• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬುದ್ಧನ ಪ್ರತಿಮೆ ನಾಶಪಡಿಸಿದ್ದಕ್ಕೆ ತಾಲಿಬಾನಿಗಳಿಗೆ ಈ ಶಿಕ್ಷೆ

|
Google Oneindia Kannada News

ಲಕ್ನೋ, ನವೆಂಬರ್ 15: ಬುದ್ಧನ ಪ್ರತಿಮೆ ನಾಶಪಡಿಸಿದ್ದಕ್ಕೆ ತಾಲಿಬಾನಿಗಳಿಗೆ ಈ ಶಿಕ್ಷೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

20 ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಮಾಡಿದ್ದಕ್ಕಾಗಿ ತಾಲಿಬಾನಿಗಳ ಮೇಲೆ ಅಮೆರಿಕಾ ಬಾಂಬ್​ ದಾಳಿ ನಡೆಸಿದೆ. ಇದು ಅವರಿಗೆ ದೇವರು ನೀಡಿರುವ ಶಿಕ್ಷೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಲಿಬಾನ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಗವಾನ್ ಬುದ್ಧ ಯಾವಾಗಲೂ ಅಹಿಂಸೆ, ಸಂದೇಶ ಶಾಂತಿ, ಸಹೋದರತ್ವವನ್ನು ಪ್ರತಿಪಾದಿಸುತ್ತಿದ್ದ. ಅಂತ ವ್ಯಕ್ತಿಯ ಪ್ರತಿಮೆಯನ್ನು ನಾಶಪಡಿಸಿರುವುದಕ್ಕೆ ದೇವರು ಈ ರೀತಿ ಶಿಕ್ಷೆ ನೀಡಿದ್ದಾನೆ ಎಂದು ಮುಖ್ಯಮಂತ್ರಿ ಹೇಳಿದರು.
ತಾಲಿಬಾನಿಗಳ ಅನಾಗರಿಕತೆಯನ್ನು ಜಗತ್ತು ನೋಡಿದೆ. ಬುದ್ಧ ಎಂದಿಗೂ ಯುದ್ಧ ಮಾಡಲು ಹೇಳಿಲ್ಲ. ಆತ ಯಾವಾಗಲೂ ಮಾನವೀಯತೆಗೆ ಸ್ಫೂರ್ತಿಯ ಮೂಲ ಮತ್ತು ಭಕ್ತಿಯ ಕೇಂದ್ರವಾಗಿರುತ್ತಾನೆ. ಯಾರೂ ಕೂಡ ಇಂತ ವ್ಯಕ್ತಿಯ ಪ್ರತಿಮೆಯನ್ನು ನಾಶಪಡಿಸಿದ ದೃಶ್ಯವನ್ನು ಮರೆಯಬಾರದು ಎಂದರು.
ಲಕ್ನೋದಲ್ಲಿ ನಡೆದ ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, 20 ವರ್ಷಗಳ ಹಿಂದೆ ಅಫ್ಘಾನಿಸ್ತಾನದ ಬಾಮಿಯಾನ್ ನಲ್ಲಿ ತಾಲಿಬಾನಿಗಳು 2,500 ವರ್ಷಗಳಷ್ಟು ಹಳೆಯ ಗೌತಮ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರು.

ಭಾರತ ಸೇರಿ ಯಾವುದೇ ಯಾವುದೇ ದೇಶಗಳ ಜತೆ ತಾಲಿಬಾನ್ ಸಂಘರ್ಷವನ್ನು ಬಯಸುವುದಿಲ್ಲ ಎಂದು ತಾಲಿಬಾನ್ ನೇತೃತ್ವದ ಹಂಗಾಮಿ ಸರ್ಕಾರದ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಹೇಳಿದ್ದಾರೆ.

ಬಿಬಿಸಿ ಉರ್ದು ಜೊತೆ ಮಾತನಾಡುವಾಗ ಮುತ್ತಖಿ ಈ ರೀತಿಯ ಹೇಳಿಕೆ ನೀಡಿದ್ದಾನೆ. ಇರಾನ್, ಖಝಾಕಿಸ್ತಾನ್, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಅಧಿಕಾರಿಗಳು ಭಾಗವಹಿಸಿದ್ದ ನವದೆಹಲಿಯಲ್ಲಿ ಅಫ್ಘಾನಿಸ್ತಾನದ ಕುರಿತು ಎಂಟು ರಾಷ್ಟ್ರಗಳ ಸಂವಾದದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆ ವಹಿಸಿದ ಕೆಲವು ದಿನಗಳ ನಂತರ ಅವರ ಸಂದರ್ಶನ ಆಗಿದೆ.

