ಅಪ್ರಾಪ್ತೆಯರಿಗೆ ಲೈಂಗಿಕ ಕಿರುಕುಳ ನೀಡಿ, ನಾಪತ್ತೆಯಾದ ಆಟೋ ಚಾಲಕ!

ಮಡಿಕೇರಿ, ನವೆಂಬರ್ 21: ಶಾಲೆಯಿಂದ ಮನೆಗೆ ತೆರಳುತ್ತಿದ್ದ ಅಪ್ರಾಪ್ತ ಶಾಲಾ ಬಾಲಕಿಯರನ್ನು ಪುಸಲಾಯಿಸಿದ ಆಟೋ ಚಾಲಕನೊಬ್ಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ದೈಹಿಕ ಸಂಬಂಧಕ್ಕೆ ಯತ್ನಿಸಿದ್ದು ಅವರು ವಿರೋಧ ವ್ಯಕ್ತಪಡಿಸಿದಾಗ ದಾರಿ ಮಧ್ಯೆ ಬಿಟ್ಟು ಆಟೋ ಸಮೇತ ಪರಾರಿಯಾಗಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

ಸುಂಟಿಕೊಪ್ಪದ ಬಾಳೆಕಾಡು ನಿವಾಸಿ ಆಟೋ ಚಾಲಕ ಪ್ರಕಾಶ್ ಎಂಬಾತನೇ ಇಬ್ಬರು ಅಪ್ರಾಪ್ತ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾದವನು. ಈತ ಸುಂಟಿಕೊಪ್ಪದಲ್ಲಿ ಆಟೋ(ಕೆಎ12-ಎ.2253) ಓಡಿಸುತ್ತಿದ್ದ. ಶಾಲೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯರನ್ನು ಪರಿಚಯಿಸಿಕೊಂಡು, ಅವರನ್ನು ಆಟೋದಲ್ಲಿ ಮನೆಗೆ ಬಿಡುವುದಾಗಿ ನಂಬಿಸಿ, ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.

Police file complaint against an auto driver in sexual harassment case

ಸುಂಟಿಕೊಪ್ಪ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬಳಿ ಸಂಜೆ ವೇಳೆ ವಾಹನದಲ್ಲಿ ಗಸ್ತು ತೆರುಳುತ್ತಿದ್ದಾಗ ಅಪಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಚಲನ-ವಲನ ಗಮನಿಸಿ ವಿಚಾರಿಸಿದಾಗ ತಬ್ಬಿಬ್ಬಾದ ವಿದ್ಯಾರ್ಥಿಗಳು ಸರಿಯಾಗಿ ಉತ್ತರಿಸದಿದ್ದಾಗ ಠಾಣೆಗೆ ಕರೆತಂದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಪೋಷಕರು ವಿಚಾರಿಸಿದಾಗ ಬಾಲಕಿಯರು ಆಟೋ ಚಾಲಕ ಪ್ರಕಾಶ್ ಲೈಂಗಿಕ ಕಿರುಕುಳ ನೀಡಿರುವುದನ್ನು ಹೇಳಿದ್ದಾರೆ.

ಬಳಿಕ ವಿದ್ಯಾರ್ಥಿನಿಯರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆ ಪೊಲೀಸರು ಆಟೋ ಚಾಲಕ ಪ್ರಕಾಶ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ತಾನು ಮಾಡಿದ ಘನಂದಾರಿ ಕೆಲಸದ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಆರೋಪಿ ಪ್ರಕಾಶ ತನ್ನ ಆಟೋ ಸಹಿತ ನಾಪತ್ತೆಯಾಗಿದ್ದಾನೆ. ಇದೀಗ ಪೊಲೀಸರು ಆತನ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+