ಮತ್ತೆ ಚುರುಕಾದ ಮುಂಗಾರು: ಕೊಡಗಿನಲ್ಲಿ ಆರೆಂಜ್‌ ಅಲರ್ಟ್ ಘೋಷಣೆ

ಮಡಿಕೇರಿ, ಆಗಸ್ಟ್ 03: ಕೊಡಗು ಜಿಲ್ಲೆಯಲ್ಲಿ ಭಾನುವಾರದಿಂದಲೇ ಮುಂಗಾರು ಮಳೆ ಚುರುಕಾಗಿದ್ದು, ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ಈ ಕುರಿತು ಜನರಿಗೆ ಎಚ್ಚರಿಕೆಯನ್ನೂ ನೀಡಿದೆ.

ಸೋಮವಾರ (ಇಂದು) ಮತ್ತು ಮಂಗಳವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಹವಾಮಾನ ಇಲಾಖೆಯ ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ 64.5 ರಿಂದ 115.5 ಮಿ.ಮೀ ಗಳವರೆಗೆ ಮಳೆ ಆಗಲಿದೆ.

ದಿನಾಂಕ 4 ರಿಂದ 7 ರ ಬೆಳಿಗ್ಗೆ ವರೆಗೆ ಆರೆಂಜ್‌ ಅಲರ್ಟ್ ಘೋಷಿಸಲಾಗಿದ್ದು, 104.5 ರಿಂದ 215.5 ಮಿ.ಮೀ ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Monsoon Rain: Orange Alert Announcement At Kodagu District

ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಜನತೆಗೆ ನೆರವಾಗಲು 24x7 ಸಹಾಯವಾಣಿಯನ್ನು ಅರಂಭಿಸಲಾಗಿದ್ದು, ತೊಂದರೆಗೆ ಈಡಾದವರು 08272-221077 ಗೆ ಕರೆ ಮಾಡುವ ಮೂಲಕ ನೆರವನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Monsoon Rain: Orange Alert Announcement At Kodagu District

ಇದಲ್ಲದೆ ಎನ್‌.ಡಿ.ಆರ್.ಎಫ್ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕೆಂದು ಕೋರಲಾಗಿದೆ. ಕಳೆದ ಎರಡು ವರ್ಷಗಳಿಂದ ಆಗಸ್ಟ್‌ ತಿಂಗಳಿನಲ್ಲಿ ಜಿಲ್ಲೆಯ ಕೆಲವೆಡೆ ಮಳೆ ತೀವ್ರವಾದ ಸಂದರ್ಭದಲ್ಲಿ ಭೂ ಕುಸಿತ ಮತ್ತು ಮನೆಗಳು ಕುಸಿತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+