ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 40 ವರ್ಷ ಜೈಲು

ಕೊಡಗು, ಜನವರಿ 21: ​​ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಲು ಕಾರಣನಾದ ಆರೋಪಿಗೆ ವಿರಾಜಪೇಟೆಯ ಎರಡನೇ ಅಪರ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ತಲಾ 20 ವರ್ಷ ಸಜೆ (ಒಟ್ಟು 40 ವರ್ಷ) ಹಾಗೂ ತಲಾ 20,000 ಸಾವಿರ ರೂ.ದಂಡ ವಿಧಿಸಿದೆ.

2019 ರ ಏಪ್ರಿಲ್ 25 ರಂದು ಬೊಳ್ಳುಮಾಡು ಗ್ರಾಮದ ರಮೇಶ್‌ ಎಂಬುವವರ ಕಾಫಿ ತೋಟದ ಮನೆಯಲ್ಲಿದ್ದ ವಸಂತ(35) ಎಂಬಾತನು ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ.

ಈ ಬಗ್ಗೆ ಬಾಲಕಿಯ ತಾಯಿ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಐಪಿಸಿ 376(ಐ), ಐಪಿಸಿ 4, 5(ಎಲ್‌) ಹಾಗೂ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

40 Years Jail For Rape Accused In Kodagu

ತನಿಖೆ ನಡೆಸಿದ ಸರ್ಕಲ್‌ ಇನ್ಸ್ಪೆಕ್ಟರ್ ಕ್ಯಾತೆಗೌಡ ಅವರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ರಮಾ ಅವರು, ಐಪಿಸಿ 376(ಐ) ಅಪರಾಧಿಗೆ 20 ವರ್ಷ ಸಜೆ ಹಾಗೂ 20,000 ರೂ.ದಂಡ ಹಾಗೂ ಪೋಕ್ಸೋ ಕಾಯಿದೆ 376 (ಐ) ಅಡಿ 20 ವರ್ಷ ಸಜೆ, 20,000 ರೂ.ದಂಡ ವಿಧಿಸಿದ್ದಾರೆ.

20 ವರ್ಷಗಳ ಪ್ರತ್ಯೇಕ ಸಜೆಯನ್ನು ಏಕ ಕಾಲದಲ್ಲಿಅನುಭವಿಸಬೇಕು. ದಂಡದ ರೂಪದಲ್ಲಿ ಬರುವ 40,000 ರೂ, ನಲ್ಲಿ30,000 ಸಂತ್ರಸ್ತೆಗೆ ಪಾವತಿಸುವಂತೆ ತೀರ್ಪಿನಲ್ಲಿಆದೇಶಿಸಿದ್ದಾರೆ. ವಸಂತನಿಗೆ ಪತ್ನಿ ಹಾಗೂ ಮೂರು ತಿಂಗಳ ಮಗು ಇದೆ. ಸರಕಾರದ ಪರ ಪಬ್ಲಿಕ್‌ ಪ್ರಾಸಿಕ್ಯುಟರ್ ಡಿ.ನಾರಾಯಣ ವಾದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+