LPG ಗ್ರಾಹಕರಿಗೆ ಜೂನ್ 30ರೊಳಗೆ ಇ-ಕೆವೈಸಿ ಕಡ್ಡಾಯ: ಮೋಬೈಲ್‌ನಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಲು ಇಲ್ಲಿದೆ ಮಾಹಿತಿ
ನವದೆಹಲಿ: ಅಡುಗೆ ಅನಿಲ ಬೆಲೆ ಏರಿಕೆ ಬೆನ್ನಲ್ಲೆ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬಳಸುವ ಲಕ್ಷಾಂತರ ಗ್ರಾಹಕರಿಗೆ ಮಹತ್ವದ ಸುದ್ದಿ ಸಿಕ್ಕಿದೆ. ಪ್ರಮುಖ ಸರ್ಕಾರಿ ಸ್ವಾಮ್ಯದ ಕೈಗಾರಿಕಾ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತನ್ನ ಉಜ್ವಲ ಯೋಜನೆ ಮತ್ತು ಇತರೆ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ.
ಹೌದು, ನೀವು ಉಜ್ವಲ ಯೋಜನೆ ಮತ್ತು ಇತರೆ ಗ್ಯಾಸ್ ಸಿಲಿಂಡರ್ ಬಳಕೆದಾರರು ಆಗಿದ್ದಲ್ಲಿ ಇದೇ ತಿಂಗಳ ಜೂನ್ 30ರವರೆಗೆ ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. ಕೆವೈಸಿ ನಿಮಯ ಕಡ್ಡಾಯವಾಗಿ ಜಾರಿಗೆ ತರಲಾಗಿದ್ದು, ನಿಗದಿತ ದಿನಾಂಕದೊಳಗೆ ಈ ಡಿಜಿಟಲ್ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆ ಮುಗಿಸಬೇಕು. ಇಲ್ಲವಾದರೆ ಸಿಲಿಂಡರ್ ಸಬ್ಸಿಡಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ ಎಂದು ಕಂಪನಿ ತಿಳಿಸಿದೆ. ಕೆಲವೆಡೆ ಗ್ರಾಹಕರು ಸಬ್ಸಡಿಯೇ ಬರಲ್ಲ, ಅದೇಗೆ ಕಳೆದುಕೊಳ್ಳುತ್ತೇವೆ ಅಂತಲೂ ಪ್ರಶ್ನಿಸಿದ್ದಾರೆ.

ಇದೇ ವರ್ಷ ಫೆಬ್ರವರಿ ಅಂತ್ಯಕ್ಕೆ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ವೈಮಾನಿಕ ದಾಳಿ ನಡೆಸಿದವು. ಯುದ್ಧದ ಪರಿಣಾಮವಾಗಿ ಜಾಗತಿಕ ತೈಲ ಮಾರುಕಟ್ಟೆ ಮೇಲಾಯಿತು. ಶೇಕಡಾ 20 ಕ್ಕಿಂತ ಹೆಚ್ಚು ಜಾಗತಿಕ ಕಚ್ಚಾ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ನೌಕಾ ಮಾರ್ಗ ಹಾರ್ಮುಜ್ ಜಲಸಂಧಿಯು ಪೂರ್ಣವಾಗಿ ಮುಚ್ಚಲಾಯಿತು. ಅದರಿಂದ ಎಲ್‌ಪಿಜಿ ಪೂರೈಕೆಯಲ್ಲಿ ಭಾರಿ ತೊಂದರೆ ಆಯಿತು. ಇಂತಹ ತೈಲ ಕೊರತೆಯ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಭಾರತ ಸರ್ಕಾರವು ಪರಿಣಾಮಕಾರಿ ನಿಯಮಗಳನ್ನು ಜಾರಿಗೊಳಿಸಲಾಯಿತು. ಅದರ ಭಾಗವಾಗಿ ಎಲ್‌ಪಿಜಿ ಗ್ರಾಹಕರಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯಗೊಳಿಸಲು ಮುಂದಾಗಿದೆ. ಈ ಮೂಲಕ ಹೆಚ್ಚುವರಿ ಅನಿಲ ದಾಸ್ತಾನಿಗೆ ಕಡಿವಾಣ ಹಾಕಲು ಮುಂದಾಗುತ್ತಿದೆ.
