ಕೊಡಗು: ಬಂದ್ ಆಗಿರುವ, ಪರ್ಯಾಯ ರಸ್ತೆಗಳ ಪಟ್ಟಿ
ಮಡಿಕೇರಿ, ಆಗಸ್ಟ್ 12 : ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ರಸ್ತೆಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತ ಬಂದ್ ಆಗಿರುವ ರಸ್ತೆ ಮತ್ತು ಪರ್ಯಾಯ ಮಾರ್ಗಗಳ ಪಟ್ಟಿ ಬಿಡುಗಡೆ ಮಾಡಿದೆ.
ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದ್ದು, ಬಹುತೇಕ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ.
ವಿರಾಜಪೇಟೆ-ಮಾಕುಟ್ಟ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ
ವಿವಿಧ ಭಾಗದಲ್ಲಿ ಭೂ ಕುಸಿತ ಮತ್ತು ಮಳೆಯಿಂದಾಗಿ ರಸ್ತೆಗಳು ಬಂದ್ ಆಗಿವೆ. ಆ ಭಾಗದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ. ಕೊಡಗು ಜಿಲ್ಲಾಡಳಿತ ನೀಡಿರುವ ಪಟ್ಟಿ ಇಲ್ಲಿದೆ..
ಕೊಡಗಿನಲ್ಲಿ ಬಿರುಸಾಗಿದೆ ಮಳೆ; ಅಲ್ಲಲ್ಲಿ ಅನಾಹುತ
* ಮಡಿಕೇರಿ-ವಿರಾಜಪೇಟೆ ರಸ್ತೆ ಬಂದ್ (ಪರ್ಯಾಯ ಮಾರ್ಗ : ಮಡಿಕೇರಿ-ಹಾಕತ್ತೂರು-ಮೂರ್ನಾಡು-ಕೊಂಡಂಗೇರಿ-ಹಾಲುಗುಂದ-ವಿರಾಜಪೇಟೆ)
* ಸಿದ್ಧಾಪುರ-ಕರಡಿಗೋಡು ರಸ್ತೆ ಬಂದ್ ( ಪರ್ಯಾಯ ಮಾರ್ಗ : ಮೈಸೂರು ರಸ್ತೆ- ಆರೆಂಜ್ ಕೌಂಟಿ ರಸ್ತೆ- ಕರಡಿಗೋಡು)
ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ ತ್ರಿವೇಣಿಸಂಗಮದ ಪ್ರವಾಹ ಭೀಕರತೆ
* ಮಡಿಕೇರಿ-ವಿರಾಜಪೇಟೆ-ಮಾಕುಟ್ಟ ಬಂದ್ (ಪರ್ಯಾಯ ಮಾರ್ಗ : ಮಡಿಕೇರಿ- ಹಾಕತ್ತೂರು-ಮೂರ್ನಾಡು-ಕೊಂಡಂಗೇರಿ-ಹಾಲುಗುಂದ-ವಿರಾಜಪೇಟೆ-ಗೋಣಿಕೊಪ್ಪ-ಪೊನ್ನಂಪೇಟೆ-ಕುಟ್ಟ-ಮಾಕುಟ್ಟ)
* ಮೂರ್ನಾಡು-ನಾಪೋಕ್ಲು ರಸ್ತೆ ಬಂದ್ (ಪರ್ಯಾಯ ಮಾರ್ಗ : ಹೊದ್ದೂರು- ಬಲಮುರಿ-ಪಾರಾಣೆ-ನಾಪೋಕ್ಲು)
* ಸಿದ್ದಾಪುರ-ಕೊಂಗಂಗೇರಿ ರಸ್ತೆ ಬಂದ್ : ಪರ್ಯಾಯ ಮಾರ್ಗ (ಒಂಟಿಯಂಗಡಿ-ದೇವಣಗೇರಿ-ಹಾಲುಗುಂದ-ಕೊಂಡಗೇರಿ)
* ಗಾಳಿಬೀಡು-ಪಾಟೆ-ಕಾಲೂರು ರಸ್ತೆ ಬಂದ್ (ಪರ್ಯಾಯ ಮಾರ್ಗ : ಕೆ.ನಿಡುಗಣೆ-ಹೆಬ್ಬಟ್ಟಗೇರಿ-ದೇವಸ್ಥೂರು-ಕಾಲೂರು)