ಅಫ್ಘಾನಿಸ್ತಾನ ಕುರಿತಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನೇತೃತ್ವದಲ್ಲಿ ಇರಾನ್, ಕಝಾಕಿಸ್ತಾನ್, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಅಧಿಕಾರಿಗಳ ಮಾತುಕತೆ ನಡೆದ ನಂತರ ಅಮೀರ್ ಖಾನ್ ಮುತ್ತಖಿ ಸಂದರ್ಶನ ನಡೆಸಲಾಗಿದೆ.

ಮಹಿಳಾ ಶಿಕ್ಷಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುತ್ತಕಿ, ಅಫ್ಘಾನ್ ಮಹಿಳೆಯರನ್ನು ವಿವಿಧ ಕ್ಷೇತ್ರಗಳಿಂದ ಹೊರಗಿಡಲಾಗುತ್ತಿದೆ ಎಂಬುದನ್ನು ನಿರಾಕರಿಸಿದರು. ಮಹಿಳೆಯರು ಆರೋಗ್ಯ ಕ್ಷೇತ್ರದಲ್ಲಿ ಶೇಕಡಾ 100 ರಷ್ಟು ತೊಡಗಿಸಿಕೊಂಡಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲೂ ಬೋಧನೆ ಮಾಡುತ್ತಿದ್ದಾರೆ. ಅಗತ್ಯವಿರುವ ಪ್ರತಿಯೊಂದು ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮುತ್ತಕಿ ತಿಳಿಸಿದ್ದಾರೆ.

ಇದು ಮಹಿಳಾ ಪತ್ರಕರ್ತರೊಬ್ಬರೊಂದಿಗೆ ನಡೆಸಿದ ಮೊದಲ ಸಂದರ್ಶನವಾಗಿದೆ. ತಾಲಿಬಾನ್ ಸರ್ಕಾರದ ಅಡಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಣ ಸಂಬಂಧ ಬಗ್ಗೆ ಪತ್ರಕರ್ತೆ ಕೇಳಿದ್ದಾಗ ಮುತ್ತಕಿ ಈ ರೀತಿಯ ಪ್ರತಿಕ್ರಿಯಿದ್ದಾನೆ. ಅಫ್ಘಾನಿಸ್ತಾನ ಬೇರೆ ಯಾವುದೇ ದೇಶದೊಂದಿಗೆ ಸಂಘರ್ಷವನ್ನು ಹೊಂದಲು ಅಥವಾ ನಮ್ಮ ರಾಷ್ಟ್ರದ ಮೇಲೆ ಪರಿಣಾಮ ಬೀರುವ ಸವಾಲುಗಳನ್ನು ಹೊಂದಲು ನಾವು ಬಯಸುವುದಿಲ್ಲ. ಆದ್ದರಿಂದ, ನಾವು ಈ ವಿಷಯದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.

   T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

   ಅಫ್ಘಾನಿಸ್ತಾನವು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿರುವ ಬಗ್ಗೆ ಚೀನಾ ಅಥವಾ ಪಾಕಿಸ್ತಾನದಿಂದ ಪ್ರತಿಕ್ರಿಯೆ ಬಂದಿದ್ದೇಯೆ ಎಂಬ ಪ್ರಶ್ನೆಗೆ ನೇರ ಉತ್ತರದ ಬದಲಿಗೆ, ಮಾಸ್ಕೋದಲ್ಲಿ ಇತ್ತೀಚಿನ ಸಭೆಗಳನ್ನು ಮುತ್ತಕಿ ಉಲ್ಲೇಖಿಸಿದರು.

   English summary
   Uttar Pradesh Chief Minister Yogi Adityanath on Sunday lashed out at the Taliban, which, he alleged, destroyed a statue of Gautam Buddha in Afghanistan 20 years ago.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X