ಕೊಡಗು: ನ.15ರೊಳಗೆ ಹೋಂ ಸ್ಟೇ ನೋಂದಣಿ ಕಡ್ಡಾಯ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಅಕ್ಟೋಬರ್. 15 : ಕೊಡಗಿನಲ್ಲಿ ಹೋಂ ಸ್ಟೇಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು ಇವುಗಳ ಪೈಕಿ ಕೆಲವೇ ಕೆಲವು ಮಾತ್ರ ನೋಂದಣಿಯಾಗಿ ಕಾನೂನು ಕಾಯಿದೆಯನ್ನು ಪಾಲಿಸುತ್ತಿದ್ದರೆ. ಇನ್ನುಳಿದವು ಯಾವುದೇ ನೋಂದಾಣಿ ಮಾಡಿಸದೆ ಅನಧಿಕೃತವಾಗಿ ನಡೆಯುತ್ತಿವೆ.

ಈ ಬಗ್ಗೆ ಶುಕ್ರವಾರ ಕೂರ್ಗ್ ಹೋಂಸ್ಟೇ ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ಕರುಂಬಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಹೋಂಸ್ಟೇ ಕೆಲವು ಕಠಿಣ ನಿಬಂಧನೆಗಳನ್ನು ಅಳವಡಿಸಿತ್ತಾದರೂ ಇದೀಗ ನೋಂದಣಿ ಪ್ರಕ್ರಿಯೆಯನ್ನು ಪ್ರವಾಸೋದ್ಯಮ ಇಲಾಖೆ ಸರಳೀಕರಣಗೊಳಿಸಿದೆ.ಇದರಿಂದ ಅನಧಿಕೃತವಾಗಿ ಹೋಂಸ್ಟೇ ನಡೆಸುತ್ತಿರುವ ಮಾಲೀಕರು ನ.15 ರೊಳಗೆ ಆನ್ ಲೈನ್ ಮುಖಾಂತರ ನೋಂದಣಿಯನ್ನು ಕಡ್ಡಾಯವಾಗಿ ಮಾಡುವಂತೆ ಅವರು ಹೇಳಿದರು.

former president Karumbaiah

ಈಗಾಗಲೇ ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಪ್ರವಾಸೋದ್ಯಮ ಸಚಿವರು ಹಾಗೂ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ, ಹೋಂ ಸ್ಟೇ ನೋಂದಣಿ ಪ್ರಕ್ರಿಯೆಯಲ್ಲಿದ್ದ ಗೊಂದಲಗಳನ್ನು ನಿವಾರಣೆಯಾಗಿವೆ.

ಇನ್ನು ಮುಂದೆ ಕ್ಲಿಷ್ಟಕರವಾಗಿದ್ದ ಕೆಲವು ನಿಯಮಗಳಿಲ್ಲದೆ ಇದೀಗ ಸರಳೀಕರಣಗೊಂಡಿರುವುದರಿಂದ ಕೇವಲ 500 ರೂ. ಪಾವತಿಸಿ ಹೋಂ ಸ್ಟೇಗಳನ್ನು ನೋಂದಣಿ ಮಾಡಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಈಗಾಗಲೇ ಹೆಚ್ಚಿನ ಕಾಫಿ ತೋಟಗಳ ನಡುವೆ ಹೋಂಸ್ಟೇಗಳು ನಡೆಯುತ್ತಿದ್ದು, ಕೆಲವು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳ ಕೆಲವು ಶ್ರೀಮಂತರು ಕಾಫಿ ತೋಟವನ್ನು ಖರೀದಿಸಿ ಹೋಂಸ್ಟೇ ನಡೆಸುತ್ತಿದ್ದಾರೆ. ಇನ್ನಾದರೂ ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Addressing the press meet in Madikeri on October 14, Association former president Karumbaiah confirmed that the association members succeeded in resolving many differences after meeting state tourism minister and secretary.
Please Wait while comments are loading...