ಉತ್ತರಪ್ರದೇಶ ಚುನಾವಣೆ 2022 ಹಂತ II: ಮತದಾನದ ದಿನಾಂಕ, ಸಮಯ, ವೇಳಾಪಟ್ಟಿ

ಲಕ್ನೋ ಫೆಬ್ರುವರಿ 13: ಯುಪಿಯಲ್ಲಿ ಎರಡನೇ ಹಂತದ ಚುನಾವಣೆ ಸೋಮವಾರ (ಫೆಬ್ರವರಿ 14) ನಡೆಯಲಿದೆ. ಒಂಬತ್ತು ಜಿಲ್ಲೆಗಳ 55 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಶನಿವಾರ ( ಫೆಬ್ರವರಿ 12) ಎರಡನೇ ಹಂತದ ಪ್ರಚಾರ ಮುಕ್ತಾಯವಾಗಿದೆ. ಯುಪಿ ಚುನಾವಣೆ 2022 ರ ಎರಡನೇ ಹಂತದಲ್ಲಿ, 55 ವಿಧಾನಸಭಾ ಸ್ಥಾನಗಳಿಗೆ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡನೇ ಹಂತದಲ್ಲಿ ಸುಮಾರು 17,000 ಮತಗಟ್ಟೆಗಳಲ್ಲಿ ಸುಮಾರು 2 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ.

ಯುಪಿ ಚುನಾವಣೆ 2022 ಹಂತ-II ಚುನಾವಣೆ ಫೆಬ್ರವರಿ 14 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದ್ದು, ರಾಜ್ಯ ಚುನಾವಣಾ ಆಯೋಗವು ಮಾರ್ಚ್ 12 ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ 2,01,42,441 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಅವರಲ್ಲಿ 1,07,61,476 ಪುರುಷ ಮತದಾರರು ಮತ್ತು 93,79,704 ಮಹಿಳೆಯರು ಮತ್ತು 1,261 ತೃತೀಯಲಿಂಗಿ ಮತದಾರರಿದ್ದಾರೆ.

ಯುಪಿ ಚುನಾವಣೆ: ಇವಿಎಂಗಳಲ್ಲಿ ಅಭ್ಯರ್ಥಿಗಳ ಭವಿಷ್ಯ, ಒಟ್ಟು ಶೇ.60.17 ಮತದಾನ
ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಒಂಬತ್ತು ಎಸಿಗಳು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ಹರಡಿರುವ 55 ವಿಧಾನಸಭಾ ಸ್ಥಾನಗಳಿಗೆ ಒಟ್ಟು 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವುಗಳಲ್ಲಿ ಸಹರಾನ್‌ಪುರ್, ಮೊರಾದಾಬಾದ್, ಬರೇಲಿ, ರಾಮ್‌ಪುರ್, ಬಿಜ್ನೋರ್, ಅಮ್ರೋಹಾ (ಜೆ.ಪಿ. ನಗರ), ಸಂಭಾಲ್ (ಭೀಮ್ ನಗರ), ಬುದೌನ್ ಮತ್ತು ಶಹಜಹಾನ್‌ಪುರ ಜಿಲ್ಲೆಗಳು ಸೇರಿವೆ. ಪ್ರಮುಖ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳೆಂದರೆ ರಾಮ್‌ಪುರದಿಂದ ಕಾಂಗ್ರೆಸ್‌ನ ನವಾಬ್ ಕಾಜಿಮ್ ಅಲಿ ಖಾನ್, ಬರೇಲಿ ಕ್ಯಾಂಟ್‌ನಿಂದ ಸಮಾಜವಾದಿ ಪಕ್ಷದ ಸುಪ್ರಿಯಾ ಅರಾನ್, ಗಂಗೊದಿಂದ ಕೀರತ್ ಸಿಂಗ್ ಗುರ್ಜರ್ ಮತ್ತು ನೌಗಾವಾನ್ ಕ್ಷೇತ್ರದಿಂದ ಬಿಜೆಪಿಯ ದೇವೇಂದ್ರ ನಾಗ್ಪಾಲ್ ಸ್ಪರ್ಧಿಸಲಿದ್ದಾರೆ.

