Bengaluru Rent: ಬೆಂಗಳೂರಿಗೆ ಬಂದು ತಪ್ಪು ಮಾಡಿದೆವು; ದೆಹಲಿ ಚೆನ್ನಾಗಿತ್ತು, ಬಾಡಿಗೆ ಮನೆಗೆ 52,000 ರೂ. ನಾರ್ಥಿ ಪೋಸ್ಟ್‌

Bengaluru Rent: ಬೆಂಗಳೂರಿನ ಬಾಡಿಗೆ ಮನೆಗಳ ಬಗ್ಗೆ ಯಾವಾಗಲೂ ಚರ್ಚೆಗಳು ನಡೆಯುತ್ತಲ್ಲೇ ಇರುತ್ತವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆಯು ವಿಪರೀತವಾಗಿ ಹೆಚ್ಚಳವಾಗಿದೆ. ಇದರೊಂದಿಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಸಹ ಬೂಮ್ ಆಗುತ್ತಿದೆ. ಭಾರತದ ವಿವಿಧ ನಗರಗಳಿಂದ ಜನ ಬೆಂಗಳೂರಿಗೆ ಬರುವುದಕ್ಕೆ ಪ್ರಾರಂಭಿಸುತ್ತಿದ್ದಾರೆ. ಆದರೆ ಬೆಂಗಳೂರಿಗೆ ಬಂದಿರುವುದೇ ಅಪರಾಧ ಎನ್ನುವಂತೆ ಸಹ ಕೆಲವರು ಮಾತನಾಡುತ್ತಿರುವುದು ಅಥವಾ ಬೆಂಗಳೂರಿಗೆ ಬರುವುದಕ್ಕಿಂತ ಅವರ ಊರಿನಲ್ಲೇ ಉಳಿದಿದ್ದರೆ ಚೆನ್ನಾಗಿತ್ತು ಎಂಬಂತೆ ಮಾತನಾಡುತ್ತಿರುವುದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬಾಡಿಗೆ ಹೆಚ್ಚಳ, ಪ್ರಾಪರ್ಟಿ ಬೆಲೆ ಹೆಚ್ಚಳವೂ ಆಗುತ್ತಿದೆ. ಬೆಂಗಳೂರಿನಲ್ಲಿ ಟೆಕ್ ಹಬ್ ಪ್ರದೇಶಗಳಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚಿದೆ.

ಉದ್ಯೋಗ - ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಇದು ಸಹಜವಾಗಿಯೇ ಬೆಂಗಳೂರಿನ ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಬೇರೆ ಊರುಗಳಿಂದ ಬಂದಿರುವ ಅನೇಕ ಬಾಡಿಗೆದಾರರು ಸ್ಥಳಾಂತರಗೊಂಡ ನಂತರ ನಾವು ತೆಗೆದುಕೊಂಡ ನಿರ್ಧಾರದ ಸರಿಯಾದ ಆಯ್ಕೆಯೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

