ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಆರಂಭ

|
Google Oneindia Kannada News

ಲಕ್ನೋ ಫೆಬ್ರುವರಿ 13: ಯುಪಿಯಲ್ಲಿ ಎರಡನೇ ಹಂತದ ಚುನಾವಣೆ ಇಂದು (ಫೆಬ್ರವರಿ 14) ಆರಂಭಗೊಂಡಿದೆ. ಒಂಬತ್ತು ಜಿಲ್ಲೆಗಳ 55 ವಿಧಾನಸಭಾ ಕ್ಷೇತ್ರಗಳಿಗೆ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 17,000 ಮತಗಟ್ಟೆಗಳಲ್ಲಿ ಸುಮಾರು 2 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಎರಡನೇ ಹಂತದಲ್ಲಿ ಒಟ್ಟು 2,01,42,441 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು ಅವರಲ್ಲಿ 1,07,61,476 ಪುರುಷ ಮತದಾರರು ಮತ್ತು 93,79,704 ಮಹಿಳೆಯರು ಮತ್ತು 1,261 ತೃತೀಯಲಿಂಗ ಮತದಾರರಿದ್ದಾರೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.

ಸಹರಾನ್‌ಪುರ್, ಮೊರಾದಾಬಾದ್, ಬರೇಲಿ, ರಾಮ್‌ಪುರ್, ಬಿಜ್ನೋರ್, ಅಮ್ರೋಹಾ (ಜೆ.ಪಿ. ನಗರ), ಸಂಭಾಲ್ (ಭೀಮ್ ನಗರ), ಬುದೌನ್ ಮತ್ತು ಶಹಜಹಾನ್‌ಪುರ ಒಟ್ಟು ಒಂಬತ್ತು ಜಿಲ್ಲೆಗಳ 55 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಪ್ರಮುಖ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳೆಂದರೆ ರಾಮ್‌ಪುರದಿಂದ ಕಾಂಗ್ರೆಸ್‌ನ ನವಾಬ್ ಕಾಜಿಮ್ ಅಲಿ ಖಾನ್, ಬರೇಲಿ ಕ್ಯಾಂಟ್‌ನಿಂದ ಸಮಾಜವಾದಿ ಪಕ್ಷದ ಸುಪ್ರಿಯಾ ಅರಾನ್, ಗಂಗೊದಿಂದ ಕೀರತ್ ಸಿಂಗ್ ಗುರ್ಜರ್ ಮತ್ತು ನೌಗಾವಾನ್ ಕ್ಷೇತ್ರದಿಂದ ಬಿಜೆಪಿಯ ದೇವೇಂದ್ರ ನಾಗ್ಪಾಲ್ ಸ್ಪರ್ಧಿಸಲಿದ್ದಾರೆ.

ಉತ್ತರಪ್ರದೇಶ ಚುನಾವಣೆ 2022 ಹಂತ II: ಮತದಾನದ ದಿನಾಂಕ, ಸಮಯ, ವೇಳಾಪಟ್ಟಿ
ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಪಟ್ಟಿ

