ಕೊಡಗು; ಇನ್ನು ಮೈಸೂರಿನಿಂದ ಆಕ್ಸಿಜನ್ ತರಿಸುವುದು ಬೇಡ

ಮಡಿಕೇರಿ, ಅಕ್ಟೋಬರ್ 04: ರೋಗಿಗಳಿಗಾಗಿ ಮೈಸೂರಿನಿಂದ ಕೊಡಗು ಜಿಲ್ಲೆಗೆ ಆಮ್ಲಜನಕ ಸಿಲಿಂಡರ್ ತರಿಸುವುದು ಕೆಲವೇ ದಿನಗಳಲ್ಲಿ ತಪ್ಪಲಿದೆ. ಮಡಿಕೇರಿಯಲ್ಲಿನ ಆಸ್ಪತ್ರೆಯಲ್ಲಿಯೇ ಆಮ್ಲಜನಕವು ರೋಗಿಗಳ ಸೇವೆಗೆ ದೊರೆಯಲಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ಕೋವಿಡ್ ಆಸ್ಪತ್ರೆ ಆವರಣದಲ್ಲಿ 13,000 ಲೀಟರ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಾಮರ್ಥ್ಯದ ಆಕ್ಸಿಜನ್ ಸ್ಥಾವರ ಅಳವಡಿಕೆ ಮಾಡಲಾಗುತ್ತಿದೆ. ಒಂದು ವಾರದಲ್ಲಿ ಕಾಮಗಾರಿ ಮುಗಿಯಲಿದೆ.

ಪ್ರಸ್ತುತ ಸ್ಥಾವರದಲ್ಲಿ ಆಮ್ಲಜನಕದ ಸಂಗ್ರಹ ಅವಧಿ 2 ದಿನಗಳಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರುವ ಸಮಯದಲ್ಲಿ ಸ್ಥಾವರದಲ್ಲಿ 15 ದಿನಗಳವರೆಗೆ ಬೇಕಾಗುವಷ್ಟು ಆಮ್ಲಜನಕ ಸಂಗ್ರಹ ಇರುತ್ತದೆ. ಕೋವಿಡ್ ಹೊರತುಪಡಿಸಿ ಉಳಿದ ಸಮಯದಲ್ಲಿ 2 ರಿಂದ 3 ತಿಂಗಳವರೆಗೆ ಬೇಕಾಗುವಷ್ಟು ಆಮ್ಲಜನಕದ ಸಂಗ್ರಹ ಇರಲಿದೆ.

Kodagu Hospital Set Up Liquid Oxygen Cylinder Plant

ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಪ್ರತಿದಿನ ಮೈಸೂರಿನಿಂದ ಆಮ್ಲಜನಕವನ್ನು ಮಡಿಕೇರಿಗೆ ತರಿಸಲಾಗುತ್ತಿತ್ತು. ಈ ಸ್ಥಾವರ ನಿರ್ಮಾಣದಿಂದ ಪ್ರತಿನಿತ್ಯ ಮೈಸೂರಿನಿಂದ ಮಡಿಕೇರಿಗೆ ಆಮ್ಲಜನಕ ಸಾಗಣಿಕೆ ಮಾಡುವುದು ತಪ್ಪಲಿದೆ.

ಮುಂದಿನ ದಿನಗಳಲ್ಲಿ ಕೋವಿಡ್ ಆಸ್ಪತ್ರೆ ಬ್ಲಾಕ್‌ನಲ್ಲಿ ಒಂದು ಬಾರಿ ಸಂಗ್ರಹವಾದ ಲಿಕ್ವಿಡ್ ಆಕ್ಸಿಜನ್‌ ಅನ್ನು 300 ಆಕ್ಸಿಜನ್ ಕೇಂದ್ರೀತ ಹಾಸಿಗೆಗಳಿಗೆ ನಿರಂತರವಾಗಿ 15 ದಿನಗಳ ಕಾಲ ಪೂರೈಕೆ ಮಾಡಬಹುದಾಗಿದೆ.

Kodagu Hospital Set Up Liquid Oxygen Cylinder Plant

ಪ್ರವಾಹ, ಭೂ ಕುಸಿತ ಸೇರಿದಂತೆ ರಸ್ತೆ ಸಂಪರ್ಕ ಕಡಿತಗೊಂಡಂತಹ ಸಂದರ್ಭಗಳಲ್ಲೂ ಸಹ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಉತ್ತಮ ಸಂಗ್ರಹವಿರುತ್ತದೆ. ಇದರಿಂದ ಜಿಲ್ಲೆಯ ಜನರಿಗೆ ಸಹಾಯಕವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+