Trisha: ತ್ರಿಶಾ ಕುತ್ತಿಗೆಯಲ್ಲಿ ತಾಳಿ! ವಿಜಯ್ ಜತೆ ಗುಟ್ಟಾಗಿ ಮದುವೆಯಾಯ್ತಾ? ವೈರಲ್ ವಿಡಿಯೋ ಸಂಚಲನ
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ಎರಡು ವಿಚಾರಗಳಿಗೆ ಸುದ್ದಿಯಾಗಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ, ನಟ ಥಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತ ನಡುವೆ ಕೌಟುಂಬಿಕವಾಗಿ ಯಾವುದು ಸರಿ ಇಲ್ಲ. ಹೀಗಾಗಿ ಪತ್ನಿ ಸಂಗೀತ ಅವರು ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತ ಮೇಲಿಂದ ಮೇಲೆ ತ್ರಿಶಾ ಸುದ್ದಿ ಮುನ್ನೆಲೆಗೆ ಬರುತ್ತಿವೆ. ಇದೀಗ ತ್ರೀಶಾ ಅವರ ಕೊರಳಲ್ಲಿ ಕ್ರೀಶ್ಚಿಯನ್ ಧರ್ಮದಲ್ಲಿ ಧರಿಸುವ ಮಂಗಳಸೂತ್ರ ಕಾಣಿಸಿದೆ. ಅದರ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ 'ನಾಳೆ ತ್ರಿಶಾ ಕುರಿತ ಸೀಕ್ರೆಟ್ ರಿವೀಲ್ ಆಗಲಿದೆ' ಎಂಬ ಪೊಸ್ಟರ್‍ವೊಂದನ್ನು ಅವರ ಸ್ನೇಹಿತೆ ಹಂಚಿಕೊಂಡಿದ್ದು ಫ್ಯಾನ್ಸ್ ಕುತೂಹಲ ಕೆರಳಿಸಿದೆ.
ನಟಿ ತ್ರಿಶಾ ಅವರ ವಿಚಾರಗಳು ಇಂಟರ್ ನೆಟ್‌ನಲ್ಲಿ ಆಗಾಗ ತೀವ್ರ ಸಂಚಲನ ಮೂಡಿಸುತ್ತಿದೆ. ಪತ್ನಿ ಸಂಗೀತ ಅವರು ಈಗಾಗಲೇ ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ವಿಜಯ್ ಅವರಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ಆಗಿದೆ. ಕೌಟುಂಬಿಕವಾಗಿ ವಿಜಯ್ ಜೀವನದಲ್ಲಿ ಸಾಕಷ್ಟು ಜಟಾಪಟಿಗಳು ಶುರುವಾಗಿವೆ. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ತಮ್ಮ ವಿವಾಹವನ್ನು ರದ್ದುಗೊಳಿಸಬೇಕು ಎಂದು ಸಂಗೀತ ಕೋರಿದ್ದಾರೆ. ತಮ್ಮ ಪತಿ ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇತ್ತ ನಟಿ ತ್ರಿಶಾ ಅವರು ವಿಜಯ್ ಜೊತೆಗೆ ಮತ್ತು ವಿಜಯ್ ಕಾರ್ಯಕ್ರಮದಲ್ಲಿ ಫುಲ್ ಮಿಂಚುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಮತ್ತು ತ್ರಿಶಾ ಇಬ್ಬರೂ ಚೆನ್ನೈನಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದಕ್ಕೆ ಒಂದೇ ಕಾರಿನಲ್ಲಿ ಒಟ್ಟಿಗೆ ಆಗಮಿಸಿದ್ದರು. ಇದು ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು, ಅದರ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ವಿಜಯ್ ಕಾರ್ಯಕ್ರಮದಲ್ಲಿ ತ್ರಿಶಾ ಮಿಂಚಿಂಗ್
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಜಯಭೇರಿ ಬಾರಿಸಿದ ನಂತರ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಪದಗ್ರಹಣ ಕಾರ್ಯಕ್ರಮಕ್ಕೆ ವಿಜಯ್ ಅವರ ಪತ್ನಿ ಮತ್ತು ಮಕ್ಕಳು ಗೈರಾಗಿದ್ದರು. ಆದರೆ ನಟಿ ತ್ರಿಶಾ ಸಾಂಪ್ರದಾಯಿಕ ಉಡುಗೆಯಲ್ಲಿ ಹೈಲೈಟ್ ಆಗಿದ್ದರು. ಆಗಮಿಸುತ್ತಿದ್ದಂತೆ ಫ್ಯಾನ್ಸ್ ನತ್ತ ಕೈ ಬೀಸಿದರು. ಕ್ಯಾಮೆರಾಗಳೆಲ್ಲ ಅವರ ಮೇಲೆಯೇ ಫೋಕಸ್ ಅಗಿದ್ದವು. ಅದಕ್ಕು ಮೊದಲೇ ಫಲಿತಾಂಶ ದಿನವು ತ್ರಿಶಾ ವಿಜಯ್ ಅವರ ಮನೆಗೆ ತೆರಳಿದ್ದರು.
ತ್ರಿಶಾ-ವಿಜಯ್ ಸೀಕ್ರೆಟ್ ಆಗಿ ಮದುವೆ ಆದ್ರಾ?