ಯಾರಿಗೆ ಇ-ಕೆವೈಸಿ ಕಡ್ಡಾಯ ಮತ್ತು ಸಬ್ಸಿಡಿ ನಿಯಮ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳಿಗೆ ಆದ್ಯತೆಯ ಮೇಲೆ ಆಧಾರ್ ಇ-ಕೆವೈಸಿ ಬಯೋಮೆಟ್ರಿಕ್ ಮಾಡುವುದನ್ನು ಅಧಿಕೃತವಾಗಿ ಜಾರಿಗೆ ತಂದಿತ್ತು. ಆದರೆ ಈಗ ಹೊರಡಿಸಿರುವ ಪ್ರಸ್ತುತ ಆದೇಶದ ಪ್ರಕಾರ, ಯಾವುದೇ ರೀತಿಯ ಅನಿಲ ಕಂಪನಿಗಳ ಅಡಿಯಲ್ಲಿ ಈವರೆಗೆ ಇ-ಕೆವೈಸಿ ಮಾಡಿಸದೇ ಇರುವ ಎಲ್ಲ ಭಾರತೀಯರಿಗೆ ಈ ಕಡ್ಡಾಯ ಕೆವೈಸಿ ಮಾರ್ಗಸೂಚಿ ನಿಯಮ ಅನ್ವಯಿಸುತ್ತದೆ. ಈಗಾಗಲೇ ತಮ್ಮ ಯಶಸ್ವಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ಮುಗಿಸಿರುವ ಸಾಮಾನ್ಯ ಗ್ರಾಹಕರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ ಅಂತಲೂ ತಿಳಿಸಲಾಗಿದೆ.
ಜೂನ್ 12 ರಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ವಿಶೇಷ ಸಲಹೆ ನೀಡಿದೆ. ಯಾವುದೇ ಅಡ್ಡಿಯಿಲ್ಲದೆ ಎಲ್‌ಪಿಜಿ ಸಬ್ಸಿಡಿಯ ಪ್ರಯೋಜನ ಪಡೆಯುವುದನ್ನು ಮುಂದುವರಿಸಿ. ಅದಕ್ಕಾಗಿ ನೀವು ತಪ್ಪದೇಇ-ಕೆವೈಸಿಯನ್ನು 2026ರ ಜೂನ್ 30ರೊಳಗೆ ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯು ಸರಳವಾಗಿದೆ, ಸುರಕ್ಷಿತವಾಗಿದೆ ಮತ್ತು ಸಂಪೂರ್ಣವಾಗಿ ಉಚಿತ ಎಂದು ಗ್ರಾಹಕರಿಗೆ ತಿಳಿಸಿದೆ.
ಇಂಡಿಯನ್ ಆಯಿಲ್ ಒನ್ (IndianOil ONE) ಆಪ್ ನಿಮ್ಮ ಎಲ್‌ಪಿಜಿ ವಿತರಣಾ ಸಿಬ್ಬಂದಿ ಮೂಲಕ ನೀವು ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ. ಕೊನೆಯದಾಗಿ ಕಂಪನಿಯು "ಇಂದೇ ನಿಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಸಕ್ರಿಯವಾಗಿಟ್ಟುಕೊಳ್ಳಿ" ಎಂದು ತನ್ನ ಆದೇಶ ಪರಿಷ್ಕರಿಸಿದೆ.
