ಕೊಡಗಿನಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ: ಇದುವರೆಗೆ ಸುರಿದ ಮಳೆ ಎಷ್ಟು?

ಮಡಿಕೇರಿ, ಅಕ್ಟೋಬರ್‌ 25: ಕೊಡಗಿನಲ್ಲಿ ಈ ಬಾರಿ ಬೇಡ ಬೇಡವೆಂದರೂ ಮಳೆ ಸುರಿಯುತ್ತಿದೆ. ಮೇನಿಂದ ಆರಂಭವಾದ ಮಳೆ ಇಲ್ಲಿಯವರೆಗೆ ಸುರಿಯುತ್ತಲೇ ಇದ್ದು ಮಳೆ ಪ್ರಮಾಣ ಮೂರು ಸಾವಿರ ಮಿಲಿ ಮೀಟರ್ ಗೆ ಕೆಲವೇ ಮಿಲಿ ಮೀಟರ್ ಬಾಕಿಯಿದೆ. ಜನವರಿಯಿಂದ ಏಪ್ರಿಲ್ ತನಕವೂ ಸುರಿಯದ ಮಳೆ ಜಿಲ್ಲೆಯ ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಆದರೆ ಮೇ ನಂತರ ಶುರುವಾದ ಮಳೆ ಇಲ್ಲಿವರೆಗೆ ಸುರಿಯುತ್ತಲೇ ಇರುವುದರಿಂದ ಕಾವೇರಿ ಸೇರಿದಂತೆ ನದಿ, ಹೊಳೆ, ಕೆರೆಗಳಲ್ಲಿ ನೀರಿನ ಪ್ರಮಾಣ ಸಮೃದ್ಧವಾಗಿರುವುದು ಕಂಡು ಬರುತ್ತಿದೆ.

ಸಾಮಾನ್ಯವಾಗಿ ಅಕ್ಟೋಬರ್ ತಿಂಗಳ ವೇಳೆಗೆ ಮಳೆ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಕೊಡಗು ಮಾತ್ರವಲ್ಲದೆ ಎಲ್ಲ ಕಡೆಯೂ ಮಳೆ ಸುರಿತ್ತಿದ್ದು, ಅದರಲ್ಲೂ ಕೊಡಗಿನಲ್ಲಿ ತುಸು ಜಾಸ್ತಿಯೇ ಮಳೆ ಸುರಿಯುತ್ತಿದೆ. ಹೀಗಾಗಿ ಕಾಫಿ, ಕರಿಮೆಣಸು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಮಳೆ ಹೀಗೆಯೇ ಮುಂದುವರೆದರೆ ಬೆಳೆಗಾರರಿಗೆ ಸಂಕಷ್ಟ ತಪ್ಪಿದಲ್ಲ. ಇಲ್ಲಿಯ ತನಕ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದ್ದೇ ಆದರೆ ಬಿಡುವು ನೀಡದೆ ಮಳೆ ಸುರಿದಿರುವುದು ಗೋಚರಿಸುತ್ತಿದೆ.

Karnataka Rain How Much Rain Has Fallen In Kodagu District From Last One Week

ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಒಂದು ದಿನದ ಅವಧಿಯಲ್ಲಿ ಸರಾಸರಿ 13.48 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಈ ವೇಳೆಯಲ್ಲಿ ಯಾವುದೇ ಮಳೆ ಸುರಿದಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಕಳೆದ ವರ್ಷ ಮಳೆ ಭಾರೀ ಇಳಿಮುಖವಾಗಿ ಬರದ ವಾತಾವರಣ ನಿರ್ಮಾಣವಾಗಿತ್ತಲ್ಲದೆ, ಕಾವೇರಿ ಉಕ್ಕಿ ಹರಿಯದ ಕಾರಣದಿಂದಾಗಿ ಕೆಆರ್ ಎಸ್ ಜಲಾಶಯವು ಭರ್ತಿಯಾಗಿರಲಿಲ್ಲ. ಆದರೆ ಈ ವರ್ಷ ಕೆಆರ್ ಎಸ್ ಜಲಾಶಯ ಜುಲೈನಲ್ಲಿ ಭರ್ತಿಯಾಗಿದ್ದು, ಇಲ್ಲಿಯವರೆಗೂ ಅದೇ ಮಟ್ಟ ಕಾಪಾಡಿಕೊಂಡಿರುವುದು ಖುಷಿಯ ವಿಚಾರವಾಗಿದೆ.