ತ್ರಿಶಾ, ವಿಜಯ್ ಅವರ ಬಹಿರಂಗ ಓಡಾಟ ಈ ಎಲ್ಲ ಬೆಳವಣಿಗೆ ನೋಡಿದ ಮೇಲೆ ಅವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೇಳಿ ಬಂದವು. ಇದೀಗ ತ್ರಿಶಾ ಅವರು ತಾಳಿ ಹಾಕಿರುವ ವಿಡಿಯೋವೊಂದು ವೈರಲ್ ಆಗಿದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ತ್ರಿಶಾ ಅವರ ಕುತ್ತಿಗೆಯಲ್ಲಿ ಮಂಗಳಸೂತ್ರ ಹೋಲುವ ಲಾಕೆಟ್ ಕಂಡುಬಂದಿದೆ. ಇದು ಕೇರಳ ಕ್ರಿಶ್ಚಿಯನ್ ಶೈಲಿಯ ಮಂಗಳಸೂತ್ರದಂತೆ ಕಾಣುತ್ತದೆ. ಹೀಗಾಗಿ ನೆಟ್ಟಿಗರ ಗಮನ ತ್ರಿಶಾ ಅವರ ಮೇಲಿದೆ. ಈ ಇಬ್ಬರು ಗುಟ್ಟಾಗಿ ಏನಾದರೂ ಮದುವೆ ಆದ್ರಾ ಅಥವಾ ನಿಶ್ಚಿತಾರ್ಥ ಮಾಡಿಕೊಂಡರೇ ಎಂಬ ಅನುಮಾನ ಮೂಡಿದೆ.
ವೈರಲ್ ಮಂಗಳಸೂತ್ರದ ವಿಡಿಯೋದ ಅಸಲಿಯತ್ತೇನು?
ಸದ್ಯ ವೈರಲ್ ಆದ ವಿಡಿಯೋದ ಹಿಂದಿನ ಸತ್ಯಾಂಶದ ಬಗ್ಗೆ ತನಿಖೆ ನಡೆಸಿದಾಗ ಇದು ಇತ್ತೀಚಿನದ್ದಲ್ಲ ಎಂಬ ಮಾಹಿತಿ ಗೊತ್ತಾಗಿದೆ. ನಟಿ ತ್ರಿಶಾ ಅಭಿನಯದ 'ಥಗ್ ಲೈಫ್' ಚಲನಚಿತ್ರದ ಪ್ರಚಾರದ ಸಂದರ್ಭದಲ್ಲಿ ಚಿತ್ರೀಕರಿಸಲಾದ ಹಳೆಯ ವಿಡಿಯೋ ಇದಾಗಿದೆ. ಆ ವಿಡಿಯೋ ಹರಿದಾಡುತ್ತಿದ್ದು, ಅದಕ್ಕೆ ನೆಟ್ಟಿಗರು ಇದು ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋನಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ, ದಳಪತಿ ವಿಜಯ್ ವೈಯಕ್ತಿಕ ಜೀವನದ ಏರುಪೇರುಗಳು ಮತ್ತು ತ್ರಿಶಾ ಜೊತೆಗಿನ ಸ್ನೇಹ ತಮಿಳು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಈ ವೈರಲ್ ಮಂಗಳಸೂತ್ರದ ವಿಡಿಯೋ ಇಬ್ಬರ ನಡುವಿನ ಮದುವೆ ವದಂತಿಗಳಿಗೆ ಮತ್ತಷ್ಟು ವೇಗ ನೀಡಿದೆ. ಸದ್ಯ ಈ ಇಬ್ಬರು ತಮ್ಮ ಮದುವೆ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.
ನಾಳೆ ತ್ರಿಶಾ ಕುರಿತು ಸೀಕ್ರೆಟ್ ರಿವೀಲ್ ಪೋಸ್ಟ್
ಇನ್ನೊಂದೆಡೆ ತ್ರಿಶಾ ಅವರ ಆಪ್ತ ಗೆಳತಿ ವರಲಕ್ಷ್ಮಿ ಶರತ್‌ಕುಮಾರ್ ಅವರು ನಾಳೆ ತ್ರಿಶಾ ಅವರ ಕುರಿತ ವಿಶೇಷ ಘೋಷಣೆ ಮಾಡುವ ಸುಳಿವು ನೀಡುವ ಪೋಸ್ಟರ್ ಹಂಚಿಕೊಂಡಿದ್ದಾರೆ. ಇದು ಸಹ ಅಭಿಮಾನಿಗಳಲ್ಲಿ ಕುತೂಹಲ ಕೆರಳಲು ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಊಹಾಪೋಹ ಸೃಷ್ಟಿಸಿದೆ. ನಾಳೆ ತ್ರಿಶಾ ಅವರ ವೈಯಕ್ತಿಕ ಜೀವನದ ಬಗ್ಗೆ ಅಥವಾ ವೃತ್ತಿಯ ಕುರಿತು ಯಾವ ನಿರ್ಧಾರ ಪ್ರಕಟವಾಗಲಿದೆ ಎಂದು ಫ್ಯಾನ್ಸ್ ಕಾಯುವಂತಾಗಿದೆ. ಪೋಸ್ಟ್ ಬಗೆಗಿನ ಅಪ್‌ಡೇಟ್ ಗಾಗಿ ಜನರು ಕಾಯುವಂತಾಗಿದೆ.













Click it and Unblock the Notifications