ಕೊಡಗಿನ ಹೋಂಸ್ಟೇಗಳ ಅಕ್ರಮಕ್ಕಿಲ್ಲವೆ ತಡೆ?

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಏಪ್ರಿಲ್ 20: ಕಳೆದೊಂದು ದಶಕಗಳಿಂದ ಕೊಡಗು ಜಿಲ್ಲೆಯಾದ್ಯಂತ ನಾಯಿಕೊಡೆಗಳಂತೆ ಹೋಂಸ್ಟೇಗಳು ಹುಟ್ಟಿಕೊಂಡಿದ್ದು, ಇವುಗಳ ನಿಯಂತ್ರಣಕ್ಕೆ ತಂದ ಕಾನೂನು ಕಾಯ್ದೆಗಳೆಲ್ಲವೂ ವಿಫಲವಾಗಿವೆ ಎಂದರೆ ತಪ್ಪಾಗಲಾರದೇನೋ!

ಕಾಲು ಹಾಕಿದಲ್ಲೆಲ್ಲ ಹೋಂಸ್ಟೇಗಳು ಸಿಗುತ್ತಿದ್ದರೂ, ಇದುವರೆಗೆ ಕೇವಲ 561 ಹೋಂಸ್ಟೇಗಳು ಮಾತ್ರ ನೋಂದಾವಣೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಅನಧಿಕೃತವಾಗಿ ನಡೆಯುತ್ತಿದ್ದ ಹೋಂಸ್ಟೇಗಳನ್ನು ಅಧಿಕೃತಗೊಳಿಸಲು ಅನುಕೂಲವಾಗುವಂತೆ ನೋಂದಣಿ ಕಾರ್ಯವನ್ನು ಮಾಡಲಾಯಿತಾದರೂ ಕೆಲವೇ ಕೆಲವರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದಂತೆ ಹೆಚ್ಚಿನ ಹೋಂಸ್ಟೇಗಳು ಇನ್ನೂ ಕೂಡ ಅನಧಿಕೃತವಾಗಿಯೇ ನಡೆಯುತ್ತಿದೆ.[ದಿಡ್ಡಳ್ಳಿ ಗುಂಡಿನ ದಾಳಿ ಪ್ರಕರಣ:ಆರೋಪಿ ಬಂಧನ]

Illegal home stays in Madikeri: A headache to district administration

ಕಾಫಿ ದರ ಕುಸಿದ ಸಂದರ್ಭ ಕಾಫಿಗೆ ಪರ್ಯಾಯವಾಗಿ ಬೆಳೆಗಾರರು ಕಂಡು ಕೊಂಡ ಹೋಂಸ್ಟೇ ಉದ್ಯಮ ಹಲವರಿಗೆ ಬದುಕು ಕಟ್ಟಿಕೊಟ್ಟಿದೆ. ದೂರದ ಪಟ್ಟಣದಿಂದ ಬಂದು, ಒಂದಷ್ಟು ದಿನ ಕಾಫಿ ತೋಟಗಳ ನಡುವೆ ಇದ್ದು ಹೋಗುವ ಮಂದಿಗೆ ರಿಲ್ಯಾಕ್ಸ್ ನೀಡುತ್ತಿದೆ. ಆದರೆ ಕೆಲವೆಡೆ ಹೋಂಸ್ಟೇಗಳನ್ನು ಅನೈತಿಕ, ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ಮಾತ್ರ ಈ ಉದ್ಯಮಕ್ಕೆ ಕಪ್ಪು ಚುಕ್ಕೆಯಾಗಿದೆ.