ಮೊಬೈಲ್ ಮೂಲಕವೇ ಇ-ಕೆವೈಸಿ, ವಿಧಾನಗಳು
ಇಂಡಿಯನ್ ಆಯಿಲ್ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಇಂಡೇನ್ ಗ್ಯಾಸ್ ಸಂಪರ್ಕ ಪಡೆದಿರುವ ನಾಗರಿಕರು ಯಾವುದೇ ಸೇವಾ ಕೇಂದ್ರಕ್ಕೆ ಅಲೆಯದೆ ತಮ್ಮ ಮೊಬೈಲ್ ಮೂಲಕವೇ ಈ ಬಯೋಮೆಟ್ರಿಕ್ ಪ್ರಕ್ರಿಯೆ ಮುಗಿಸಬಹುದು. ಇದಕ್ಕಾಗಿ ಮೊದಲು ನಿಗದಿತ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ 'ಇಂಡಿಯನ್ ಆಯಿಲ್ ಒನ್' ಎನ್ನುವ ಅಧಿಕೃತ ಮೊಬೈಲ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಜೊತೆಗೆ ಗ್ರಾಹಕರ ಸುರಕ್ಷಿತ ಮುಖದ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಗಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಉಚಿತ 'ಆಧಾರ್ ಫೇಸ್ ಆರ್‌ಡಿ' ಆಪ್ ಸಹ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಡೌನ್‌ಲೋಡ್ ಯಶಸ್ವಿಯಾದ ನಂತರ 'ಇಂಡಿಯನ್ ಆಯಿಲ್ ಒನ್' ಆಪ್ ಓಪನ್ ಮಾಡಿ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಮೂಲಕ ನೋಂದಣಿ ಮಾಡಿಕೊಳ್ಳಿ. ಬಳಿಕ ನಿಮ್ಮಲ್ಲಿ ಬಳಸುವ ಗ್ಯಾಸ್ ರಶೀದಿ ಮೇಲೆ ಮುದ್ರಿಸಲಾಗಿರುವ 16 ಅಂಕಿಗಳ ಎಲ್‌ಪಿಜಿ ಐಡಿಯನ್ನು ಇಲ್ಲಿ ಜೋಡಣೆ ಮಾಡಬೇಕಾಗುತ್ತದೆ. ಲಿಂಕ್ ಮಾಡಿದ ನಂತರ ನಿಮ್ಮ ಪ್ರೊಫೈಲ್ ಪುಟಕ್ಕೆ ಭೇಟಿ ನೀಡಿ ಅದರಲ್ಲಿ ನೀಡಲಾದ ರಿ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಯಮಗಳನ್ನು ಓದಿದ ನಂತರ ಫೇಸ್ ಸ್ಕ್ಯಾನ್ ಆಪ್ ಅನುಮತಿಯೊಂದಿಗೆ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿದರೆ ಪ್ರಕ್ರಿಯೆ ಮುಗಿಯುತ್ತದೆ. ವಿಶೇಷ ಸೂಚನೆ ಎಂದರೆ ಆಧಾರ್ ಬಯೋಮೆಟ್ರಿಕ್ ಮುಂಚಿತವಾಗಿ ಲಾಕ್ ಆಗಿದ್ದರೆ ಇದನ್ನು ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಭಾರತ್ ಗ್ಯಾಸ್ ಬಯೋಮೆಟ್ರಿಕ್ ಪಡೆಯುವುದು ಹೇಗೆ?
ಭಾರತ್ ಗ್ಯಾಸ್ ಸಿಲಿಂಡರ್ ಬಳಕೆದಾರರು ಮೊದಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗುವ 'ಹೆಲೋ ಬಿಪಿಸಿಎಲ್' ಆಪ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಲಾಗಿನ್ ಆದ ನಂತರ ಆಪ್ ಮುಖ ಮುಖದಲ್ಲಿ ಇ-ಕೆವೈಸಿ ಮೇಲೆ ಬಟನ್ ಕ್ಲಿಕ್ ಮಾಡಿ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ದೃಢೀಕರಿಸಿ. ಅಲ್ಲಿ ನೀಡಲಾಗಿರುವ ಸುರಕ್ಷತಾ ಧೋರಣೆಗಳನ್ನು ಸಂಪೂರ್ಣವಾಗಿ ಓದು ಒಪ್ಪಿ ಮುಂದಿನ ಬಯೋಮೆಟ್ರಿಕ್ ಫೇಸ್ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಕ್ಷಣಾರ್ಧದಲ್ಲಿ ಮುಗಿಸಿಕೊಳ್ಳಿ.
