ಎಮ್‌ಆರ್‌ಎಫ್ ರೇಸ್ ನಲ್ಲಿ ಕೊಡಗಿನ ಧನುಷ್ ಮಿಂಚಿಂಗ್
ಮಡಿಕೇರಿ, ಡಿಸೆಂಬರ್ 7: ಕೊಡಗು ಜಿಲ್ಲೆಯ ಯುವಕ ಧನುಷ್ ಎಮ್‌ಆರ್‌ಎಫ್ ಮೊ ಗ್ರಿಪ್ ರಾಷ್ಟ್ರಮಟ್ಟದ ರೇಸ್ ನಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ.
ಇತ್ತೀಚಿಗೆ ಪುತ್ತೂರಿನ ಪಂಜದಲ್ಲಿ ನಡೆದ ಪ್ರೀ ಕ್ವಾಲಿಫೈಡ್ ರೌಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರವೇಶ ಪಡೆದ ಧನುಷ್, ಭಾನುವಾರ ಬೆಂಗಳೂರಿನಲ್ಲಿ ನಡೆದ ಎಮ್‌ಆರ್‌ಎಫ್ ರಾಷ್ಟ್ರಮಟ್ಟದ ರೇಸ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಮಟ್ಟದ ರೇಸ್ ನಲ್ಲಿ ಕೊಡಗಿನಿಂದ ಸ್ಪರ್ಧಿಸಿದ ಏಕೈಕ ಬೈಕ್ ರೇಸ್ ಪಟು ಧನುಷ್ ಆಗಿದ್ದು, ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

21 ವರ್ಷದ ಧನುಷ್ ಅವರು ಮಡಿಕೇರಿ ತಾಲೂಕಿನ ಸುಂಟಿಕೊಪ್ಪ ನಿವಾಸಿಯಾಗಿದ್ದು, ಇವರು ಶ್ರೀಮತಿ ರೇಖಾ ಹಾಗೂ ದಿಲೀಪ್ ಕುಮಾರ್ ಅವರ ಪುತ್ರನಾಗಿದ್ದಾನೆ.

ಸಣ್ಣ ವಯಸ್ಸಿನಿಂದಲೇ ಬೈಕ್ ರೇಸ್ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದ ಧನುಷ್ ಈ ಪ್ರತಿಷ್ಠಿತ ರೇಸ್ ನಲ್ಲಿ ಗೆಲುವು ಸಾಧಿಸಲು ಹಲವಾರು ತಿಂಗಳು ಕಠಿಣ ಅಭ್ಯಾಸ ಮಾಡಿದ್ದರು. ಕೊನೆಗೂ ಜಯ ಸಿಕ್ಕಿದ್ದು, ಮುಂದೆಯೂ ಹೆಚ್ಚು ಅಂತರಾಷ್ಟ್ರೀಯ ಮಟ್ಟದ ರೇಸ್ ಗಳಲ್ಲಿ ಭಾಗವಹಿಸುವ ಆಶಯ ವ್ಯಕ್ತಪಡಿಸಿದರು.












Click it and Unblock the Notifications