ಹೊರಗಿನಿಂದ ಬಂದು ಇಲ್ಲಿ ಜಾಗ ಖರೀದಿ ಮಾಡಿ ಹೋಂಸ್ಟೇ ನಡೆಸುವ ಕೆಲವರು ಅದನ್ನು ತಮ್ಮ ಅಕ್ರಮ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ. ಹೋಂಸ್ಟೇಗಳಲ್ಲಿ ಸಾಕಷ್ಟು ಅಕ್ರಮಗಳಾಗುತ್ತಿವೆ, ಹೆಚ್ಚಿನ ದರ ವಸೂಲಿ ಮಾಡಿ ಸೂಕ್ತ ಸೌಲಭ್ಯವೂ ಒದಗಿಸುತ್ತಿಲ್ಲ ಎಂಬ ಆರೋಪಗಳು ಕೂಡ ಇವೆ. ಇದೆಲ್ಲವನ್ನು ತಡೆಗಟ್ಟುವ ಸಲುವಾಗಿ ನೋಂದಣಿ ಮಾಡಿ ಪ್ರವಾಸೋದ್ಯಮ ಇಲಾಖೆಯ ಮೂಲಕ ನಿಯಂತ್ರಿಸಲು ಮುಂದಾಗಿದ್ದರೂ ಕೆಲವೇ ಕೆಲವು ಹೋಂಸ್ಟೇಗಳು ಮಾತ್ರ ನೋಂದಾಯಿಸಲ್ಪಟ್ಟಿವೆ.[ಆದಿವಾಸಿ ಗುಡಿಸಿಲಿನ ಮೇಲೆ ಗುಂಡಿನ ದಾಳಿ: ಕೊಡಗಿನಲ್ಲಿ ನಕ್ಸಲರ ಅಟ್ಟಹಾಸ?!]

ಹೋಂಸ್ಟೇ ನಿರ್ಮಾಣದ ಬಳಿಕ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ವ್ಯಾಪಾರ ವಹಿವಾಟು ವೃದ್ಧಿಯಾಗಿದೆ. ಮೊದಲೆಲ್ಲ ವಸತಿ, ಸಾರಿಗೆ ವ್ಯವಸ್ಥೆಗಳು ಸಮರ್ಪಕವಾಗಿಲ್ಲದ ಕಾರಣ ಇಲ್ಲಿಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದರು. ಈಗ ಹಾಗಿಲ್ಲ. ಎಲ್ಲ ವ್ಯವಸ್ಥೆಗಳು ಇರುವುದರಿಂದ ನಿರ್ಭಯವಾಗಿ ಪ್ರವಾಸಿಗರು ಬರುವಂತಾಗಿದೆ. ಇತರ ಕಡೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಹೋಂಸ್ಟೇಗಳು ಕೊಡಗಿನಲ್ಲಿವೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. [ಕೊಡವ ಹಾಕಿ ಹಬ್ಬಕ್ಕೆ ಸಜ್ಜಾದ ನಾಪೋಕ್ಲು, ಏ. 17ರಿಂದ ಆರಂಭ]

ಕೆಲವರು ಹಣ ಸಂಪಾದಿಸುವುದಷ್ಟೆ ಏಕೈಕ ಉದ್ದೇಶ ಎಂದುಕೊಂಡಿರುವುದರಿಂದ ಅಂಥವರು ಹೋಂಸ್ಟೇಗಳನ್ನು ಅಕ್ರಮಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಇಸ್ಪಿಟ್, ವೇಶ್ಯಾವಾಟಿಕೆ ಮೊದಲಾದ ದಂಧೆಗಳಿಗೂ ಅವಕಾಶ ಮಾಡಿಕೊಡಲಾಗುತ್ತಿದೆ. ಇದೇ ತಲೆನೋವಾಗಿ ಪರಿಣಮಿಸಿದೆ.

ಇನ್ನು ಮುಂದೆಯಾದರೂ ಜಿಲ್ಲಾಡಳಿತ ಅನಧಿಕೃತವಾಗಿ ಹೋಂಸ್ಟೇ ನಡೆಸುವವರ ವಿರುದ್ಧ ಕ್ರಮ ಕೈಗೊಂಡರೆ ಬಹುಶಃ ಅಕ್ರಮ ಚಟುವಟಿಕೆಗಳಿಗೆ ಇವು ಬಳಕೆಯಾಗುವುದಕ್ಕೆ ಕಡಿವಾಣ ಹಾಕಬಹುದೇನೋ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Illegal home stays in Madikeri district have become a headache to the district administration. To control unregistered home stays, district administration took so many decisions, but unfortunately those decisions have not fulfilled yet!
Please Wait while comments are loading...