ಕುಶಾಲನಗರದಲ್ಲಿ ಸ್ಪೇನ್ ಮೂಲದ ವ್ಯಕ್ತಿ ಶವವಾಗಿ ಪತ್ತೆ
ಮಡಿಕೇರಿ, ನವೆಂಬರ್ 27: ವಿದೇಶಿ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಕುಶಾಲನಗರದ ಸೋಮೇಶ್ವರ ಬಡಾವಣೆಯಲ್ಲಿ ನಡೆದಿದೆ.
ಮೂಲತಃ ಸ್ಪೇನ್ ದೇಶದ ಕಾರ್ಲೋಸ್ ಎಂಬುವರೇ ಮೃತಪಟ್ಟ ದುರ್ದೈವಿ. ಸ್ಪೇನ್ ನ ನೌಕಾಪಡೆಯ ನಿವೃತ್ತ ಯೋಧನಾಗಿದ್ದ ಕಾರ್ಲೋಸ್ 2003ರಲ್ಲಿ ಕೇರಳಕ್ಕೆ ಬಂದಿದ್ದು, ಕಳೆದ 9 ವರ್ಷಗಳಿಂದ ಕುಶಾಲನಗರದಲ್ಲಿ ವಾಸವಿದ್ದರು.

ಕುಶಾಲನಗರದಲ್ಲಿ ಗಿಟಾರ್ ವಾದನದ ಮೂಲಕ ಹಣ ಸಂಪಾದಿಸುತ್ತಿದ್ದ ಕಾರ್ಲೋಸ್, ಮಂಗಳವಾರ ಮಧ್ಯಾಹ್ನದ ವೇಳೆಗೆ ತಾವು ವಾಸವಿದ್ದ ಮನೆಯ ಅಡುಗೆ ಮನೆಯ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications