ಉತ್ತರ ಪ್ರದೇಶ ಸಿಎಂ ಕಚೇರಿ ಎದುರು ಬೆಂಕಿ ಹಚ್ಚಿಕೊಂಡ ಅಮ್ಮ-ಮಗಳು
ಲಕ್ನೌ, ಜುಲೈ 18: ಉತ್ತರ ಪ್ರದೇಶದ ಸಿಎಂ ಕಚೇರಿ ಎದುರು ತಾಯಿ ಮತ್ತು ಮಗಳು ಸ್ವಯಂ ಬೆಂಕಿ ಹಚ್ಚಿಕೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. ಅಮ್ಮ-ಮಗಳು ಬೆಂಕಿ ಹಚ್ಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಅಮೇಥಿಯಲ್ಲಿ ನಡೆದ ಭೂ ವಿವಾದ ಪ್ರಕರಣವೊಂದರಲ್ಲಿ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಅಮ್ಮ ಮತ್ತು ಮಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮೌನವನ್ನು ಪ್ರತಿಭಟಿಸಿ ಲಕ್ನೌನಲ್ಲಿರುವ ಸಿಎಂ ಕಚೇರಿ ಎದುರು ಸ್ವಯಂ ಬೆಂಕಿಗೆ ಹಚ್ಚಿಕೊಂಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ತಾಯಿ-ಮಗಳು ಇಬ್ಬರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಿಸಿದ್ದಾರೆ. ಇಬ್ಬರಿಗೂ ತೀವ್ರವಾಗಿ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶುಕ್ರವಾರ ಸಂಜೆ 5.40ರ ಸಮಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ಎದುರು ಉನ್ನತ ಮಟ್ಟದ ಭದ್ರತೆಯ ನಡುವೆ ಈ ಘಟನೆ ನಡೆದಿರುವುದು ಚರ್ಚೆಗೆ ಕಾರಣವಾಗಿದೆ.
'ಅಮೇಥಿಯ ಜಾಮೋ ಪ್ರದೇಶದಲ್ಲಿ ಅವರಿಗೆ ಸ್ವಲ್ಪ ಆಸ್ತಿ ವಿವಾದವಿತ್ತು. ಲಕ್ನೌಗೆ ಬಂದಿದ್ದರು ಆದರೆ ಯಾರನ್ನೂ ಸಂಪರ್ಕಿಸಲಿಲ್ಲ. ಲೋಕ ಭವನದ ಮುಂದೆ ತಮ್ಮನ್ನು ತಾವು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications