ಮುಗಿಯದ ಆತಂಕ: ಕೊಡಗು ಜಿಲ್ಲೆಯಲ್ಲಿ ಮತ್ತೆ ರೆಡ್‌ ಅಲರ್ಟ್

ಕೊಡಗು, ಆಗಸ್ಟ್ 14: ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈಗ ಮತ್ತೆ ಗುರುವಾರ ಬೆಳಗ್ಗೆಯವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕೇಂದ್ರ ಹವಾಮಾನ ಇಲಾಖೆ ಆದೇಶದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದುವರೆಗೆ ಮೃತರ ಸಂಖ್ಯೆ 10ಕ್ಕೇರಿದೆ. 7 ಮಂದಿ ಕಾಣೆಯಾಗಿದ್ದು ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

2018ರಲ್ಲಿ ಆದ ಪ್ರವಾಹ ಈ ಬಾರಿಯು ಸಂಭವಿಸಬಹುದು ಎನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ. ಈಗಾಗಲೇ ಮನೆ, ಜಮೀನುಗಳನ್ನು ಕಳೆದುಕೊಂಡು ಅಂತಂತ್ರ ಸ್ಥಿತಿಯಲ್ಲಿದ್ದ ಜನರು ಮತ್ತೆ ತಮ್ಮ ಸೂರುಗಳನ್ನು ಕಟ್ಟಿಕೊಂಡು ಸಹಜ ಜೀವನದತ್ತ ಮುಖಮಾಡುತ್ತಿದ್ದರು.

Red Alert Declared in Kodagu Once Again

ಈಗ ಮತ್ತದೇ ಸ್ಥಿತಿ ನಿರ್ಮಾಣವಾಗುವಂತಹ ಭಯ ಕಾಡುತ್ತಿದೆ. ಒಂದು ದಿನ ಕೊಡಗಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಒಂದು ದಿನದಿಂದ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು. ಇಷ್ಟು ದಿನ ಆಗಿರುವ ಅನಾಹುತವೇ ಸಾಕು ಕೊಡಗು ಜಿಲ್ಲೆಗೆ ಈಗ ಮಳೆ ಬೇಡ ಎಂದು ಜನರು ಕಣ್ಣೀರು ಹಾಕುತ್ತಿದ್ದಾರೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಭೂಕುಸಿತ ಉಂಟಾಗುತ್ತಿದ್ದು, ಏಳು ಮಂದಿ ಕಾಣೆಯಾಗಿದ್ದಾರೆ. ಮನೆಗಳ ಮೇಲೆ ಗುಡ್ಡ ಕುಸಿದಿದ್ದು ಹಲವರು ಮಣ್ಣಿನೊಳಗೆ ಸಿಲುಕಿಕೊಂಡಿದ್ದಾರೆ. ಹೀಗೆಯೇ ಮಳೆ ಮುಂದುವರೆದರೆ 2018ರಲ್ಲಿ ನಿರ್ಮಾಣವಾಗಿದ್ದ ಪರಿಸ್ಥಿತಿಯೇ ಮರುಕಳಿಸುವುದರಲ್ಲಿ ಸಂದೇಹವೇ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+