ಕೊಡಗು ಪೊಲೀಸ್‌ ಶ್ವಾನದಳದ Rambo ಹೃದಯಾಘಾತದಿಂದ ಮೃತ: ಗೌರವ ಪೂರ್ಣ ನಮನ

ಮಡಿಕೇರಿ, ಅಕ್ಟೋಬರ್ 8: ಕೊಡಗು ಜಿಲ್ಲಾ ಪೊಲೀಸ್‌ ಶ್ವಾನದಳದ Rambo ಎಂಬ ಹೆಸರಿನ 7 ವರ್ಷದ ಶ್ವಾನ ಇಂದು ಹೃದಯಾಘಾತದಿಂದ ಮೃತಪಟ್ಟಿದೆ.

ಈ ಶ್ವಾನವು ಕೊಡಗು ಪೊಲೀಸ್‌ ಇಲಾಖೆಯ ಶ್ವಾನ ದಳದ ನಾಲ್ಕು ಶ್ವಾನಗಳಲ್ಲಿ ಒಂದಾಗಿದ್ದು, ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡಿತ್ತು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಡಿಎಆರ್ ಇನ್ಸ್ ಪೆಕ್ಟರ್ ರಾಚಯ್ಯ ಅವರು Rambo ಸುಮಾರು ನಾಲ್ಕು ನೂರಕ್ಕೂ ಹೆಚ್ಚಿನ ತಪಾಸಣೆ, ತನಿಖೆ ಕಾರ್ಯದಲ್ಲಿ ಕೆಲಸ ಮಾಡಿತ್ತು ಎಂದು ಹೇಳಿದರು.

ಚುರುಕಾಗಿದ್ದ ಈ Rambo ನಾಯಿಯು ವಿಐಪಿ ಭದ್ರತೆ, ಸ್ಪೋಟಕ ತಪಾಸಣೆ, ಬಂದೋಬಸ್ತ್, ಕಳ್ಳತನ, ಕೊಲೆ ತನಿಖೆ ಕಾರ್ಯದಲ್ಲಿ ಪೊಲೀಸರ ಒಡನಾಡಿ ಆಗಿತ್ತು. ಇದನ್ನು ಮೊದಲಿನಿಂದಲೂ ಹ್ಯಾಂಡ್ಲರ್‌ ಸುಕುಮಾರ್‌ ಅವರು ನೋಡಿಕೊಳ್ಳುತ್ತಿದ್ದು, ಶ್ವಾನದ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.

Kodagu Police Dog Squad Member, 7-Year-Old Rambo, Passed Away While On Duty In Mangaluru

ಕೊಡಗು ಜಿಲ್ಲಾ ಸಶಸ್ತ್ರದಳದ ಆವರಣದಲ್ಲಿ ಇಂದು ಶ್ವಾನದ ಪಾರ್ಥಿವ ಶರೀರಕ್ಕೆ ಇಲಾಖೆ ಅಧಿಕಾರಿಗಳಿಂದ ಪುಷ್ಪ ಗುಚ್ಛವನ್ನು ಇರಿಸಿ ಇಲಾಖಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+