಿ ಶಾಲೆ ಅಂದರೆ ಓಪನ್ ಬಾರು, ಮಜಾ ಜೋರು!

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜನವರಿ 30: ಕೆಲವು ಪುಂಡ-ಪೋಕರಿಗಳು ಮದ್ಯಪಾನ, ಧೂಮಪಾನಕ್ಕಾಗಿ ರಾತ್ರಿ ಹೊತ್ತು ಸರಕಾರಿ ಶಾಲೆಯನ್ನು ಬಳಸಿಕೊಂಡು, ಇಡೀ ವಾತಾವರಣವನ್ನೇ ಗಬ್ಬೆಬ್ಬಿಸುತ್ತಿರುವ ಘಟನೆ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊರುಗಳಲ್ಲಿ ಸಾಮಾನ್ಯವಾಗಿ ಇಂತಹ ಪುಂಡರಿರುತ್ತಾರೆ. ಸರಕಾರಿ ಕಚೇರಿ, ಶಾಲಾ- ಕಾಲೇಜುಗಳನ್ನೇ ಅಡ್ಡೆಯಾಗಿಸಿಕೊಂಡು, ರಾತ್ರಿಯಾಯಿತೆಂದರೆ ಮದ್ಯ, ಸಿಗರೇಟ್ ಸೇವಿಸಿ, ಇಡೀ ವಾತಾವರಣವನ್ನೇ ಗಲೀಜು ಮಾಡಿ ಹೋಗುತ್ತಾರೆ. ಮಾರನೆ ದಿನ ಶಾಲಾ ಮಕ್ಕಳು ಮದ್ಯದ ಬಾಟಲಿ, ಸಿಗರೇಟ್ ತುಂಡುಗಳನ್ನು ತೆಗೆದು ಸ್ವಚ್ಛಗೊಳಿಸಬೇಕಾಗುತ್ತದೆ.

Suntikoppa government school become a open bar

ಜನವರಿ 26ರಂದು ಇಡೀ ದೇಶ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿದ್ದರೆ, ಸುಂಟಿಕೊಪ್ಪದಲ್ಲಿ ಪುಂಡ- ಪೋಕರಿಗಳು ದೇವಾಲಯದಂತಿರುವ ಶಾಲೆಯಲ್ಲೇ ಮದ್ಯ ಸೇವಿಸಿ, ಪಾರ್ಟಿ ಮಾಡಿದ್ದಾರೆ. ಹೆಂಡದ ಅಮಲಿನಲ್ಲಿ ಶಾಲೆಯ ಕೊಠಡಿ ಬಾಗಿಲು- ಕಿಟಕಿ ಒಡೆದು ಗಾಜನ್ನು ಪುಡಿ ಮಾಡಿ, ಮಜಾ ಉಡಾಯಿಸಿದ್ದಾರೆ.

ಒಂದು ಕಡೆ ಸುಂಟಿಕೊಪ್ಪ ಆಟೋರಿಕ್ಷಾ ಮತ್ತು ಚಾಲಕರ ಸಂಘದಿಂದ ಗಣರಾಜ್ಯೋತ್ಸವದ ಅಂಗವಾಗಿ ರಾತ್ರಿ ವೇಳೆ ಅದ್ದೂರಿಯ ಡ್ಯಾನ್ಸ್ ಮೇಳ ನಡೆಯುತ್ತಿತ್ತು. ಮತ್ತೊಂದೆಡೆ ಕೆಲವು ಕಿಡಿಗೇಡಿಗಳು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಉಲುಗುಲಿ ರಸ್ತೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನ ನಿರ್ಜನ ಪ್ರದೇಶಕ್ಕೆ ದಾಳಿಯಿಟ್ಟು, ಕಟ್ಟಡದ ಕಿಟಕಿ ಗಾಜುಗಳನ್ನು ನಾಶಪಡಿಸಿದ್ದಾರೆ.

ಅಲ್ಲೇ ಮದ್ಯ ಸೇವನೆ ಮಾಡಿ, ಬಾಟಲಿ, ಉಪ್ಪಿನಕಾಯಿ ಅಲ್ಲೇ ಎಸೆದಿದ್ದಾರೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಯು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Suntikoppa (Madikeri) government school become an open bar. Government school premises became a place for Illicit activities during the night time.
Please Wait while comments are loading...