Rohit Sharma: ಬರೀ 6 ರನ್‌ಗಳಿಸಿ ವಿಶೇಷ ದಾಖಲೆ ಮಾಡಿದ ಟೀಮ್ ಇಂಡಿಯಾ ಸ್ಟಾರ್ ರೋಹಿತ್ ಶರ್ಮಾ
Rohit Sharma: ಧರ್ಮಶಾಲಾದಲ್ಲಿ ಶನಿವಾರ (ಜೂನ್ 14) ನಡೆದ ಮಳೆಬಾಧಿತ ಪಂದ್ಯದಲ್ಲಿ ಶುಭ್‌ಗಿಲ್ ನಾಯಕತ್ವದ ಟೀಮ್ ಇಂಡಿಯಾವು ಅಫ್ಘಾನಿಸ್ತಾನದ ವಿರುದ್ಧ ಭಾರತ 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಹಿರಿಯ ಆಟಗಾರ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಅವರು ಕೇವಲ ಒಂದು ಸಿಕ್ಸ್ ಸಿಡಿಸುವ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ.
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ನಡುವೆ ನಡೆದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ಕೇವಲ 25 ಓವರ್‌ಗಳಿಗೆ ಸೀಮಿತವಾಯಿತು. ಆದರೂ ಉಭಯ ತಂಡಗಳ ಬ್ಯಾಟರ್‌ಗಳ ಆಕ್ರಮಣಕಾರಿ ಆಟದಿಂದ ರನ್ ಮಳೆಯೇ ಹರಿದುಬಂದಿತು. ಈ ಹೈವೋಲ್ಟೇಜ್ ಕದನದಲ್ಲಿ ಭಾರತವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.

ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ
ಧರ್ಮಶಾಲಾದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಅಪ್ಘಾನಿಸ್ತಾನ ತಂಡವು 24.5 ಓವರ್‌ಗಳಲ್ಲಿ 194 ರನ್‌ಗಳಿಗೆ ತನ್ನಲ್ಲೇ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 22.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಸುಲಭ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರು ವಿಶೇಷ ದಾಖಲೆ ಮಾಡಿ ಗಮನ ಸೆಳೆದರು.
ಭಾರತ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ತಮ್ಮ ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸೇರಿಸಿದ್ದಾರೆ. ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳನ್ನು (ಟೆಸ್ಟ್, ಏಕದಿನ, ಟಿ20) ಸೇರಿದಂತೆ ಆರಂಭಿಕ ಆಟಗಾರನಾಗಿ 16,000 ರನ್‌ಗಳ ಗಡಿಯನ್ನು ದಾಟಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ ಓಪನರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇವರಿಗಿಂತ ಮುನ್ನ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಮಾತ್ರ ಈ ಸಾಧನೆ ಮಾಡಿದ್ದರು.
6 ರನ್‌ಗಳ ಮೂಲಕ ಹೊಸ ದಾಖಲೆ ಮಾಡಿದ ರೋಹಿತ್
ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಆರಂಭವಾಗುವ ಮುನ್ನ ರೋಹಿತ್ ಶರ್ಮಾ ಓಪನರ್ ಆಗಿ 16,000 ರನ್ ಗಳಿಸಲು ಕೇವಲ 6 ರನ್‌ಗಳ ಅಗತ್ಯವಿತ್ತು. ಪಂದ್ಯದ ವೇಳೆ ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ಜಾಯ್ ಬೌಲಿಂಗ್‌ನಲ್ಲಿ ಸ್ಕ್ವೇರ್ ಲೆಗ್ ಮೇಲಿಂದ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ರೋಹಿತ್ ಈ ಅಪರೂಪದ ದಾಖಲೆ ಮಾಡಿದರು. ಆರಂಭಿಕ ಆಟಗಾರನಾಗಿ ತಮ್ಮ 384ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಅವರು ಒಟ್ಟು 16 ರನ್ ಗಳಿಸಿ ರನ್ ಔಟ್ ಆದರು.
