ಕೊಡಗು ಜಿಲ್ಲೆ ಮಳೆ ವಿವರ, ಹಾರಂಗಿ ಅಣೆಕಟ್ಟು ನೀರಿನ ಮಟ್ಟ

ಮಡಿಕೇರಿ ಆ.17: ಕೊಡಗಿನಲ್ಲಿ ಒಂದು ವಾರದ ಹಿಂದೆ ಭಾರಿ ಗಾಳಿ ಸಹಿತ ಧಾರಾಕಾರವಾಗಿ ಮಳೆ ದಾಖಲಾಗಿ, ನದಿ ತೊರೆಗಳು ಉಕ್ಕಿಹರಿದಿತ್ತು. ಹಲವಾರು ಪ್ರದೇಶಗಳು ಜಲಾವೃತವಾಗುವುದರೊಂದಿಗೆ, ಅಲ್ಲಲ್ಲಿ ಭೂಕುಸಿತ ಸಂಭವಿಸಿತ್ತು. ಈ ವಾರ ಮಳೆ ಅಬ್ಬರ ಕೊಂಚ ತಗ್ಗಿದೆ. ಕೊಡಗು ಜಿಲ್ಲೆ ಮಳೆ ವಿವರ, ಹಾರಂಗಿ ಅಣೆಕಟ್ಟು ನೀರಿನ ಮಟ್ಟ ವಿವರ ಇಲ್ಲಿದೆ...

Recommended Video

      Lakshmi Hebbalkar ಪುತ್ರನ ನಿಶ್ಚಿತಾರ್ಥಕ್ಕೆ ಎಲ್ಲಾ ಪಕ್ಷದವರಿಗೂ ಆಮಂತ್ರಣ | Oneindia Kannada

      ಕೊಡಗು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 15.94 ಮಿ.ಮೀ. ಕಳೆದ ವರ್ಷ ಇದೇ ದಿನ 16.56 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1770.54 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1889.19 ಮಿ.ಮೀ ಮಳೆಯಾಗಿತ್ತು.

      ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 11.10 ಮಿ.ಮೀ. ಕಳೆದ ವರ್ಷ ಇದೇ ದಿನ 28.20 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2500.13 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2512.74 ಮಿ.ಮೀ. ಮಳೆಯಾಗಿತ್ತು.

      Kodagu rain recored this season, Harangi Dam water level on Aug 17

      ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 17.58 ಮಿ.ಮೀ. ಕಳೆದ ವರ್ಷ ಇದೇ ದಿನ 12.87 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1624.29 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1899.07 ಮಿ.ಮೀ. ಮಳೆಯಾಗಿತ್ತು.

      ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 19.13 ಮಿ.ಮೀ. ಕಳೆದ ವರ್ಷ ಇದೇ ದಿನ 8.60 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1187.19 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1255.77 ಮಿ.ಮೀ. ಮಳೆಯಾಗಿತ್ತು.

      ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 6.60, ನಾಪೋಕ್ಲು 15, ಸಂಪಾಜೆ 1, ಭಾಗಮಂಡಲ 21.80, ವಿರಾಜಪೇಟೆ ಕಸಬಾ 6, ಹುದಿಕೇರಿ 34.50, ಶ್ರೀಮಂಗಲ 30, ಪೊನ್ನಂಪೇಟೆ 21, ಅಮ್ಮತ್ತಿ 3, ಬಾಳೆಲೆ 11, ಸೋಮವಾರಪೇಟೆ ಕಸಬಾ 13.20, ಶನಿವಾರಸಂತೆ 25, ಶಾಂತಳ್ಳಿ 41, ಕೊಡ್ಲಿಪೇಟೆ 30, ಕುಶಾಲನಗರ 1.60, ಸುಂಟಿಕೊಪ್ಪ 4 ಮಿ.ಮೀ.ಮಳೆಯಾಗಿದೆ.

      Kodagu rain recored this season, Harangi Dam water level on Aug 17

      ಹಾರಂಗಿ ಜಲಾಶಯದ ನೀರಿನ ಮಟ್ಟ (ಆಗಸ್ಟ್ 17-08-2020 ರಂತೆ)
      ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2858.16 ಅಡಿಗಳು, ಕಳೆದ ವರ್ಷ ಇದೇ ದಿನ 2857.93 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 1.50 ಮಿ.ಮೀ., ಕಳೆದ ವರ್ಷ ಇದೇ ದಿನ 6.40 ಮಿ.ಮೀ. ಇಂದಿನ ನೀರಿನ ಒಳಹರಿವು 1364 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 4783 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 1100, ನಾಲೆಗೆ 200. ಕಳೆದ ವರ್ಷ ಇದೇ ದಿನ ನದಿಗೆ 1125, ನಾಲೆಗೆ 1600 ಕ್ಯುಸೆಕ್.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+