Bengaluru Rent

ದೆಹಲಿ ಸಮೀಪದ ಗುರುಗ್ರಾಮ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ನಂತರ ದಂಪತಿ ಬೆಂಗಳೂರಿಗೆ ಬಂದ ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರ ಅನುಭವವು ಈಗ ವೈರಲ್ ಆಗಿದೆ. ಬಾಡಿಗೆ ಮನೆಯನ್ನು ಆಯ್ಕೆಮಾಡುವಾಗ ಅವರು ಮಾಡಿದ ದೊಡ್ಡ ತಪ್ಪು ಏನು ಎಂದು ವಿವರಿಸಿದ್ದಾರೆ. ಪರುಲ್ ಅಸೀಮ್ ಖಾತೆಯ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಗರದಲ್ಲಿ ಬಾಡಿಗೆ ಮನೆ ಹಾಗೂ ಜೀವನಶೈಲಿ ಆಯ್ಕೆಗಳು ಮತ್ತು ವಸತಿ ಒತ್ತಡದ ಈ ಪೋಸ್ಟ್‌ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನ ಪ್ರಸಿದ್ಧ ವಸತಿ ಹಾಗೂ ಐಟಿ-ಕೇಂದ್ರಿತ ಪ್ರದೇಶಗಳಲ್ಲಿ ಒಂದಾದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ 2BHK ಫ್ಲಾಟ್ ಅನ್ನು ಬಾಡಿಗೆಗೆ ಪಡೆಯುವ ಬಗ್ಗೆ ದಂಪತಿ ಮಾತನಾಡಿದ್ದಾರೆ. ಬಾಡಿಗೆಗೆ ಬೆಂಗಳೂರಿನಲ್ಲಿ ಬಾಡಿಗೆದರವು ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ, ನಾವು ದೆಹಲಿ NCR ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡೆವು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಒಂದು ದೊಡ್ಡ ತಪ್ಪು ಮಾಡಿದೆವು. HSR ಲೇಔಟ್‌ನಲ್ಲಿ 2BHK ಗೆ ನಾವು 52,000 ಬಾಡಿಗೆ ಪಾವತಿಸುತ್ತಿದ್ದೆವು. ಯಾವುದೇ ಸೌಲಭ್ಯಗಳಿಲ್ಲ, ಮಕ್ಕಳು ಆಟವಾಡುವುದಕ್ಕೆ ಜಾಗವಿಲ್ಲ, ಈಜುಕೊಳವಿಲ್ಲ, ಕೇವಲ ಹೆಚ್ಚಿನ ಬಾಡಿಗೆ ಮತ್ತು ಹೆಚ್ಚಿನ ಅಡ್ವಾನ್ಸ್‌ ತೆಗೆದುಕೊಳ್ಳುವುದು ಮಾತ್ರ ಎಂದು ಆ ಮಹಿಳೆಯು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ದೆಹಲಿಯ - ಎನ್‌ಸಿಆರ್‌ನಲ್ಲಿ ಪಾವತಿ ಮಾಡುತ್ತಿದ್ದ ಬಾಡಿಗೆಗೆ ಹೋಲಿಕೆ ಮಾಡಿದರೆ, ಬಾಡಿಗೆಗೆ ಹೋಲಿಸಿದರೆ ಫ್ಲಾಟ್ ಸಾಕಷ್ಟು ಸೌಲಭ್ಯಗಳನ್ನು ನೀಡಲಿಲ್ಲ. ಸ್ವಲ್ಪ ಸಮಯದ ನಂತರ, ಅವರು ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಅವರು ಕಡಿಮೆ ವೆಚ್ಚದಲ್ಲಿ ಉತ್ತಮ ಜೀವನ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Bengaluru Rent: ಬೆಂಗಳೂರಲ್ಲಿ ಬಾಡಿಗೆದಾರರಿಗೆ ಹೊಸ ಸಂಕಷ್ಟ: ಮನೆ ಮಾಲೀಕರಿಂದ ವಿಚಿತ್ರ ಬೇಡಿಕೆ
Bengaluru Rent: ಬೆಂಗಳೂರಲ್ಲಿ ಬಾಡಿಗೆದಾರರಿಗೆ ಹೊಸ ಸಂಕಷ್ಟ: ಮನೆ ಮಾಲೀಕರಿಂದ ವಿಚಿತ್ರ ಬೇಡಿಕೆ

ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಹೆಚ್ಚು ಬಜೆಟ್ ಸ್ನೇಹಿ ಎಂದು ಅವರು ನಂಬುವ ಪ್ರದೇಶಗಳ ಪಟ್ಟಿಯನ್ನು ಸಹ ಅವರು ಹಂಚಿಕೊಂಡಿದ್ದು, "ಬೆಂಗಳೂರಿನಲ್ಲಿ ಅತ್ಯುತ್ತಮ ಬಜೆಟ್ ಸ್ನೇಹಿ ಪ್ರದೇಶಗಳು, ಯಲಹಂಕವು ಅತ್ಯಂತ ಶಾಂತಿಯುತ, ವಿಶಾಲವಾದ ಮನೆಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಸಿಟಿ - ಕೈಗೆಟುಕುವ ಹಾಗೂ ಐಟಿ ಉದ್ಯೋಗಿಗಳಿಗೆ ಸೂಕ್ತವಾಗಿದೆ. ಕನಕಪುರ ರಸ್ತೆ, ಸರ್ಜಾಪುರ ಹೊರವಲಯ - ಮುಖ್ಯ ಸರ್ಜಾಪುರಕ್ಕಿಂತ ಉತ್ತಮವಾಗಿದೆ. ಅಲ್ಲದೆ ವೈಟ್‌ಫೀಲ್ಡ್ ಹೊರವಲಯ - ಹೆಚ್ಚಿನ ಸ್ಥಳ, ಕಡಿಮೆ ಬಾಡಿಗೆಗೆ ಹೆಚ್ಚು ಪ್ರಾಶಸ್ತ್ಯವಾಗಿದೆ ಎಂದು ವಿವರಿಸಿದ್ದಾರೆ. ಈ ವಿಚಾರವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+