Video: ಎಣ್ಣೆ ಏಟಿನಲ್ಲಿ ಹೋಮ್ ಗಾರ್ಡ್ ಅನ್ನು ಥಳಿಸಿದ ಪೊಲೀಸ್!
ಲಕ್ನೋ, ಸೆಪ್ಟೆಂಬರ್ 05: ಉತ್ತರ ಪ್ರದೇಶದ ಪೊಲೀಸ್ ಸಿಬ್ಬಂದಿಯೊಬ್ಬ ಎಣ್ಣೆ ಏಟಿನಲ್ಲಿ ಮಾಡಿದ ಎಡವಟ್ಟಿನಿಂದ ನೌಕರಿಯನ್ನೇ ಕಳೆದುಕೊಂಡಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯಿಂದ ಆ ಪೊಲೀಸಪ್ಪ ಅಮಾನತುಗೊಳ್ಳಲು ಅದೊಂದು ವಿಡಿಯೋ ಕಾರಣ.
ಉತ್ತರ ಪ್ರದೇಶದ ಜಲೌನ್‌ನಲ್ಲಿ ಕುಡಿದ ಅಮಲಿನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ತಮ್ಮ ಜೊತೆಗಿದ್ದ ಹೋಮ್ ಗಾರ್ಡ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಪೊಲೀಸಪ್ಪನ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕುಡಿದ ಮತ್ತಿನಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬ ಹೋಮ್ ಗಾರ್ಡ್ ಅನ್ನು ಅಮಾನುಷವಾಗಿ ಥಳಿಸಿ ಎಳೆದಾಡಿದ್ದಾನೆ. ಇದರ ಮಧ್ಯೆ ಮತ್ತೊಬ್ಬ ಪೊಲೀಸ್ ಜಗಳ ತಡೆಯಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಕಿತ್ತಾಟಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ.

ಹೋಮ್ ಗಾರ್ಡ್ ಅನ್ನು ಥಳಿಸಿದ ಕಾನ್ಸ್ ಟೇಬಲ್ ಅಮಾನತು:
ಉತ್ತರ ಪ್ರದೇಶದ ಜಲೌನ್‌ನಲ್ಲಿ ಕುಡಿದ ಅಮಲಿನಲ್ಲಿ ಹೋಮ್ ಗಾರ್ಡ್ ಅನ್ನು ಥಳಿಸಿದ ಕಾನ್ಸ್ ಟೇಬಲ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಜಲೌನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ. "ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಹೋಮ್ ಗಾರ್ಡ್ ಕಮಾಂಡೆಂಟ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ತನಿಖೆ ಮುಂದುವರಿಸಲಾಗುತ್ತಿದೆ. ಪೊಲೀಸ್ ತನಿಖೆ ಪೂರ್ಣಗೊಳ್ಳುತ್ತಿದ್ದಂತೆ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು," ಎಂದು ರವಿಕುಮಾರ್ ಹೇಳಿದ್ದಾರೆ.
UP: जालौन में खाकी हुई शर्मसार, नशे में धुत सिपाही ने होमगार्ड पर जमकर बरसाए लात-घूंसे
— News24 (@news24tvchannel) September 5, 2022
वीडियो वायरल होने के बाद SP रवि कुमार ने किया लाइन हाजिर pic.twitter.com/vPQwNcfFN5












Click it and Unblock the Notifications