UP Election 2022 Phase II Voting Date, Time, Results, Candidates, Key Constituencies details

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಪಟ್ಟಿ

ಸ.ನಂ ಕ್ಷೇತ್ರ ಜಿಲ್ಲೆ
1 ಬೆಹತ್ ಸಹರಾನ್ಪುರ್

2 ನಾಕುರ್ ಸಹರಾನ್ಪುರ್

3 ಸಹರಾನ್ಪುರ್ ನಗರ ಸಹರಾನ್ಪುರ್

4 ಸಹರಾನ್ಪುರ್ ಸಹರಾನ್ಪುರ್

5 ದೇವಬಂದ್ ಸಹರಾನ್ಪುರ್

6 ರಾಂಪುರ ಮಣಿಹರನ್ ಸಹರಾನ್ಪುರ್

7 ಗಂಗೋಹ್ ಸಹರಾನ್ಪುರ್

8 ನಜೀಬಾಬಾದ್ ಬಿಜ್ನೋರ್

9 ನಾಗಿನಾ ಬಿಜ್ನೋರ್

10 ಬರ್ಹಾಪುರ ಬಿಜ್ನೋರ್

11 ಧಂಪುರ ಬಿಜ್ನೋರ್

12 ನೆಹತೂರ್ ಬಿಜ್ನೋರ್

13 ಬಿಜ್ನೋರ್ ಬಿಜ್ನೋರ್

14 ಚಾಂದಪುರ ಬಿಜ್ನೋರ್

15 ನೂರ್ಪುರ್ ಬಿಜ್ನೋರ್

16 ಕಾಂತ್ ಮೊರಾದಾಬಾದ್

17 ಠಾಕುರ್ದ್ವಾರ ಮೊರಾದಾಬಾದ್

18 ಮೊರಾದಾಬಾದ್ ಗ್ರಾಮಾಂತರ ಮೊರಾದಾಬಾದ್

19 ಮೊರಾದಾಬಾದ್ ನಗರ ಮೊರಾದಾಬಾದ್

20 ಕುಂದರ್ಕಿ ಮೊರಾದಾಬಾದ್

21 ಬಿಲಾರಿ ಮೊರಾದಾಬಾದ್

22 ಚಂಡೌಸಿ ಸಂಭಾಲ್

23 ಅಸ್ಮೋಲಿ ಸಂಭಾಲ್

24 ಸಂಭಾಲ್ ಸಂಭಾಲ್

25 ಸೂರ್ ರಾಂಪುರ

26 ಚಾಮರಾವ್ ರಾಂಪುರ

27 ಬಿಲಾಸ್ಪುರ್ ರಾಂಪುರ

28 ರಾಂಪುರ ರಾಂಪುರ

29 ಮಿಲಾಕ್ ರಾಂಪುರ

30 ಧನೌರ ಅಮ್ರೋಹಾ

31 ನೌಗಾವಾನ್ ಸಾದತ್ ಅಮ್ರೋಹಾ

32 ಅಮ್ರೋಹಾ ಅಮ್ರೋಹಾ

33 ಹಾಸನಪುರ ಅಮ್ರೋಹಾ

34 ಗುನ್ನೌರ್ ಸಂಭಾಲ್

35 ಬಿಸೌಲಿ ಬದೌನ್

36 ಸಹಸ್ವಾನ್ ಬದೌನ್

37 ಬಿಲ್ಸಿ ಬದೌನ್

38 ಬದೌನ್ ಬದೌನ್

39 ಶೇಖಪುರ ಬದೌನ್

40 ದತ್ತಗಂಜ್ ಬದೌನ್

41 ಬಹೇರಿ ಬರೇಲಿ

42 ಮೀರಗಂಜ್ ಬರೇಲಿ

43 ಭೋಜಿಪುರ ಬರೇಲಿ

44 ನವಾಬ್‌ಗಂಜ್ ಬರೇಲಿ

45 ಫರೀದಪುರ ಬರೇಲಿ

46 ಬಿತಾರಿ ಚೈನ್ಪುರ್ ಬರೇಲಿ

47 ಬರೇಲಿ ಬರೇಲಿ

48 ಬರೇಲಿ ಕ್ಯಾಂಟ್. ಬರೇಲಿ

49 ಅಒನ್ಲಾ ಬರೇಲಿ

50 ಕತ್ರಾ ಶಹಜಹಾನ್‌ಪುರ

51 ಜಲಾಲಾಬಾದ್ ಶಹಜಹಾನ್‌ಪುರ

52 ತಿಲ್ಹರ್ ಶಹಜಹಾನ್‌ಪುರ

53 ಪೊವಯನ್ ಶಹಜಹಾನ್‌ಪುರ

54 ಶಹಜಹಾನ್‌ಪುರ ಶಹಜಹಾನ್‌ಪುರ

55 ದಾದ್ರಾಲ್ ಶಹಜಹಾನ್‌ಪುರ

2017 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ, ಸೋಮವಾರ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 55 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆದ್ದಿತ್ತು. ಇನ್ನೂ ಸಮಾಜವಾದಿ ಪಕ್ಷ (ಎಸ್‌ಪಿ) 13 ಸ್ಥಾನಗಳು, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 2 ಸ್ಥಾನಗಳನ್ನು ಗಳಿಸಿತ್ತು.

