ಮಗುವಿನ ಬಾಯಿಗೆ ಪಟಾಕಿ ಇಡಲು ಹೇಗಾದರೂ ಮನಸು ಬಂತೋ

ಲಕ್ನೋ, ನವೆಂಬರ್ 8 : ಮೂರು ವರ್ಷದ ಪುಟ್ಟ ಬಾಲಕಿ ಬಾಯೊಳಗೆ ಪಟಾಕಿ ಇಟ್ಟು ಸಿಡಿಸುವ ಮನಸ್ಸಾದರೂ ಹೇಗೆ ಬಂದು ಆ ದುರುಳನಿಗೆ? ಇಂಥದೊಂದು ಹೇಯ ಕೃತ್ಯ ನಡೆದುಹೋಗಿದೆ ಉತ್ತರ ಪ್ರದೇಶದ ಮೀರತ್‌ನಲ್ಲಿ.

ದೀಪಾವಳಿ ವಿಶೇಷ ಪುರವಣಿ

ವ್ಯಕ್ತಿಯೊಬ್ಬ ಆಟವಾಡುತ್ತಿದ್ದ ಏನೂ ಅರಿಯದ ಪುಟ್ಟ ಮಗುವಿನ ಬಾಯೊಳಗೆ ಪಟಾಕಿ ಇಟ್ಟು ಸಿಡಿಸಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆರೋಪಿ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

Youth put cracker in three years old girls and burst

ಬಾಲಕಿಯ ತಂದೆ ಶಶಿ ಕುಮಾರ್ ಈ ಕುರಿತು ಪೊಲೀಸರಿಗೆ ದೂರಿನಲ್ಲಿ ಕೆಲವು ಅಂಶಗಳನ್ನು ಹೇಳಿಕೊಂಡಿದ್ದು, ಗ್ರಾಮದ ಹರ್ಪಾಲ್ ಎಂಬಾತ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಬಳಿ ಬಂದು ಕೈಯಲ್ಲಿದ್ದ ಸಿಡಿಮದ್ದನ್ನು ಬಾಲಕಿಯ ಬಾಯಿಗೆ ಇಟ್ಟು ಸಿಡಿಸಿದ್ದಾನೆ. ಇದರಿಂದ ಬಾಲಕಿ ಮುಖಕ್ಕೆ ಗಾಯವಾಗಿದ್ದು 50 ಹೊಲಿಗೆಗಳನ್ನು ಹಾಕಲಾಗಿದೆ. ಗಂಟಲಿನಲ್ಲೂ ಕೂಡ ಸೋಂಕು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+