ಕೊಡಗಿನಲ್ಲಿ 2979.73 ಮಿ.ಮೀ ಮಳೆ

ಇನ್ನು ಜನವರಿಯಿಂದ ಇಲ್ಲಿಯವರೆಗೆ ಈ ವರ್ಷ 2979.73 ಮಿ.ಮೀ ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 1683.51 ಮಿ.ಮೀ ಮಳೆಯಾಗಿತ್ತು. ಒಂದು ದಿನದ ಅವಧಿಯಲ್ಲಿ ಮಡಿಕೇರಿ ತಾಲ್ಲೂಕಿನಲ್ಲಿ 9.15 ಮಿ.ಮೀ. ಮಳೆ ಸುರಿದಿದೆ. ಜತೆಗೆ ಜನವರಿಯಿಂದ ಇಲ್ಲಿಯವರೆಗಿನ 4335.86 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 2830.45 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಒಂದು ದಿನದ ಸರಾಸರಿ 0.75 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 2647.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1398.16 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಒಂದು ದಿನದ ಅವಧಿಯಲ್ಲಿ 18.93 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ 2763.06 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1521.17 ಮಿ.ಮೀ. ಮಳೆಯಾಗಿತ್ತು.

Karnataka Rain How Much Rain Has Fallen In Kodagu District From Last One Week

ಶ್ರೀಮಂಗಲದಲ್ಲಿ ಅತಿ ಹೆಚ್ಚು ಮಳೆ

ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಂದು ದಿನದ ಸರಾಸರಿ 24.05 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 3379.21 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1710.59 ಮಿ.ಮೀ. ಮಳೆಯಾಗಿತ್ತು. ಕುಶಾಲನಗರ ತಾಲ್ಲೂಕಿನಲ್ಲಿ ಒಂದು ದಿನದಲ್ಲಿ 14.50 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಇಲ್ಲಿವರೆಗೆ 1773.08 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 957.20 ಮಿ.ಮೀ. ಮಳೆಯಾಗಿತ್ತು. ಹೋಬಳಿವಾರು ಅತಿ ಹೆಚ್ಚು ಶ್ರೀಮಂಗಲದಲ್ಲಿ 55.40ಮಿ.ಮೀ ಆಗಿದ್ದರೆ ಹುದಿಕೇರಿ 1.30 ಅತಿ ಕಡಿಮ ಮಳೆಯಾಗಿದೆ.

ಗರಿಷ್ಠ 2,859 ಅಡಿಗಳ ಹಾರಂಗಿ ಜಲಾಶಯದಲ್ಲಿ 2856.29 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2852.83 ಅಡಿಯಷ್ಟು ನೀರಿತ್ತು. ಸದ್ಯ ಜಲಾಶಯದ ಒಳಹರಿವು 1647 ಕ್ಯುಸೆಕ್ ಇದ್ದರೆ, ಕಳೆದ ವರ್ಷ ಇದೇ ದಿನ 143 ಕ್ಯುಸೆಕ್ ಇತ್ತು. ಜಲಾಶಯದಿಂದ ನದಿಗೆ 300, ನಾಲೆಗೆ 100 ಕ್ಯುಸೆಕ್. ನೀರನ್ನು ಬಿಡಲಾಗುತ್ತಿದೆ. ಒಟ್ಟಾರೆ ಮಳೆ ಸುರಿಯುತ್ತಿರುವುದು ಜಲಾಶಯಗಳು ಸೇರಿದಂತೆ ಕೆರೆಕಟ್ಟೆಗಳು ಭರ್ತಿಯಾಗಲು ಕಾರಣವಾಗಿದ್ದು, ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+