ಉತ್ತರಪ್ರದೇಶ ಚುನಾವಣೆ 2022 ಹಂತ 1: ಮತದಾನದ ದಿನಾಂಕ, ಸಮಯ, ವೇಳಾಪಟ್ಟಿ
ಬಿಜೆಪಿ ನಾಯಕರ ಇತ್ತೀಚಿನ ಮುಸ್ಲಿಂ ವಿರೋಧ ಹೇಳಿಕೆಗಳು, ಭಾಷಣಗಳು ಈ ಬಾರಿ ಹಿಂದುಳಿದ ಸಮುದಾಯಗಳಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಕಠಿಣವಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 55 ಸ್ಥಾನಗಳಲ್ಲಿ ಕಠಿಣ ಹೋರಾಟವನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಪ್ರದೇಶದಲ್ಲಿ ಬರೇಲಿ ಮತ್ತು ದೇವಬಂದ್ ನಲ್ಲಿ ದೇವಬಂದಿ ಪಂಗಡಗಳು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಎಸ್‌ಪಿ 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಜತೆ ಮೈತ್ರಿ ಮಾಡಿಕೊಂಡಿತ್ತು. ಎರಡೂ ಚುನಾವಣೆಗಳಲ್ಲಿ ಈ ಭಾಗದಲ್ಲಿ ಬಿಜೆಪಿಗೆ ಹೋಲಿಸಿದರೆ ಮೈತ್ರಿ ರಾಜಕಾರಣ ಕೆಲಸ ಮಾಡಿದೆ. ಆದರೆ ಈ ಬಾರಿ ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಏಕಾಂಗಿಯಾಗಿ ಕಣಕ್ಕಿಳಿದಿರುವುದರಿಂದ ಮತಗಳ ವಿಭಜನೆಯಾಗಲಿದ್ದು, ಬಿಜೆಪಿಗೆ ಲಾಭವಾಗಲಿದೆ ಎಂಬುದು ವಿಮರ್ಶಕರ ವಾದ. ಬಿಎಸ್‌ಪಿ ಈ ಪ್ರದೇಶದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ದಲಿತ ಮತ್ತು ಮುಸ್ಲಿಂ ಮತಗಳ ವಿಭಜನೆಯ ನಿರೀಕ್ಷೆಯೂ ಇದೆ.

ಈ ಬಾರಿ ಪಶ್ಚಿಮ ಉತ್ತರ ಪ್ರದೇಶದ ಮತದಾರರಲ್ಲಿ ಪ್ರಭಾವ ಹೊಂದಿರುವ ಆರ್‌ಎಲ್‌ಡಿ ಮತ್ತು ಮಹಾನ್ ದಳದೊಂದಿಗೆ ಎಸ್‌ಪಿ ಮೈತ್ರಿ ಮಾಡಿಕೊಂಡಿದೆ ಮತ್ತು ಎರಡೂ ಪಕ್ಷಗಳು ಜಾಟ್, ಶಾಕ್ಯ, ಸೈನಿ, ಕುಶ್ವಾಹ, ಮೌರ್ಯ ಮತ್ತು ಕೊಯಿರಿ ಮೇಲೆ ಸಾಕಷ್ಟು ಹಿಡಿತ ಸಾಧಿಸುತ್ತವೆ ಎಂದು ನಂಬಲಾಗಿದೆ. ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಸಮುದಾಯದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

Recommended Video

      ಹಿಜಾಬ್ ಧಾರಿಣಿ ಮುಂದಿನ ಪ್ರಧಾನಿಯಾಗೋದು ಗ್ಯಾರೆಂಟಿ ಎಂದ ಓವೈಸಿ | Oneindia Kannada

      ಇನ್ನೂ ಚುನಾವಣಾ ದಿನಾಂಕಗಳ ಘೋಷಣೆಗೆ ಮುನ್ನ ಬಿಡುಗಡೆಯಾದ ಅಭಿಪ್ರಾಯ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿಗೆ ಪ್ರತಿಪಕ್ಷ ಸಮಾಜವಾದಿ ಪಕ್ಷಕ್ಕಿಂತ ಮೇಲುಗೈ ಸಾಧಿಸುವ ಸಾರ್ಧಯತೆ ಇದೆ. ಕಳೆದ ಬಾರಿ 300ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಪಡೆಯುವ ನಿರೀಕ್ಷೆ ಇದೆ. ಅನೇಕ ಸ್ಥಾನಗಳಲ್ಲಿ ಕಠಿಣ ಪೈಪೋಟಿ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+