ಎಚ್‌ಪಿ ಗ್ಯಾಸ್ ಆನ್‌ಲೈನ್ ಕೆವೈಸಿ ವಿಧಾನಗಳು
ಎಚ್‌ಪಿ ಗ್ಯಾಸ್ ಗ್ರಾಹಕರು ಇ-ಕೆವೈಸಿ ಮಾಡಿಕೊಳ್ಳಲು 'ಎಚ್‌ಪಿ ಪೇ' ಆಪ್ ಬಳಸಬೇಕು. ಇದರ ಜೊತೆ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಲು 'ಆಧಾರ್ ಫೇಸ್ ಆರ್‌ಡಿ' ಆಪ್ ಕೂಡ ಅಗತ್ಯವಾಗಿರುತ್ತದೆ. ಮೊದಲಿಗೆ ಎಚ್‌ಪಿ ಪೇ ಆಪ್ ಮುಖಾಂತರ ಗ್ಯಾಸ್ ಸಂಪರ್ಕ ಪಡೆದಿರುವ ನಿಮ್ಮ ನಿಗದಿತ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ, ಒಟಿಪಿ ಸಹಾಯದಿಂದ ವಹಿವಾಟು ಪೂರ್ಣಗೊಳಿಸಿ. ತದನಂತರ ಭವಿಷ್ಯದ ಆಪ್ ಬಳಕೆಗಾಗಿ 4 ಅಂಕಿಗಳ ರಹಸ್ಯ ಎಂಪಿನ್ ಅನ್ನು ನಮೂದಿಸಿ ಮೊಬೈಲ್‌ನ ಜಿಪಿಎಸ್ ಆನ್ ಮಾಡುವ ಮೂಲಕ ಲೊಕೇಶನ್ ಅನುಮತಿ ನೀಡಬೇಕು.
ಮುಂದಿನ ಹಂತದಲ್ಲಿ ಎಂಪಿನ್ ಬಳಸಿ ಲಾಗ್ ಇನ್ ಆಗಿ ಆಪ್‌ನಲ್ಲಿ ಕಾಣಿಸುವ 'ಮೈ ಎಚ್‌ಪಿ' ಎಂಬ ಎಲ್‌ಪಿಜಿ ವಿಭಾಗಕ್ಕೆ ಭೇಟಿ ನೀಡಬೇಕು. ಅಲ್ಲಿ ಇ-ಕೆವೈಸಿ ಎಂಬ ವಿಶೇಷ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಸ್ಕ್ರೀನ್ ಮೇಲೆ ಕಾಣಿಸುವ 'ಕ್ಯಾಪ್ಚರ್ ಫೇಸ್' ಪ್ರಕ್ರಿಯೆ ಒತ್ತಿದರೆ ಆಟೋಮ್ಯಾಟಿಕ್ ಆಗಿ ಮುಖದ ಸ್ಕ್ಯಾನರ್ ಆಕ್ಟಿವ್ ಆಗುತ್ತದೆ. ಇದರ ಮೂಲಕ ಗ್ರಾಹಕರು ತಮ್ಮ ಮುಖದ ಬಯೋಮೆಟ್ರಿಕ್ ಅನ್ನು ಯಶಸ್ವಿಯಾಗಿ ಅಪ್‌ಲೋಡ್ ಮಾಡಬಹುದು ಎಂದು ತಿಳಿಸಲಾಗಿದೆ.













Click it and Unblock the Notifications