Monsoon 2024: ಕೊಡಗಿನಲ್ಲಿ ತಗ್ಗಿದ ಮಳೆಯ ಅಬ್ಬರ

ಮಡಿಕೇರಿ, ಆಗಸ್ಟ್ 06: ಕೊಡಗು ಜಿಲ್ಲೆಯ ಮುಂಗಾರು ಮಳೆಯ ಆರ್ಭಟ ಕಡಿಮೆಯಾಗಿದೆ. ಜುಲೈ ತಿಂಗಳಿನಲ್ಲಿ ಬಿಡುವು ನೀಡದಂತೆ ಸುರಿದು ಪ್ರವಾಹ ಪರಿಸ್ಥಿತಿ ಉಂಟು ಮಾಡಿದ್ದ ಮಳೆರಾಯ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ವಿರಾಮ ಪಡೆದಿದ್ದಾನೆ. ಉತ್ತಮವಾಗಿ ಮಳೆಯಾದ ಕಾರಣ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿ ಸಾಗಿವೆ. ನದಿ, ಹಳ್ಳ-ಕೊಳ್ಳಗಳಲ್ಲಿ ನೀರಿನ ಅಬ್ಬರ ಕಡಿಮೆಯಾಗಿದೆ.

ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 4.23 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 6.93 ಮಿ. ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ತನಕ ಸುರಿದ ಮಳೆ 2,298.82 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,197.17 ಮಿ. ಮೀ ಮಳೆಯಾಗಿತ್ತು.

Monsoon 2024 Rains Receded In Kodagu District

ತಾಲೂಕುವಾರು ಮಳೆ ಕಡಿಮೆ: ತಾಲೂಕುವಾರು ಸುರಿದಿರುವ ಮಳೆಯ ಮಾಹಿತಿಯನ್ನು ಸಹ ಜಿಲ್ಲಾಡಳಿತ ನೀಡಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಸುರಿದ ಮಳೆ 8.95 ಮಿ. ಮೀ., ಕಳೆದ ವರ್ಷ ಇದೇ ದಿನ 10.18 ಮಿ. ಮೀ. ಮಳೆಯಾಗಿತ್ತು. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 3,194.01 ಮಿ. ಮೀ. ಮಳೆಯಾಗಿದೆ.

ವಿರಾಜಪೇಟೆ ತಾಲೂಕಿನಲ್ಲಿ ಸುರಿದ ಸರಾಸರಿ ಮಳೆ 0.00 ಮಿ. ಮೀ., ಕಳೆದ ವರ್ಷ ಇದೇ ದಿನ 0.90 ಮಿ. ಮೀ. ಮಳೆಯಾಗಿತ್ತು. ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 2,114.70 ಮಿ. ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 922.36 ಮಿ. ಮೀ. ಮಳೆಯಾಗಿತ್ತು.

ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ಸುರಿದ ಮಳೆ 4.75 ಮಿ. ಮೀ., ಕಳೆದ ವರ್ಷ ಇದೇ ದಿನ 2.13 ಮಿ. ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯ ತನಕ 2,186.05 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 956.07 ಮಿ. ಮೀ. ಮಳೆ ಸುರಿದಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 4.75 ಮಿ. ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 17.65 ಮಿ. ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 2611.36 ಮಿ. ಮೀ.

ಇನ್ನು ಕುಶಾಲನಗರ ತಾಲೂಕಿನಲ್ಲಿ ಸರಾಸರಿ ಮಳೆ 2.70 ಮಿ. ಮೀ., ಕಳೆದ ವರ್ಷ ಇದೇ ದಿನ 3.80 ಮಿ. ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1388 ಮಿ. ಮೀ., ಕಳೆದ ವರ್ಷ ಇದೇ ಅವಧಿಯಲ್ಲಿ 775.15 ಮಿ. ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ಮಡಿಕೇರಿ ಕಸಬಾ 3.40, ನಾಪೋಕ್ಲು 3.60, ಸಂಪಾಜೆ 23, ಭಾಗಮಂಡಲ 5.80, ಹುದಿಕೇರಿ 7.60, ಶ್ರೀಮಂಗಲ 1.40, ಪೊನ್ನಂಪೇಟೆ 4, ಬಾಳೆಲೆ 6.02, ಸೋಮವಾರಪೇಟೆ ಕಸಬಾ 5.60, ಶನಿವಾರಸಂತೆ 3, ಶಾಂತಳ್ಳಿ 8, ಕೊಡ್ಲಿಪೇಟೆ 2.40, ಕುಶಾಲನಗರ 2.40, ಸುಂಟಿಕೊಪ್ಪ 3 ಮಿ. ಮೀ.ಮಳೆಯಾಗಿದೆ.

ಜಿಲ್ಲೆಯ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಸದ್ಯದ ನೀರಿನ ಮಟ್ಟ 2854.55 ಅಡಿಗಳು. ಒಳಹರಿವು 5,171 ಕ್ಯುಸೆಕ್, ಹೊರ ಹರಿವು ನದಿಗೆ 1000 ಕ್ಯುಸೆಕ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+