ವಿಶ್ವದ ಗಣ್ಯ ಓಪನರ್‌ಗಳ ಕ್ಲಬ್ ಸೇರಿದ ಹಿಟ್‌ಮ್ಯಾನ್
ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆರಂಭಿಕ ಆಟಗಾರನಾಗಿ 16,000 ರನ್ ದಾಟಿದ ವಿಶ್ವದ 7ನೇ ಬ್ಯಾಟರ್ ಎಂಬ ಕೀರ್ತಿಗೂ ರೋಹಿತ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಸನತ್ ಜಯಸೂರ್ಯ (19,298 ರನ್), ಕ್ರಿಸ್ ಗೇಲ್ (18,867 ರನ್), ಡೇವಿಡ್ ವಾರ್ನರ್ (18,744 ರನ್), ಡೆಸ್ಮಂಡ್ ಹೇನ್ಸ್ ಮತ್ತು ವೀರೇಂದ್ರ ಸೆಹ್ವಾಗ್ ಇದ್ದಾರೆ.
ಭಾರತದ ಪರ ಸೆಹ್ವಾಗ್ ಓಪನರ್ ಆಗಿ ಒಟ್ಟು 16,119 ರನ್ ಗಳಿಸಿದ್ದು, ರೋಹಿತ್ ಶರ್ಮಾ (ಪ್ರಸ್ತುತ 16,010 ರನ್) ಇನ್ನು ಕೇವಲ 110 ರನ್ ಗಳಿಸಿದರೆ ಸೆಹ್ವಾಗ್ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಒಟ್ಟಾರೆಯಾಗಿ 34,000ಕ್ಕೂ ಹೆಚ್ಚು ರನ್ ಗಳಿಸಿದ್ದರೂ, ಓಪನರ್ ಆಗಿ 15,335 ರನ್ ಗಳಿಸಿ ಈ 16ಸಾವಿರದ ಕ್ಲಬ್‌ನಿಂದ ಸ್ವಲ್ಪದರಲ್ಲೇ ವಂಚಿತರಾಗಿದ್ದರು.
ಜಾಕ್ ಕಾಲಿಸ್ ದಾಖಲೆ ಉಡೀಸ್
ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ಪ್ರಮುಖ ಸಾಧನೆ ಮಾಡಿದರು. ಬ್ಯಾಟಿಂಗ್ ಮಾಡುವಾಗ 3 ರನ್ ತಲುಪುತ್ತಿದ್ದಂತೆ ಅವರು ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಕ್ ಕಾಲಿಸ್ ಅವರ ಏಕದಿನ ಕ್ರಿಕೆಟ್‌ನ ರನ್ ದಾಖಲೆಯನ್ನು (11,579 ರನ್) ಹಿಂದಿಕ್ಕಿದರು. ಕಾಲಿಸ್ ಈ ರನ್ ಗಳಿಸಲು 328 ಪಂದ್ಯಗಳನ್ನು ಆಡಿದ್ದರೆ, ರೋಹಿತ್ ಶರ್ಮಾ ಕೇವಲ 283ನೇ ಪಂದ್ಯದಲ್ಲೇ ಈ ಸಾಧನೆ ಮಾಡಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜಗತ್ತಿನ 8ನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಮತ್ತೊಂದು ವಿಶೇಷ ದಾಖಲೆ
ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮಾ (39 ವರ್ಷ 44 ದಿನ) ಭಾರತದ ಪರ ಏಕದಿನ ಪಂದ್ಯ ಆಡಿದ ಅತ್ಯಂತ ಹಿರಿಯ ಪುರುಷ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಅವರು 1989ರಲ್ಲಿ 39 ವರ್ಷ 36 ದಿನದ ವಯಸ್ಸಿನಲ್ಲಿ ಕೊನೆಯ ಪಂದ್ಯ ಆಡಿದ್ದ ಮೊಹಿಂದರ್ ಅಮರನಾಥ್ ಅವರ ಸುಮಾರು ನಾಲ್ಕು ದಶಕಗಳ ಹಳೆಯ ದಾಖಲೆಯನ್ನು ಮುರಿದರು.
ಮಳೆಯಿಂದಾಗಿ ತಲಾ 25 ಓವರ್‌ಗಳಿಗೆ ಸೀಮಿತಗೊಂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ 194 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಪದಾರ್ಪಣೆ ಮಾಡಿದ ಬೌಲರ್‌ಗಳಾದ ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ತಲಾ 3 ವಿಕೆಟ್ ಪಡೆದು ಮಿಂಚಿದರು. ಬಳಿಕ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರ ಅಜೇಯ 84 ರನ್‌ಗಳ ನೆರವಿನಿಂದ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.












Click it and Unblock the Notifications