ಸ.ನಂ ಕ್ಷೇತ್ರ ಜಿಲ್ಲೆ

1 ಬೆಹತ್ ಸಹರಾನ್ಪುರ್

2 ನಾಕುರ್ ಸಹರಾನ್ಪುರ್

3 ಸಹರಾನ್ಪುರ್ ನಗರ ಸಹರಾನ್ಪುರ್

4 ಸಹರಾನ್ಪುರ್ ಸಹರಾನ್ಪುರ್

5 ದೇವಬಂದ್ ಸಹರಾನ್ಪುರ್

6 ರಾಂಪುರ ಮಣಿಹರನ್ ಸಹರಾನ್ಪುರ್

7 ಗಂಗೋಹ್ ಸಹರಾನ್ಪುರ್

8 ನಜೀಬಾಬಾದ್ ಬಿಜ್ನೋರ್

9 ನಾಗಿನಾ ಬಿಜ್ನೋರ್

10 ಬರ್ಹಾಪುರ ಬಿಜ್ನೋರ್

11 ಧಂಪುರ ಬಿಜ್ನೋರ್

12 ನೆಹತೂರ್ ಬಿಜ್ನೋರ್

13 ಬಿಜ್ನೋರ್ ಬಿಜ್ನೋರ್

14 ಚಾಂದಪುರ ಬಿಜ್ನೋರ್

15 ನೂರ್ಪುರ್ ಬಿಜ್ನೋರ್

16 ಕಾಂತ್ ಮೊರಾದಾಬಾದ್

17 ಠಾಕುರ್ದ್ವಾರ ಮೊರಾದಾಬಾದ್

18 ಮೊರಾದಾಬಾದ್ ಗ್ರಾಮಾಂತರ ಮೊರಾದಾಬಾದ್

19 ಮೊರಾದಾಬಾದ್ ನಗರ ಮೊರಾದಾಬಾದ್

20 ಕುಂದರ್ಕಿ ಮೊರಾದಾಬಾದ್

21 ಬಿಲಾರಿ ಮೊರಾದಾಬಾದ್

22 ಚಂಡೌಸಿ ಸಂಭಾಲ್

23 ಅಸ್ಮೋಲಿ ಸಂಭಾಲ್

24 ಸಂಭಾಲ್ ಸಂಭಾಲ್

25 ಸೂರ್ ರಾಂಪುರ

26 ಚಾಮರಾವ್ ರಾಂಪುರ

27 ಬಿಲಾಸ್ಪುರ್ ರಾಂಪುರ

28 ರಾಂಪುರ ರಾಂಪುರ

29 ಮಿಲಾಕ್ ರಾಂಪುರ

30 ಧನೌರ ಅಮ್ರೋಹಾ

31 ನೌಗಾವಾನ್ ಸಾದತ್ ಅಮ್ರೋಹಾ

32 ಅಮ್ರೋಹಾ ಅಮ್ರೋಹಾ

33 ಹಾಸನಪುರ ಅಮ್ರೋಹಾ

34 ಗುನ್ನೌರ್ ಸಂಭಾಲ್

35 ಬಿಸೌಲಿ ಬದೌನ್

36 ಸಹಸ್ವಾನ್ ಬದೌನ್

37 ಬಿಲ್ಸಿ ಬದೌನ್

38 ಬದೌನ್ ಬದೌನ್

39 ಶೇಖಪುರ ಬದೌನ್

40 ದತ್ತಗಂಜ್ ಬದೌನ್

41 ಬಹೇರಿ ಬರೇಲಿ

42 ಮೀರಗಂಜ್ ಬರೇಲಿ

43 ಭೋಜಿಪುರ ಬರೇಲಿ

44 ನವಾಬ್‌ಗಂಜ್ ಬರೇಲಿ

45 ಫರೀದಪುರ ಬರೇಲಿ

46 ಬಿತಾರಿ ಚೈನ್ಪುರ್ ಬರೇಲಿ

47 ಬರೇಲಿ ಬರೇಲಿ

48 ಬರೇಲಿ ಕ್ಯಾಂಟ್. ಬರೇಲಿ

49 ಅಒನ್ಲಾ ಬರೇಲಿ

50 ಕತ್ರಾ ಶಹಜಹಾನ್‌ಪುರ

51 ಜಲಾಲಾಬಾದ್ ಶಹಜಹಾನ್‌ಪುರ

52 ತಿಲ್ಹರ್ ಶಹಜಹಾನ್‌ಪುರ

53 ಪೊವಯನ್ ಶಹಜಹಾನ್‌ಪುರ

54 ಶಹಜಹಾನ್‌ಪುರ ಶಹಜಹಾನ್‌ಪುರ

55 ದಾದ್ರಾಲ್ ಶಹಜಹಾನ್‌ಪುರ

Voting Begins in the Second Phase of Uttar Pradesh Assembly Elections

2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ, ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 55 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ಇನ್ನೂ ಸಮಾಜವಾದಿ ಪಕ್ಷ (ಎಸ್‌ಪಿ) 13 ಸ್ಥಾನಗಳು, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 2 ಸ್ಥಾನಗಳನ್ನು ಗಳಿಸಿತ್ತು.

