ಮನಕಲಕುವ ವಿಡಿಯೋ; ಸತ್ತ ಕಂದನ ಏಳಿಸಲು ಶ್ವಾನದ ಮೂಕ ರೋದನೆ

ಮಡಿಕೇರಿ, ಅಕ್ಟೋಬರ್ 22: ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ತನ್ನ ಕಂದನನ್ನು ಏಳಿಸಲು ಆ ಶ್ವಾನ ಪಡುತ್ತಿದ್ದ ಕಷ್ಟ ನೋಡುಗರ ಕಣ್ಣಲ್ಲಿ ಹನಿ ಮೂಡಿಸಿತ್ತು. ಸಾವನ್ನಪ್ಪಿದ ತನ್ನ ಪುಟ್ಟ ಮರಿಯನ್ನು ಹೇಗಾದರೂ ಬದುಕಿಸಬೇಕು ಎನ್ನುವಂತೆ ಆ ಶ್ವಾನ ಹೆಣಗಾಡುತ್ತಿದ್ದ ದೃಶ್ಯ ಮನಕಲಕುವಂತೆ ಮಾಡಿತ್ತು.

ಕೊಡಗಿನ ಶನಿವಾರಸಂತೆಯಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂತು. ರಸ್ತೆ ದಾಟುವಾಗ ಅಕಸ್ಮಾತ್ ಆಗಿ ಪುಟ್ಟ ನಾಯಿ ಮರಿ ವಾಹನವೊಂದಕ್ಕೆ ಸಿಲುಕಿ ಸಾವನ್ನಪ್ಪಿತ್ತು. ಆದರೆ ಅದರ ತಾಯಿ, ತನ್ನ ಮರಿ ಸತ್ತು ಹೋಗಿದ್ದರೂ ಅದನ್ನು ಎಬ್ಬಿಸುವ ಕಾರ್ಯದಲ್ಲಿ ಮಗ್ನವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಏಳದ ಮರಿಯನ್ನು ಕಂಡು ಆತಂಕಗೊಂಡು ಅದರ ಸುತ್ತಮುತ್ತಲೇ ಸುಳಿದಾಡುತ್ತಿತ್ತು.

Heartbreaking moment a dog tries to wake up Its dead puppy

ಕೊನೆಗೆ ಆ ನಿರ್ಜೀವ ಮರಿಯನ್ನು ನೇವರಿಸಿ ಪರಿತಪಿಸುತ್ತಾ, ಯಾರೇ ಬಂದರೂ ಕದಲದೇ ಅಲ್ಲೇ ನಿಂತಿತ್ತು. ರಸ್ತೆ ಬದಿ ಅದನ್ನು ಕೊಂಡೊಯ್ಯಲು ಎಷ್ಟೋ ಹೊತ್ತಿನವರೆಗೂ ಬಿಡದೇ ಪ್ರಯತ್ನ ನಡೆಸಿತು. ತನ್ನ ಮರಿಗಾಗಿ ಆ ತಾಯಿ ಶ್ವಾನ ಶತಪ್ರಯತ್ನ ನಡೆಸಿದ ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ತಾಯಿ ಪ್ರೇಮವನ್ನು, ಶ್ವಾನದ ಮೂಕ ರೋದನೆಯನ್ನು ಈ ವಿಡಿಯೋ ತೆರೆದಿಟ್ಟಿದೆ.

Recommended Video

      Mohammed Siraj ಬೆಳೆದು ಬಂದ ಹಾದಿ , ಹಾಗು IPLಗೆ ಪ್ರವೇಶ ಹೇಗಿತ್ತು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+