ಮತದಾನಕ್ಕೂ ಮುನ್ನ ಶಾಯಿ ಬಳಿದರೇ ಬಿಜೆಪಿ ಮುಖಂಡರು?

ಲಕ್ನೋ, ಮೇ 19: ಉತ್ತರಪ್ರದೇಶದ ಸ್ಥಳೀಯ ಬಿಜೆಪಿ ಮುಖಂಡರು ಮತದಾರರ ಕೈಗೆ ಶಾಯಿ ಹಾಕಿದ್ದಾರೆ ಎಂಬ ಆರೋಪ ಎದುರಾಗಿದ್ದು, ಪ್ರತಿಪಕ್ಷಗಳಿಗೆ ಮತದಾನ ಮಾಡುತ್ತಾರೆ ಎಂಬ ನಿರೀಕ್ಷೆ ಮೇರೆಗೆ ಈ ಹಳ್ಳಿಯ ಮತದಾರರ ಕೈಗೆ ಮತದಾನಕ್ಕೂ ಮೊದಲೇ ಶಾಯಿ ಹಚ್ಚಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರತಿಪಕ್ಷಗಳಿಗೆ ಮತ ಹೋಗಲಿದೆ ಎಂಬ ಭಯದ ಮೇಲೆ ಬಿಜೆಪಿ ನಾಯಕರು ಮತದಾರರ ಬೆರಳಿಗೆ ಶಾಯಿ ಅಂಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಹಿಂದೆ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಹಾಗೂ ಎಸ್‌ಪಿ ಮುಖಂಡರಾದ ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಬಿಜೆಪಿಯೇತರ ಮತದಾರರು ಮತಗಟ್ಟೆಗೆ ಬರದಂತೆ ಅಡ್ಡಿ ಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದರು.

villagers allege ink was forcefully applied to their fingers
ಈಗ ಇದಕ್ಕೆ ಪೂರಕವಾಗಿ ಈಗ ಬಿಜೆಪಿಯ ಮೇಲೆ ಈ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಚಾಂಡೌಲಿಯ ಜೀವನಪುರದಲ್ಲಿ ಮತದಾರರ ಬೆರಳಿಗೆ ಶಾಯಿಯನ್ನು ಅಂಟಿಸಲಾಗಿದೆ.

ಮತದಾರರು ಶಾಯಿ ಅಂಟಿಸಿದ್ದನ್ನು ಇಟ್ಟುಕೊಂಡು ಮತ್ತೆ ಮತದಾನ ಮಾಡಲು ಮತಗಟ್ಟೆಗೆ ಬಂದಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಬಿಜೆಪಿ ನಾಯಕರು ಮೊದಲೇ ಬಂದು ಬೆರಳಿಗೆ ಶಾಯಿ ಹಾಕಿ ಹೋಗಿದ್ದಾರೆ. ಹಾಗೆ ಪ್ರತಿಯೊಬ್ಬರಿಗೆ 500ರೂ ನೀಡಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+