ಉತ್ತರಪ್ರದೇಶ ಚುನಾವಣೆ 2022 ಹಂತ 1: ಮತದಾನದ ದಿನಾಂಕ, ಸಮಯ, ವೇಳಾಪಟ್ಟಿ
ಬಿಜೆಪಿ ನಾಯಕರ ಇತ್ತೀಚಿನ ಮುಸ್ಲಿಂ ವಿರೋಧ ಹೇಳಿಕೆಗಳು, ಭಾಷಣಗಳು ಈ ಬಾರಿ ಹಿಂದುಳಿದ ಸಮುದಾಯಗಳಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಕಠಿಣವಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 55 ಸ್ಥಾನಗಳಲ್ಲಿ ಕಠಿಣ ಹೋರಾಟವನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಪ್ರದೇಶದಲ್ಲಿ ಬರೇಲಿ ಮತ್ತು ದೇವಬಂದ್ ನಲ್ಲಿ ದೇವಬಂದಿ ಪಂಗಡಗಳು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ಬಾರಿ ಪಶ್ಚಿಮ ಉತ್ತರ ಪ್ರದೇಶದ ಮತದಾರರಲ್ಲಿ ಪ್ರಭಾವ ಹೊಂದಿರುವ ಆರ್‌ಎಲ್‌ಡಿ ಮತ್ತು ಎಸ್‌ಪಿದೊಂದಿಗೆ ಮೈತ್ರಿ ಮಾಡಿಕೊಂಡಿದೆ ಮತ್ತು ಎರಡೂ ಪಕ್ಷಗಳು ಜಾಟ್, ಶಾಕ್ಯ, ಸೈನಿ, ಕುಶ್ವಾಹ, ಮೌರ್ಯ ಮತ್ತು ಕೊಯಿರಿ ಮೇಲೆ ಸಾಕಷ್ಟು ಹಿಡಿತ ಸಾಧಿಸಿವೆ. ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಸಮುದಾಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ಇನ್ನೂ ಚುನಾವಣಾ ದಿನಾಂಕಗಳ ಘೋಷಣೆಗೆ ಮುನ್ನ ಬಿಡುಗಡೆಯಾದ ಅಭಿಪ್ರಾಯ ಸಮೀಕ್ಷೆಗಳಲ್ಲೂ ಆಡಳಿತಾರೂಢ ಬಿಜೆಪಿ ಪ್ರತಿಪಕ್ಷ ಸಮಾಜವಾದಿ ಪಕ್ಷಕ್ಕಿಂತ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಕಳೆದ ಬಾರಿ 300ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 200ಕ್ಕೂ ಹೆಚ್ಚು ಸ್ಥಾನ ಪಡೆಯುವ ನಿರೀಕ್ಷೆ ಇದೆ. ಅನೇಕ ಸ್ಥಾನಗಳಲ್ಲಿ ಕಠಿಣ ಪೈಪೋಟಿ ಇದೆ ಎನ್ನುತ್ತವೆ ಸಮೀಕ್ಷೆಗಳು. ಹೀಗಾಗಿ ಮತದಾರರು ಯಾರ ಕೈ ಹಿಡಿಯುತ್ತಾರೆಂದು ಕಾದು ನೋಡಬೇಕಿದೆ.

English summary
The second phase of polls in UP has begun today (February 14). There are 586 candidates in 55 constituencies in nine districts. About 2 crore voters are eligible to vote in the second phase of the 17,000 booths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X